ಬೆಂಗಳೂರು: ರ್ಯಾಪಿಡೋ ಬೈಕ್ ಬುಕ್ ಮಾಡಿದ್ದ ಯುವತಿಗೆ ಪ್ರಯಾಣದ ವೇಳೆ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ತಪ್ಪಿಸಿಕೊಳ್ಳಲು ಆಕೆ ಚಲಿಸುತ್ತಿದ್ದ ಬೈಕ್’ನಿಂದ ಜಿಗಿದಿರುವ ಘಟನೆ ನಡೆದಿದೆ.
ಇದನ್ನೂ ಓದಿ: Mangal Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಮಂಗಳ: ಮುಂದಿನ 45 ದಿನ ಹೆಜ್ಜೆ ಹೆಜ್ಜೆಗೂ ಜಯ; ದಿಢೀರ್ ಧನಲಾಭ
ಸದ್ಯ ಪ್ರಕರಣ ಸಂಬಂಧ ಕೇಸು ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ರ್ಯಾಪಿಡೋ ಬೈಕ್ ಚಾಲಕ ದೀಪಕ್ ರಾವ್ (27)ನನ್ನು ಬಂಧಿಸಿ ಯುವತಿಯಿಂದ ಕಿತ್ತುಕೊಂಡಿದ್ದ ಮೊಬೈಲ್ ಸೀಜ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಇದು ಯಲಹಂಕ ಹೊರವಲಯದಲ್ಲಿ ನಡೆದ ಘಟನೆಯಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವತಿ, ಯಲಹಂಕ ಉಪನಗರದಿಂದ ಏಪ್ರಿಲ್ 21ರಂದು ರಾತ್ರಿ 11.10ರ ಸುಮಾರಿಗೆ ಇಂದಿರಾನಗರಕ್ಕೆ ತೆರಳಲು ರ್ಯಾಪಿಡೋ ಬುಕ್ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಬೈಕ್ ಚಾಲಕ ಬೈಕ್ ಹತ್ತಿಸಿಕೊಂಡಿದ್ದ. ನಂತರ ಒಟಿಪಿ ಪಡೆಯುವ ನೆಪದಲ್ಲಿ ಮೊಬೈಲ್ ಕಸಿದುಕೊಂಡು ಬೈಕ್ ಹತ್ತಿದ ಕೂಡಲೇ ಅನುಚಿತವಾಗಿ ವರ್ತಿಸತೊಡಗಿದ್ದ. ನಂತರ ಹೋಗಬೇಕಿದ್ದ ರೂಟಲ್ಲಿ ತೆರಳದೇ ದೊಡ್ಡಬಳ್ಳಾಪುರ ರಸ್ತೆ ಕಡೆ ಬೈಕ್ ತಿರುಗಿಸಿದ್ದ. ಇದರಿಂದ ಆತಂಕಗೊಂಡ ಯುವತಿ ಪ್ರಶ್ನಿಸುತ್ತಿದ್ದಂತೆ ರ್ಯಾಪಿಡೋ ಚಾಲಕ ವೇಗವಾಗಿ ಬೈಕ್ ಚಲಾಯಿಸಿದ್ದ. ಇದರಿಂದ ಮತ್ತಷ್ಟು ಗಾಬರಿಯಾದ ಯುವತಿ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಮುಂಭಾಗ ಬೈಕ್’ನಿಂದ ರಸ್ತೆಗೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಖಾಸಗಿ ಕಾಲೇಜು ಸೆಕ್ಯುರಿಟಿ ಸಿಬ್ಬಂದಿ ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಇದನ್ನ ಗಮನಿಸಿದ ರ್ಯಾಪಿಡೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೈಕ್’ನಿಂದ ರಸ್ತೆಗೆ ಬಿದ್ದಿದ್ದರಿಂದ ಯುವತಿಯ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರ ಮೊಬೈಲ್ ಪಡೆದ ಯುವತಿ ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Vastu Plants: ಅದೃಷ್ಟವನ್ನು ಆಕರ್ಷಿಸುವ ಈ ಸಸ್ಯವನ್ನು ಮನೆಯ ಈ ಭಾಗದಲ್ಲಿ ನೆಡಿ: ಚಮತ್ಕಾರ ಆಮೇಲೆ ನೋಡಿ
ಇನ್ನೂ ಆಂಧ್ರ ಮೂಲದವನಾಗಿರುವ ಆರೋಪಿ ದೀಪಕ್ ತಿಂಡ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.