ಬೆಂಗಳೂರು: 40% ಭ್ರಷ್ಟಾಚಾರದಿಂದ ನಮ್ಮ ರಾಜ್ಯದ ಯುವಕರು ಉದ್ಯೋಗ ವಂಚಿತರಾಗಿದ್ದಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯರ ಟೀಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ತಿರುಗೇಟು ನೀಡಿದ್ದಾರೆ.
#ಭಾಷಾತಾರತಮ್ಯ ಹ್ಯಾಶ್ಟ್ಯಾಗ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ನಮ್ಮ ಯುವಕರು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಯುವ ಜನರ ಭವಿಷ್ಯ ಹಾಳಾಗಿದೆ. ಡಬಲ್ ಎಂಜಿನ್ ಸರ್ಕಾರ ನಮ್ಮವರನ್ನು ಕೈಬಿಟ್ಟಿದೆ’ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ JDSನಿಂದ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ: ಬಿಜೆಪಿ
The @BJP4Karnataka government has provided 55 lakhs job in last 4 yrs as per FICCI & EPFO. National average for unemployment is 4.1% while that in Karnataka is just 2.1%, almost half of the national average. @siddaramaiah pls check your facts before indulging in false propaganda. https://t.co/3TEtgwrc9o
— Basavaraj S Bommai (@BSBommai) April 10, 2023
ಸಿದ್ದರಾಮಯ್ಯರ ಟೀಕೆಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ‘FICCI & EPFO ಪ್ರಕಾರ ಕಳೆದ 4 ವರ್ಷದಲ್ಲಿ 55 ಲಕ್ಷ ಉದ್ಯೋಗ ನೀಡಿದ್ದೇವೆ. ರಾಷ್ಟ್ರೀಯ ನಿರುದ್ಯೋಗ ಪ್ರಮಾಣ ಶೇ.4ರಷ್ಟಿದೆ. ಆದರೆ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಕೇವಲ ಶೇ.2.1ರಷ್ಟಿದೆ’ ಅಂತಾ ಹೇಳಿದ್ದಾರೆ.
‘ರಾಷ್ಟ್ರೀಯ ನಿರುದ್ಯೋಗದ ಪ್ರಮಾಣಕ್ಕಿಂತ ಅರ್ಧದಷ್ಟು ಕಡಿಮೆ ನಿರುದ್ಯೋಗ ರಾಜ್ಯದಲ್ಲಿದೆ. ಸತ್ಯಾಂಶವನ್ನು ಪರಿಶೀಲಿಸಿ’ ಎಂದು ಸಿದ್ದರಾಮಯ್ಯರಿಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕೆಎಂಎಫ್ ಆಪೋಷನಕ್ಕೆ 2008 ರಲ್ಲೇ ಪ್ರಯತ್ನಿಸಿದ್ದ ಬಿಜೆಪಿ- ಎಚ್ಡಿಕೆ ಗಂಭೀರ ಆರೋಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.