ಪುನರ್ಜನ್ಮದ ಕಥೆ ಹೇಳಲು "ಬಂಡೆಕವಿ" ಆಗಮನ: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಫೆಬ್ರವರಿಯಿಂದ ಚಿತ್ರೀಕರಣ

ಚಿತ್ರದ ಮೊದಲ ಸನ್ನಿವೇಶಕ್ಕೆ ವರಮಹಾಲಕ್ಷ್ಮೀ ಅವರು ಆರಂಭ ಫಲಕ ತೋರಿದರು. ರವಿಶಂಕರ್ ರೆಡ್ಡಿ ಆರ್ ಅವರು ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದರು. ನಾಗೇಂದ್ರ ಅರಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Written by - Bhavishya Shetty | Last Updated : Jan 17, 2025, 01:55 PM IST
    • ಮೋಹನ್ ಕುಮಾರ್ ನಾಯಕರಾಗಿ ನಟಿಸುತ್ತಿರುವ "ಬಂಡೆಕವಿ" ಚಿತ್ರ
    • "ಬಂಡೆಕವಿ" ಚಿತ್ರದ ಮುಹೂರ್ತ ಸಮಾರಂಭ
    • ಚಿತ್ರದ ಮೊದಲ ಸನ್ನಿವೇಶಕ್ಕೆ ವರಮಹಾಲಕ್ಷ್ಮೀ ಅವರು ಆರಂಭ ಫಲಕ ತೋರಿದರು
ಪುನರ್ಜನ್ಮದ ಕಥೆ ಹೇಳಲು "ಬಂಡೆಕವಿ" ಆಗಮನ: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಫೆಬ್ರವರಿಯಿಂದ ಚಿತ್ರೀಕರಣ title=
File Photo

ವರಮಹಾಲಕ್ಷ್ಮಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಸಿ.ಜಿ ಗಂಗರಾಜು ದಿಬ್ಬೂರು ಹಾಗೂ ಮೇಕೆ ಶಿವು ನಿರ್ಮಿಸುತ್ತಿರುವ,  ಶ್ರೀರಜನಿ ಪರಿಸರ ಪ್ರೇಮಿ ನಿರ್ದೇಶನದ ಹಾಗೂ ಮೋಹನ್ ಕುಮಾರ್ ನಾಯಕರಾಗಿ ನಟಿಸುತ್ತಿರುವ "ಬಂಡೆಕವಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ 11ರ ಟಾಪ್5 ಸ್ಪರ್ಧಿಗಳ ಹೆಸರು ಲೀಕ್!‌ ಐವರಲ್ಲಿ ಒಬ್ಬರೇ ಘಟಾನುಘಟಿ ಲೇಡಿ ಕಂಟಸ್ಟಂಟ್‌..

ಚಿತ್ರದ ಮೊದಲ ಸನ್ನಿವೇಶಕ್ಕೆ ವರಮಹಾಲಕ್ಷ್ಮೀ ಅವರು ಆರಂಭ ಫಲಕ ತೋರಿದರು. ರವಿಶಂಕರ್ ರೆಡ್ಡಿ ಆರ್ ಅವರು ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದರು. ನಾಗೇಂದ್ರ ಅರಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಹಿಂದೆ "ನವ ಇತಿಹಾಸ", "ಗುಳ್ಳೆ ನರಿ" ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀರಜನಿ ಪರಿಸರಪ್ರೇಮಿ ಅವರಿಗೆ ಇದು ಮೂರನೇ ನಿರ್ದೇಶನದ ಚಿತ್ರ.  ಇದೊಂದು ಪುನರ್ಜನ್ಮದ ಕಥೆಯಾಗಿದ್ದು, ಸಸ್ಪೆನ್ಸ್, ಥ್ರಿಲ್ಲಿಂಗ್ ಲವ್ ಸ್ಟೋರಿ ಕೂಡ ಇದೆ‌. ಈ ಹಿಂದೆ "ಅಡವಿ" ಚಿತ್ರದಲ್ಲಿ ನಟಿಸಿದ್ದ ಮೋಹನ್ ಕುಮಾರ್ ಅವರಿಗೆ ನಾಯಕನಾಗಿ ಇದು ಎರಡನೇ ಚಿತ್ರ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದೆ. ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದೆಂದು ನಿರ್ದೇಶಕರು ತಿಳಿಸಿದ್ದಾರೆ.  

ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ತುಮಕೂರು, ರಾಮನಗರ ಹಾಗೂ ಚಾಮರಾಜನಗರದಲ್ಲಿ ಚಿತ್ರೀಕರಣ ನಡೆಯಲಿದೆ.                    

ಇದನ್ನೂ ಓದಿ: Bra Tips: ಮಹಿಳೆಯರು ʼಬ್ರಾʼ ಧರಿಸದಿದ್ದರೆ ಏನಾಗುತ್ತದೆ? ಇದಕ್ಕೆ ತಜ್ಞರ ಉತ್ತರ ಏನೆಂದು ತಿಳಿಯಿರಿ    

ಹರ್ಷ ಕಾಗೋಡು ಸಂಗೀತ ನಿರ್ದೇಶನ,  ಸಂದೀಪ್ ಹೊನ್ನಳ್ಳಿ ಛಾಯಾಗ್ರಹಣ ಹಾಗೂ ಸುನಯ್ ಜೈನ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಮರ್ಥ್ ಎಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News