ಮುಂಬೈ: ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿರುವ ಎನ್.ಡಿ.ಎ ಮೈತ್ರಿಕೂಟದ ಪಕ್ಷ ಶಿವಸೇನಾ ಈಗ ರಫೇಲ್ ಒಪ್ಪಂದವು ಬಲಗೊಳಿಸಿದ್ದು ವಾಯುಸೇನೆಯನ್ನೋ ಅಥವಾ ಉದ್ಯಮಿಗಳನ್ನೋ ಎಂದು ಪ್ರಶ್ನಿಸಿದೆ.
ದಿ ಹಿಂದೂ ಪತ್ರಿಕೆಯಲ್ಲಿ ರಫೇಲ್ ಹಗರಣದ ವಿಚಾರವಾಗಿ ವರದಿ ಬಂದ ನಂತರ ಈಗ ಶಿವಸೇನಾ ಹೇಳಿಕೆ ಬಂದಿದೆ.ದಿ ಹಿಂದೂ ಪತ್ರಿಕೆಯ ವರದಿಯಲ್ಲಿ ಪ್ರಧಾನಿ ಕಚೇರಿ ಒಪ್ಪಂದದ ವಿಚಾರವಾಗಿ ಪ್ರತ್ಯೇಕ ಮಾತುಕತೆ ನಡೆಸುವ ವಿಚಾರಕ್ಕೆ ರಕ್ಷಣಾ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಪತ್ರಿಕೆ ವರದಿ ಮಾಡಿತ್ತು.
ಈ ಹಿನ್ನಲೆಯಲ್ಲಿ ಈಗ ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ಮೋದಿ ಗುರುವಾರಂದು ಸಂಸತ್ತನಲ್ಲಿ ದೇಶಪ್ರೇಮದ ಕುರಿತಾಗಿ ಭಾಷಣ ಮಾಡುತ್ತಾ ಒಪ್ಪಂದವನ್ನು ಸಮರ್ಥಿಸಿಕೊಳ್ಳುತ್ತಾರೆ.ಆದರೆ ಇದಾದ ಮರುದಿನ ಒಂದು ದಾಖಲೆ ಹೊರಬರುತ್ತದೆ ಅದು ದೇಶ ಭಕ್ತಿ ಘೋಷಣೆ ಕೂಗುತ್ತಿದ್ದವರ ಮತ್ತು ಮೇಜುಗಳನ್ನು ಸದನದಲ್ಲಿ ಕುಟ್ಟುತ್ತಿದ್ದವರ ಧ್ವನಿಯನ್ನು ಅಡಗಿಸುತ್ತದೆ "ಎಂದು ಪ್ರಸ್ತಾಪಿಸಿದೆ.
ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಹೆಸರನ್ನು ಪ್ರಸ್ತಾಪಿಸದೆ ಈ ರಫೇಲ್ ಒಪ್ಪಂದ ವಾಯುಸೇನೆಯನ್ನು ಬಲಿಷ್ಟಗೊಳಿಸಲೋ ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಉದ್ಯಮಿಗಳನ್ನು ಸಶಕ್ತಗೊಳಿಸಲೋ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ತಿಳಿಸಿದ್ದಾರೆ.