Siddaramaiah : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ 

Siddaramaiah CM Again: ಈಗಾಗಲೇ ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆ ಭರಾಟೆ ಜೋರಾಗಿದೆ.ರಾಜ್ಯ ನಾಯಕರು ಮಾತ್ರವಲ್ಲದೇ ಯುವಕರು ಸಹ ಚುನಾವಣೆಯ ಪ್ರಚಾರದಲ್ಲಿ ಮುಳುಗಿದ್ದಾರೆ.ಇದರ ನಡುವೆ  ಯುವ ಉದ್ಯಮಿಯೊಬ್ಬ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರ ಮೊರೆ ಹೋಗಿದ್ದಾನೆ.

Written by - Zee Kannada News Desk | Last Updated : Apr 3, 2023, 12:01 PM IST
  • ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ದೇವರ ಮೊರೆ ಹೋದ ಅಭಿಮಾನಿ
  • ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪೂಜೆ
  • ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ಭಾವ ಚಿತ್ರ
Siddaramaiah :  ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ  title=

ಯಾದಗಿರಿ:  ಈಗಾಗಲೇ ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆ ಭರಾಟೆ ಜೋರಾಗಿದೆ. ಎಲ್ಲೆಂದರಲ್ಲಿ ಚುನಾವಣೆ ಅಲೆ ಎಬ್ಬಿಸಿದೆ.   ರಾಜ್ಯ ನಾಯಕರು ಅಧಿಕಾರದ ಗದ್ದುಗೆ ಎರಲು ಪೈಪೋಟಿಯಲ್ಲಿ ತಯಾರಾಗಿದ್ದಾರೆ.  ಪರ ವಿರೋಧ ಪಕ್ಷದವರು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಮತ ಪ್ರಚಾರದಲ್ಲಿ ಮುಂದಾಗಿದ್ದಾರೆ.

ರಾಜ್ಯ ನಾಯಕರು ಮಾತ್ರವಲ್ಲದೇ ಯುವಕರು ಸಹ ಚುನಾವಣೆಯ ಪ್ರಚಾರದಲ್ಲಿ ಮುಳುಗಿದ್ದಾರೆ. ರಾಜ್ಯದಲ್ಲಿ ಚುನಾವಣೆ  ಸದ್ದು ಜೋರು ಇರುವುದರಿಂದ ಅಧಿಕಾರ ಯಾರ ಕೈ ಸೇರಲಿದೆ, ಜನರ ಆಯ್ಕೆಯ ನಾಯಕ ಯಾರು ಎಂಬುವುದನ್ನು ಚುನಾವಣೆ ಫಲಿತಾಂಶದವರೆಗೂ ಕಾಯಬೇಕಿದೆ. ರಾಜ್ಯ ನಾಯಕರು ಚುನಾವಣೆ ಪ್ರಚಾರದಲ್ಲಿ ಬ್ಯೂಸಿಯಾಗಿರುವುದು ಗೊತ್ತೆಇದೆ .

ಇದನ್ನೂ ಓದಿ: Nadoja Belagallu Veeranna: ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು!

ಇದರ ನಡುವೆ ಯಾದಗಿರಿ ಜಿಲ್ಲೆಯ ಗುರು ಮಣಿಕಂಠ ಎಂಬ ಯುವ ಉದ್ಯಮಿಯೊಬ್ಬ  ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರ ಮೊರೆ ಹೋಗಿದ್ದಾನೆ.  ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಮತ್ತೆ ರಾಜ್ಯದಲ್ಲಿ ಸಿಎಂ ಆಗಬೇಕೆಂದು ಕೈಯಲ್ಲಿ ಕಾಂಗ್ರೆಸ್ ನಾಯಕ ಹಾಗೂ  ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ಭಾವ ಚಿತ್ರ ಹೀಡಿದು ಇರುಮುಡಿ ಕಟ್ಟಿ ಅಯ್ಯಪ್ಪ ಸ್ವಾಮಿ ಅಷ್ಟಾಭೀಷಕ,ಪುಷ್ಪ ಅಭಿಷೇಕ ಹಾಗೂ ಇವರಿಬ್ಬರ ಹೆಸರಿನಲ್ಲಿ ಹರಕೆ ಇಟ್ಟು ಪೂಜೆ ಸಲ್ಲಿಸಿದ್ದಾನೆ. 

ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಮಿಂಚಲು ಹೊರಟ ಹಳ್ಳಿ ಹೈದನಿಗೆ ಬೇಕಿದೆ ಸಹಾಯ ಹಸ್ತ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News