CM Shinde ವಿರುದ್ಧ ನಡೆಯಲಿದೆಯೇ ಗೇಮ್! ಭಾರಿ ಸಂಚಲನಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

Sanjay Raut: ಮೊದಲು ಅಜೀತ್ ಪವಾರ್ ಮತ್ತು ಇದೀಗ ಅವರ ಹೇಳಿಕೆಗೆ ಸಂಜಯ್ ರಾವುತ್ ಪ್ರತಿಕ್ರಿಯೆ ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಇದು ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರಿಗೆ ಒಂದು ಸ್ಪಷ್ಟ ಸೂಚನೆ ಎಂದೇ ಬಿಂಬಿಸಲಾಗುತ್ತಿದೆ.  

Written by - Nitin Tabib | Last Updated : Apr 23, 2023, 01:45 PM IST
  • ಸಿಎಂ ಆಗುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ ಎಂದು ಪ್ರಶ್ನಿಸಿರುವ ಸಂಜಯ್ ರಾವತ್,
  • ಅಜಿತ್ ಪವಾರ್ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ.
  • ಹಲವು ವರ್ಷಗಳಿಂದ ರಾಜಕೀಯದಲ್ಲಿರುವ ಅವರು ಹಲವು ಬಾರಿ ಸಚಿವರೂ ಆಗಿದ್ದಾರೆ.
CM Shinde ವಿರುದ್ಧ ನಡೆಯಲಿದೆಯೇ ಗೇಮ್! ಭಾರಿ ಸಂಚಲನಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ title=

Sanjay Raut Statement: ಶಿವಸೇನೆ  ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಮಹಾರಾಷ್ಟ್ರ ಮತ್ತು ಸಿಎಂ ಏಕನಾಥ್ ಶಿಂಧೆ ರಾಜಕೀಯದ ಬಗ್ಗೆ ಭಾರಿ ಗಂಭೀರ ಹೇಳಿಕೆ ನೀಡಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ ಮೂಲಕ ರಾವತ್ ಸಿಎಂ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿದ್ದಾರೆ. ಏಕನಾಥ್ ಶಿಂಧೆ ಅವರ ಕಾಲ ಮುಗಿದಿದೆ ಎಂದು ಸಂಜಯ್ ರಾವುತ್ ಪರೋಕ್ಷವಾಗಿ ಮಾತನಾಡಿದಾರೆ. ಇದಲ್ಲದೇ ಸಿಎಂ ಏಕನಾಥ್ ಶಿಂಧೆ ಅವರನ್ನು ಅನರ್ಹರು ಎಂದೂ ರಾವತ್ ಕರೆದಿದ್ದಾರೆ. ಸಂಜಯ್ ರಾವತ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ  ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಮುಖ್ಯಮಂತ್ರಿಯಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಂಶವನ್ನು ಬೆಂಬಲಿಸಿದ್ದಾರೆ. ಮೊದಲ ಅಜಿತ್ ಪವಾರ್ ಮತ್ತು ಅದಕ್ಕೆ ಇದೀಗ ಸಂಜಯ್ ರಾವತ್ ಹೇಳಿಕೆ ಬಳಿಕ ಮಹಾರಾಷ್ಟ್ರದ ರಾಜಕೀಯದಲ್ಲಿ ಬಹುದೊಡ್ಡ ಸಂಚಲನವನ್ನು ಸೃಸ್ಟಿಸುವ ಮುನ್ಸೂಚನೆಯಾಗಿವೆ ಎಂದೇ ವಿಶ್ಲೇಶಿಸಲಾಗುತ್ತಿದೆ. 

ಮಹಾರಾಷ್ಟ್ರದ ರಾಜಕೀಯ ಆಟ!
ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಸಾಕಷ್ಟು ಆಡಳಿತಾತ್ಮಕ ಅನುಭವ ಹೊಂದಿರುವ ಕಾರಣ ಮಹಾರಾಷ್ಟ್ರದ ಸಿಎಂ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಏಕನಾಥ್ ಶಿಂಧೆ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವುತ್, ಕೆಲವು ಅನರ್ಹರು ಒಡೆದು ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ 40 ಶಾಸಕರೊಂದಿಗೆ ಬಂಡಾಯವೆದ್ದಿದ್ದರಿಂದ ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು.

ಇದನ್ನೂ ಓದಿ-Corona ಕುರಿತು ಭಾರತೀಯ ವಿಜ್ಞಾನಿಗಳ ಬೆಚ್ಚಿಬೀಳಿಸುವ ಅಧ್ಯಯನ ಪ್ರಕಟ, ಮಕ್ಕಳ ಮೇಲೆ ಅಪಾಯದ ಕಾರ್ಮೋಡ!

ಅಜಿತ್ ಪವಾರ್ ಗರಿಷ್ಠ ಬಾರಿ ಉಪ ಮುಖ್ಯಮಂತ್ರಿಯಾಗಿದ್ದಾರೆ
ಸಿಎಂ ಆಗುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ ಎಂದು ಪ್ರಶ್ನಿಸಿರುವ ಸಂಜಯ್ ರಾವತ್,  ಅಜಿತ್ ಪವಾರ್ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಲ್ಲಿರುವ ಅವರು ಹಲವು ಬಾರಿ ಸಚಿವರೂ ಆಗಿದ್ದಾರೆ. ಅಷ್ಟೇ ಅಲ್ಲ, ಗರಿಷ್ಠ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಅವರು ಸಿಎಂ ಆಗಬೇಕು ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಇದನ್ನೂ ಓದಿ-Rahul Gandhi Bungalow: 'ನಿಜ ಹೇಳಿದ್ದಕ್ಕೆ ಸಿಕ್ಕ ಬೆಲೆ' ತುಘಲಕ್ ಲೇನ್ ಬಂಗಲೆ ತೊರೆದ ರಾಹುಲ್ ಗಾಂಧಿ

ಪವಾರ್ ಸಿಎಂ ಆಗುವ ಮಾತು ಎಲ್ಲಿಂದ ಆರಂಭಗೊಂಡಿದೆ
ಒಂದು ದಿನದ ಹಿಂದೆ ಅಜಿತ್ ಪವಾರ್ ಅವರು ಸಿಎಂ ಆಗುವ ತಮ್ಮ ಮಹತ್ವಾಕಾಂಕ್ಷೆಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದು, ಹೌದು, ನಾನು 100 ಪರ್ಸೆಂಟ್ ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದಿದ್ದರು.  ನಂತರ ಈ ಬಗ್ಗೆ ಸಂಜಯ್ ರಾವತ್ ಅವರನ್ನು ಪ್ರಶ್ನಿಸಲಾಗಿ, ಅವರು ಮೊದಲ ಇದೆ ಮೊದಲಬಾರಿಗೆ ಇಂತಹ ಆಸೆ ವ್ಯಕ್ತಪಡಿಸಿಲ್ಲ, ಈ ಹಿಂದೆಯೂ ವ್ಯಕ್ತಪಡಿಸಿದ್ದಾರೆ, ಹೀಗಾಗಿ ಅವರಿಗೆ ನನ್ನ ಶುಭಾಶಯಗಳು ಎಂದು ರಾವತ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News