CSK vs KKR: ಸುನಾಮಿ ಎಬ್ಬಿಸಿದ ರಹಾನೆ ಬ್ಯಾಟಿಂಗ್: ಕೊಲ್ಕತ್ತಾ ಮಣಿಸಿ Points Tableನಲ್ಲಿ ಅಗ್ರಸ್ಥಾನಕ್ಕೇರಿದ ಧೋನಿ ಪಡೆ

Kolkata Knight Riders vs Chennai Super Kings Highlights: ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 5 ಗೆಲುವಿನಿಂದ 10 ಅಂಕಗಳನ್ನು ಪಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್‌ ಜೈಂಟ್ಸ್, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಲಾ 8 ಅಂಕಗಳನ್ನು ಪಡೆದಿದ್ದು ಕ್ರಮವಾಗಿ ಎರಡರಿಂದ ಆರನೇ ಸ್ಥಾನದಲ್ಲಿವೆ.

Written by - Bhavishya Shetty | Last Updated : Apr 24, 2023, 12:01 AM IST
    • IPL-2023 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳ ಗೆಲುವು ದಾಖಲಿಸಿದ ಚೆನ್ನೈ
    • ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ
    • ಕೋಲ್ಕತ್ತಾ 7 ಪಂದ್ಯಗಳಲ್ಲಿ ಪಂದ್ಯದಲ್ಲಿ ಸೋಲು ಕಂಡಿದ್ದು, 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
CSK vs KKR: ಸುನಾಮಿ ಎಬ್ಬಿಸಿದ ರಹಾನೆ ಬ್ಯಾಟಿಂಗ್: ಕೊಲ್ಕತ್ತಾ ಮಣಿಸಿ Points Tableನಲ್ಲಿ ಅಗ್ರಸ್ಥಾನಕ್ಕೇರಿದ ಧೋನಿ ಪಡೆ   title=
CSK vs KKR

Kolkata Knight Riders vs Chennai Super Kings Highlights: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಭಾನುವಾರ ನಡೆದ IPL-2023 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 49 ರನ್‌ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌’ಗೆ ಆಗಮಿಸಿದ ಚೆನ್ನೈ 20 ಓವರ್‌’ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 235 ರನ್‌’ಗಳ ಬೃಹತ್ ಸ್ಕೋರ್ ಮಾಡಿತು, ನಂತರ ಕೋಲ್ಕತ್ತಾ ತಂಡ 8 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ:  Photos: ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ

ಚೆನ್ನೈ ತಂಡ ಅಗ್ರಸ್ಥಾನಕ್ಕೆ!

ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 5 ಗೆಲುವಿನಿಂದ 10 ಅಂಕಗಳನ್ನು ಪಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್‌ ಜೈಂಟ್ಸ್, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಲಾ 8 ಅಂಕಗಳನ್ನು ಪಡೆದಿದ್ದು ಕ್ರಮವಾಗಿ ಎರಡರಿಂದ ಆರನೇ ಸ್ಥಾನದಲ್ಲಿವೆ. ಕೋಲ್ಕತ್ತಾ 7 ಪಂದ್ಯಗಳಲ್ಲಿ ಪಂದ್ಯದಲ್ಲಿ ಸೋಲು ಕಂಡಿದ್ದು, 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

236 ರನ್‌’ಗಳ ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಕಳಪೆ ಆರಂಭ ಪಡೆಯಿತು. ಕೇವಲ 1 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ವೆಂಕಟೇಶ್ ಅಯ್ಯರ್ (22) ಹಾಗೂ ನಾಯಕ ನಿತೀಶ್ ರಾಣಾ (27) ಪ್ರಯತ್ನಪಟ್ಟರೂ ಸಹ ಯಶಸ್ವಿಯಾಗಲಿಲ್ಲ. ಜೇಸನ್ ರಾಯ್ ತಂಡದ ಪರ ಅತಿ ಹೆಚ್ಚು ರನ್ ಅಂದರೆ, 26 ಎಸೆತಗಳಲ್ಲಿ 5 ಬೌಂಡರಿ ಮತ್ತು ಸಿಕ್ಸರ್‌’ಗಳ ನೆರವಿನಿಂದ 61 ರನ್ ಗಳಿಸಿದರು. 5ನೇ ವಿಕೆಟ್‌’ಗೆ ರಿಂಕು ಸಿಂಗ್ ಜೊತೆ 65 ರನ್ ಸೇರಿಸಿದರು. ರಿಂಕು ಕೂಡ ಉತ್ಸಾಹ ತೋರಿ 33 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 53 ರನ್ ಗಳಿಸಿ ಅಜೇಯರಾಗಿ ಮರಳಿದರು. ಸಿಎಸ್‌’ಕೆ ಪರ ತುಷಾರ್ ದೇಶಪಾಂಡೆ ಮತ್ತು ಮಹೇಶ್ ತಿಕ್ಷಣ ತಲಾ 2 ವಿಕೆಟ್ ಪಡೆದರೆ, ಆಕಾಶ್ ಸಿಂಗ್, ಮೊಯಿನ್ ಅಲಿ, ರವೀಂದ್ರ ಜಡೇಜಾ ಮತ್ತು ಪತಿರಾನ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ: Budh Asta 2023: ಈ 3 ರಾಶಿಯವರ ಕೀರ್ತಿ, ಗೌರವ ಹೆಚ್ಚಿಸಲಿದ್ದಾನೆ ಬುಧ; ಅಪಾರ ಧನಪ್ರಾಪ್ತಿ ಖಚಿತ!

ರಹಾನೆ ಅಬ್ಬರ!

ಇದಕ್ಕೂ ಮೊದಲು ಟಾಸ್ ಗೆದ್ದ ಕೋಲ್ಕತ್ತಾ ನಾಯಕ ನಿತೀಶ್ ರಾಣಾ ಚೆನ್ನೈ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅನುಭವಿ ಅಜಿಂಕ್ಯ ರಹಾನೆ ಅಬ್ಬರ ಸೃಷ್ಟಿಸಿದರು. 29 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗಿ ಮರಳಿದರು. ರಹಾನೆ ಅವರ ಇನ್ನಿಂಗ್ಸ್‌’ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಇನ್ನೊಂದೆಡೆ ಡೆವೊನ್ ಕಾನ್ವೆ 40 ಎಸೆತಗಳಲ್ಲಿ 56 ರನ್ ಗಳಿಸಿದರೆ, ಶಿವಂ ದುಬೆ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 50 ರನ್ ಗಳಿಸಿದರು. ಕೋಲ್ಕತ್ತಾ ಪರ ಕುಲ್ವಂತ್ ಖೆಜ್ರೋಲಿಯಾ 2 ವಿಕೆಟ್ ಕಬಳಿಸಿದರಾದರೂ 3 ಓವರ್‌’ಗಳಲ್ಲಿ 44 ರನ್ ನೀಡಿದರು. ಇವರಲ್ಲದೆ ಸುಯಶ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಒಂದೊಂದು ವಿಕೆಟ್ ಪಡೆದರು. ಸುಯಶ್ 29 ಮತ್ತು ಚಕ್ರವರ್ತಿ 49 ರನ್ ನೀಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News