ಶ್ರೀನಗರ: ಇಲ್ಲಿನ ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯ ಬೋನಿಗಾಮ್ ಗ್ರಾಮದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಸೈನಿಕರ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು,ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಭಯೋತ್ಪಾದಕರು ಕಾಜಿಗುಂದ್ ಪ್ರದೇಶದಲ್ಲಿರುವ ಸೈನಿಕರ ಕಟ್ಟಡದ ಮೇಲೆ ಈ ಗುಂಡಿನ ದಾಳಿಯನ್ನು ನಡೆಸಿದ್ದಾರೆ ಎಂದು ಮಿಲಿಟರಿ ಅಧಿಕಾರಿಗಳು ಸುದ್ದಿಯನ್ನು ಧೃಡಪಡಿಸಿದ್ದಾರೆ.