SRH vs PKB: ಇಂಡಿಯನ್ ಪ್ರೀಮಿಯರ್ ಲೀಗ್ 16 ನೇ ಋತುವಿನಲ್ಲಿ ಮಾಜಿ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ಧವನ್ ನಾಯಕತ್ವದ ತಂಡ ಪಂಜಾಬ್ ಕಿಂಗ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಹೈದರಾಬಾದ್’ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 20 ಓವರ್’ಗಳಲ್ಲಿ 9 ವಿಕೆಟ್’ಗೆ 143 ರನ್ ಗಳಿಸಿತ್ತು. ಬಳಿಕ ಹೈದರಾಬಾದ್ 17.1 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗುರಿ ಮುಟ್ಟಿತು.
ಇದನ್ನೂ ಓದಿ: IPL 2023: ಚೆನ್ನೈ ಸೂಪರ್ ಕಿಂಗ್ಸ್’ಗೆ ಮಹಾ ಆಘಾತ: ಇಬ್ಬರು ಸ್ಟಾರ್ ಆಟಗಾರರು ತಂಡದಿಂದ ಹೊರಕ್ಕೆ!
144 ರನ್’ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ರಾಹುಲ್ ತ್ರಿಪಾಠಿ ಆಧಾರವಾದರು. ಅರ್ಷದೀಪ್ ಸಿಂಗ್ ಬೌಲಿಂಗ್‌ನಲ್ಲಿ ಹ್ಯಾರಿ ಬ್ರೂಕ್ (13) ಎಸೆತದಲ್ಲಿ ಔಟ್ ಆಗುವ ಮೂಲಕ ಹೈದರಾಬಾದ್’ಗೆ ಆರಂಭಿಕ ಆಘಾತ ಎದುರಾಯಿತು. ನಂತರ ಮಯಾಂಕ್ ಅಗರ್ವಾಲ್ (20 ಎಸೆತಗಳಲ್ಲಿ 21 ರನ್, 3 ಬೌಂಡರಿ) ಕೂಡ ರಾಹುಲ್ ಚಹಾರ್’ಗೆ ವಿಕೆಟ್ ಒಪ್ಪಿಸಿದರು, ಈ ಕಾರಣದಿಂದಾಗಿ ಹೈದರಾಬಾದ್ ಸ್ಕೋರ್ 8.3 ಓವರ್’ಗಳಲ್ಲಿ 2 ವಿಕೆಟ್’ಗೆ 45 ರನ್’ಗಳಿಗೆ ಕುಸಿಯಿತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಇಳಿದ ರಾಹುಲ್ ತ್ರಿಪಾಠಿ ಕೊನೆಯವರೆಗೂ ಫ್ರೀಜ್ ಆಗಿ ಉಳಿದು 48 ಎಸೆತಗಳಲ್ಲಿ 74 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 10 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಬಾರಿಸಿದರು.
ಇದಕ್ಕೂ ಮುನ್ನ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಆಕರ್ಷಕ ಇನ್ನಿಂಗ್ಸ್ ಆಡಿದ್ದು, ಇನ್ನೊಂದು ತುದಿಯಿಂದ ಬೆಂಬಲ ಸಿಗದಿದ್ದರೂ ಔಟಾಗದೆ 99 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್’ಗೆ 143 ರನ್’ಗಳ ಗೌರವಾನ್ವಿತ ಸ್ಕೋರ್ ಗಳಿಸಿತು. ಧವನ್ ಆರಂಭದಿಂದ ಕೊನೆಯವರೆಗೂ ಒಂದು ತುದಿಯನ್ನು ಹಿಡಿತದಲ್ಲಿಟ್ಟುಕೊಂಡರು. ಅವರು ತಮ್ಮ ಇನ್ನಿಂಗ್ಸ್’ನಲ್ಲಿ 66 ಎಸೆತಗಳನ್ನು ಎದುರಿಸಿದ್ದು, ಅದರಲ್ಲಿ 12 ಬೌಂಡರಿ, ಐದು ಸಿಕ್ಸರ್ ಸೇರಿವೆ.
ಇವರನ್ನು ಹೊರತುಪಡಿಸಿ ಸ್ಯಾಮ್ ಕರೆನ್ (15 ಎಸೆತಗಳಲ್ಲಿ 22 ರನ್) ಮಾತ್ರ ಎರಡಂಕಿ ತಲುಪುವಲ್ಲಿ ಯಶಸ್ವಿಯಾದರು. ಧವನ್ 10ನೇ ವಿಕೆಟ್’ಗೆ ಮೋಹಿತ್ ರಾಠಿ ಅವರೊಂದಿಗೆ 30 ಎಸೆತಗಳಲ್ಲಿ 55 ರನ್’ಗಳ ಮುರಿಯದ ಜೊತೆಯಾಟ ಆಡಿದರು.
ಇದನ್ನೂ ಓದಿ: IPL 2023: ವಿಶ್ವದ ಯಾವುದೇ ಕ್ರಿಕೆಟಿಗರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಬೌಲರ್! ತಿಳಿದರೆ ‘ವಾವ್..’ ಅಂತೀರ
ಸನ್ ರೈಸರ್ಸ್ ಪರ ಮಯಾಂಕ್ ಮಾರ್ಕಂಡೇ ಅದ್ಭುತ ಪ್ರದರ್ಶನ ನೀಡಿದರು. ಈ ಲೆಗ್ ಸ್ಪಿನ್ನರ್ 15 ರನ್’ಗಳಿಗೆ ನಾಲ್ಕು ವಿಕೆಟ್ ಪಡೆದರು. ಇವರಲ್ಲದೆ ಮಾರ್ಕೊ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.