ಇಂದು ಮಹತ್ವದ ಸಚಿವ ಸಂಪುಟ ಸಭೆ: ಜಾತಿ ಗಣತಿ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ. 

Written by - Prashobh Devanahalli | Last Updated : Jan 16, 2025, 10:26 AM IST
  • ಇಂದು ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
  • ಮೀಟಿಂಗ್‌ನಲ್ಲಿ ಜಾತಿ ಗಣತಿ ವರದಿ ಮಂಡನೆಯಿಲ್ಲ
  • ಹಲವಾರು ಮಹತ್ವದ ಪ್ರಸ್ತಾವನೆಗಳ ಬಗ್ಗೆ ಚರ್ಚೆ
ಇಂದು ಮಹತ್ವದ ಸಚಿವ ಸಂಪುಟ ಸಭೆ: ಜಾತಿ ಗಣತಿ ಬಗ್ಗೆ ಚರ್ಚೆ  title=

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಹಲವಾರು ಮಹತ್ವದ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಸಭೆಯ ಪ್ರಮುಖ ಅಂಶಗಳು:
ಜಾತಿ ಗಣತಿ ವರದಿ:
ವರದಿ ಈ ಸಭೆಯಲ್ಲಿ ಮಂಡನೆಯಾಗುವ ಪ್ರಸ್ತಾವನೆ ಇಲ್ಲಾ. ಆದರೆ, ಮುಂದಿನ ಸಭೆಗೆ ವರದಿಯನ್ನು ತರಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಅನೌಪಚಾರಿಕವಾಗಿ ಚರ್ಚೆ ಸಾಧ್ಯತೆ.

ಕೃಷಿ ಮತ್ತು ತೋಟಗಾರಿಕೆ ವಿವಿ:
ಮಂಡ್ಯದಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅನುಮೋದನೆ ನಿರೀಕ್ಷೆ.

5ನೇ ಹಣಕಾಸು ಆಯೋಗ:
ಆಯೋಗದ ಅವಧಿ ಅಕ್ಟೋಬರ್ 31ರವರೆಗೆ ವಿಸ್ತರಿಸಲು ಪ್ರಸ್ತಾವನೆ.

ಅಬಕಾರಿ ಇಲಾಖೆ ವರ್ಗಾವಣೆ:
ಕೌನ್ಸಿಲಿಂಗ್ ಮೂಲಕ ನೌಕರರ ವರ್ಗಾವಣೆಗೆ ಚರ್ಚೆ ಮತ್ತು ಅನುಮೋದನೆ.

ಕೊಡಗು ವೈದ್ಯಕೀಯ ಕಾಲೇಜು:
450 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ₹78.10 ಕೋಟಿ ಅನುದಾನ ಹೆಚ್ಚಳ.

ನರೇಗಾ ಗುತ್ತಿಗೆ ನೌಕರರಿಗೆ ವಿಮೆ:
₹8.38 ಕೋಟಿ ವೆಚ್ಚದಲ್ಲಿ ವಿಮೆ ಸೌಲಭ್ಯ ಒದಗಿಸಲು ಚರ್ಚೆ.

ಆಶಾಕಿರಣ ಯೋಜನೆ:
₹13.30 ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ.

ಒಬಿಸಿ ವಸತಿ ನಿಲಯಗಳು:
₹211 ಕೋಟಿ ವೆಚ್ಚದಲ್ಲಿ 10 ವಸತಿ ನಿಲಯಗಳ ಕಟ್ಟಡ ನಿರ್ಮಾಣ.

ಚಿತಾಗಾರ ನಿರ್ಮಾಣ:
34 ಚಿತಾಗಾರಗಳ ನಿರ್ಮಾಣಕ್ಕೆ ₹136 ಕೋಟಿ ವೆಚ್ಚದ ಅನುಮೋದನೆ.

ಅವಳಿಗೋಪುರ:
ಆನಂದ್ ರಾವ್ ವೃತ್ತದಲ್ಲಿ ಅವಳಿಗೋಪುರ ನಿರ್ಮಾಣ ವೆಚ್ಚ ಕುರಿತು ಚರ್ಚೆ.

ಪಿಎಚ್‌ಎಚ್ ಕಾರ್ಡಧಾರಿಗಳಿಗೆ ಸೌಲಭ್ಯ:
ಉಚಿತ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇವೆ ನೀಡಲು ಅನುಮೋದನೆ.

ಕಾನೂನು ಕಾಲೇಜು ಮತ್ತು ಬೋಧಕ ಸಿಬ್ಬಂದಿ ವೇತನ:
ಬೋಧಕ ಸಿಬ್ಬಂದಿಗಳಿಗೆ 6ನೇ ಮತ್ತು 8ನೇ ವೇತನ ಆಯೋಗದ ಬಾಕಿ ಪಾವತಿ.

ವೈದ್ಯಕೀಯ ನಿರ್ದೇಶನಾಲಯ:
ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸುವ ಪ್ರಸ್ತಾಪ.

ಕ್ರೋಮ್ ಬುಕ್ ಖರೀದಿ:
400 ಕ್ರೋಮ್ ಬುಕ್‌ಗಳಿಗೆ ಅನುಮೋದನೆ.

ಬ್ರಾಂಡ್ ಬೆಂಗಳೂರು:
₹413 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ.

ಇಂದು ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಸೌಲಭ್ಯಗಳ ಉನ್ನತಿಗೆ ಸಂಬಂಧಿಸಿದ ಹಲವಾರು ನಿರ್ಣಯಗಳು ಕೈಗೊಳ್ಳುವ ನಿರೀಕ್ಷೆ ಇದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News