/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

7th Pay Commission : ಕೇಂದ್ರ ನೌಕರರಿಗೆ ಹಣಕಾಸು ಸಚಿವಾಲಯ ಭರ್ಜರಿ ಸುದ್ದಿ ನೀಡಿದೆ. ಕೇಂದ್ರ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಸರ್ಕಾರ ಅನುಮೋದಿಸಿದೆ. ಇನ್ನು  ನೌಕರರ ವೇತನಕ್ಕೆ ಹೊಸ ತುಟ್ಟಿಭತ್ಯೆ ಸೇರ್ಪಡೆಯಾಗಲಿದೆ. ತುಟ್ಟಿಭತ್ಯೆಯ ಪರಿಷ್ಕೃತ ಅಧಿಸೂಚನೆಯನ್ನು ಹಣಕಾಸು ಸಚಿವಾಲಯ ಹೊರಡಿಸಿದೆ. ಈ ಬಾರಿ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ನೌಕರರು ಪಡೆಯುವ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ.

ಡಿಎ ಶೇ.38ರಿಂದ 42ಕ್ಕೆ ಏರಿಕೆ : 
ಡಿಎ ಹೆಚ್ಚಳವನ್ನು ಶೇ.4 ರಷ್ಟು ಹೆಚ್ಚಿಸಲು ಹಣಕಾಸು ಸಚಿವಾಲಯ ಸೋಮವಾರ ಸುತ್ತೋಲೆ ಹೊರಡಿಸಿದೆ. ಮಾರ್ಚ್ 24 ರಂದು, ನೌಕರರ ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಇದರೊಂದಿಗೆ ನೌಕರರ ತುಟ್ಟಿ ಭತ್ಯೆ ಶೇ.38ರಿಂದ 42ಕ್ಕೆ ಏರಿಕೆಯಾಗಿದೆ. ಇದೀಗ ಏಪ್ರಿಲ್ 3 ರಂದು ತುಟ್ಟಿ ಭತ್ಯೆ ಹೆಚ್ಚಳದ ಅಧಿಸೂಚನೆಯನ್ನು ಹಣಕಾಸು ಸಚಿವಾಲಯ ಹೊರಡಿಸಿದೆ.

ಇದನ್ನೂ ಓದಿ : ಹೊಸ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್‌ ಇದ್ದರೆ ಅಷ್ಟೇ ಸಾಕು!

ಮೂರು ತಿಂಗಳ ಬಾಕಿಯೂ ಸಿಗಲಿದೆ : 
ಅಧಿಸೂಚನೆಯ ನಂತರ, ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ ವೇತನದಲ್ಲಿ ಹೆಚ್ಚಿದ ಶೇಕಡಾ ನಾಲ್ಕು ತುಟ್ಟಿಭತ್ಯೆ ನೀಡಲಾಗುವುದು. ಏಪ್ರಿಲ್ ತಿಂಗಳ ವೇತನದಲ್ಲಿ ಮೂರು ತಿಂಗಳ ಬಾಕಿ ಇರುವ ಡಿಎ ಯನ್ನು ಕೂಡಾ ನೌಕರರ ವೇತನದಲ್ಲಿ ನೀಡಲಾಗುವುದು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಜನವರಿ ಒಂದು  2023 ರಿಂದ ಜಾರಿಗೊಳಿಸಲಾಗಿದೆ. ಸುಮಾರು ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ  ಮೂರು ತಿಂಗಳ ಬಾಕಿ ಡಿಎ  ಪಾವತಿಸಲಾಗುವುದು. 

ಪಿಂಚಣಿದಾರರಿಗೂ ಸಿಕ್ಕಿದೆ ಉಡುಗೊರೆ  ಸಿಕ್ಕಿತು :
ಏಳನೇ ವೇತನ ಆಯೋಗದ ಅಡಿಯಲ್ಲಿ ಲಕ್ಷಗಟ್ಟಲೆ ಪಿಂಚಣಿದಾರರು ಡಿಯರ್‌ನೆಸ್ ರಿಲೀಫ್ (ಡಿಆರ್ ಹೆಚ್ಚಳ) ಪ್ರಯೋಜನವನ್ನು ಪಡೆದಿದ್ದಾರೆ. ಡಿಎ ಹೆಚ್ಚಳದ ಜೊತೆಗೆ, ಕ್ಯಾಬಿನೆಟ್ ಡಿಯರ್ನೆಸ್ ರಿಲೀಫ್ (ಡಿಆರ್ ಹೈಕ್) ಅನ್ನು 4 ಪ್ರತಿಶತದಷ್ಟು ಹೆಚ್ಚಿಸಿದೆ. ಪಿಂಚಣಿದಾರರಿಗೆ 42% ದರದಲ್ಲಿ ತುಟ್ಟಿಭತ್ಯೆ ನೀಡಲಾಗುವುದು. ಪಿಂಚಣಿದಾರರ ಪಿಂಚಣಿ ಜತೆಗೆ ಮೂರು ತಿಂಗಳ ಬಾಕಿಯನ್ನೂ ನೀಡಲಾಗುವುದು.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸರ್ಕಾರ ! ವೇತನದೊಂದಿಗೆ ಸಿಗುವುದು ಅರಿಯರ್ಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Section: 
English Title: 
govt employees to get hike in salarry govt order is out
News Source: 
Home Title: 

ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ! ಹೊರ ಬಿತ್ತು ಹಣಕಾಸು ಸಚಿವಾಲಯದ ಆದೇಶ 

ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ! ಹೊರ ಬಿತ್ತು ಹಣಕಾಸು ಸಚಿವಾಲಯದ ಆದೇಶ
Yes
Is Blog?: 
No
Tags: 
Facebook Instant Article: 
Yes
Highlights: 

ಕೇಂದ್ರ ನೌಕರರಿಗೆ ಹಣಕಾಸು ಸಚಿವಾಲಯ ಭರ್ಜರಿ ಸುದ್ದಿ ನೀಡಿದೆ. 

ಕೇಂದ್ರ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದಿದೆ. 

ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಸರ್ಕಾರ ಅನುಮೋದಿಸಿದೆ. 

Mobile Title: 
ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ! ಹೊರ ಬಿತ್ತು ಹಣಕಾಸು ಸಚಿವಾಲಯದ ಆದೇಶ
Ranjitha R K
Publish Later: 
No
Publish At: 
Tuesday, April 4, 2023 - 11:24
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
2
Is Breaking News: 
No