Diabetes Control: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು!

Diabete Control: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಸಿ ಶುಂಠಿ ಚಹಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಭಾವಶಾಲಿ ಸಾಬೀತಾಗುತ್ತದೆ.   

Written by - Nitin Tabib | Last Updated : Mar 31, 2023, 06:13 PM IST
  • ದೀರ್ಘಕಾಲದವರೆಗೆ ಒಂದು ವೇಳೆ ಮಧುಮೇಹಿಗಳಲ್ಲಿ ರಕ್ತದ ಮಟ್ಟ ಹೆಚ್ಚಾಗಿದ್ದರೆ,
  • ಅವರಿಗೆ ಇತರ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
  • ಇದರಿಂದ ಮೂತ್ರಪಿಂಡದ ಸಮಸ್ಯೆ ಎದುರಾಗಬಹುದು,
Diabetes Control: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು! title=
ಮಧುಮೇಹಿಗಳಿಗೆ ವರದಾನ ಈ ಚಹಾಗಳು!

Diabete Control: ಮಧುಮೇಹ ಒಂದು ರೀತಿಯ ಕಾಯಿಲೆಯಾಗಿದ್ದು, ಇದರ ರೋಗಿಗಳು ತಮ್ಮ ಆಹಾರದ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಮಧುಮೆಹಿಗಳು ಒಂದು ವೇಳೆ ತಮ್ಮ ಆಹಾರದಲ್ಲಿ ಸಕ್ಕರೆ, ಕಾರ್ಬ್ಸ್ ಹಾಗೂ ಅನಾರೋಗ್ಯಕಾರ ಆಹಾರವನ್ನು ಅಧಿಕ ಸೇವಿಸಿದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುತ್ತದೆ. ಹೀಗಾಗಿ ಮಧುಮೆಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಅಷ್ಟೇ ಅಲ್ಲ ಶರೀರವನ್ನು ಸಾಕಷ್ಟು ಚಟುವಟಿಕೆಯಿಂದ ಇಡಬೇಕಾಗುತ್ತದೆ ಹಾಗೂ ಒತ್ತಡದಿಂದ ದೂರ ಇಡಬೇಕಾಗುತ್ತದೆ. 

ದೀರ್ಘಕಾಲದವರೆಗೆ ಒಂದು ವೇಳೆ ಮಧುಮೇಹಿಗಳಲ್ಲಿ ರಕ್ತದ ಮಟ್ಟ ಹೆಚ್ಚಾಗಿದ್ದರೆ, ಅವರಿಗೆ ಇತರ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇದರಿಂದ ಮೂತ್ರಪಿಂಡದ ಸಮಸ್ಯೆ ಎದುರಾಗಬಹುದು, ಹೃದ್ರೋಗದ ಅಪಾಯ ಹೆಚ್ಚಾಗಬಹುದು ಹಾಗೂ ಕಣ್ಣುಗಳಿಗೆ ಹಾನಿ ತಲುಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಡೈಬಿಟೀಸ್ ರೋಗಿಗಳು ತಮ್ಮ ಆಹಾರದ ಕಾಳಜಿವಹಿಸಬೇಕು.

ಮಧುಮೆಹಿಗಳಿಗೆ ಹಾಲಿನ ಚಹಾ ಸೇವನೆ ಶರೀರಕ್ಕೆ ಹಾನಿ ತಲುಪಿಸುವ ಸಾಧ್ಯತೆ ಇದೆ. ತಜ್ನರ ಪ್ರಕಾರ ಮಧುಮೇಹಿಗಳು ಕಡಿಮೆ ಸಕ್ಕರೆ ಪ್ರಮಾಣ ಇರುವ ಟೋನ್ಡ್ ಮಿಲ್ಕ್ ನಿಂದ ತಯಾರಿಸಲಾಗುವ ಚಹಾ ಸೇವಿಸಬೇಕು. ಅದು ಕೂಡ ಕಡಿಮೆ ಪ್ರಮಾಣದಲ್ಲಿ. ಇದರಿಂದ ಪರಿಸ್ಥಿತಿ ಹೆಚ್ಚು ಹಾಳಾಗುವುದಿಲ್ಲ. ಮಧುಮೇಹಿಗಳು ಒಂದು ವೇಳೆ ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಬೇಕಾದರೆ ಎರಡು ವಿಧದ ಚಹಾಗಳ ಸಲಹೆಯನ್ನು ಅವರಿಗೆ ನೀಡಲಾಗುತ್ತದೆ. ಈ ಎರಡೂ ಚಹಾಗಲು ಮಧುಮೇಹಿಗಳ ಪಾಲಿಗೆ ರಾಮಬಾಣ ಉಪಾಯವಾಗಿವೆ ಎಂದು ತಜ್ನರು ಹೇಳುತ್ತಾರೆ, ಬನ್ನಿ ಆ ಎರಡು ವಿಧದ ಚಹಾಗಲು ಯಾವುವು ತಿಳಿದುಕೊಳ್ಳೋಣ,

ಗ್ರೀನ್ ಟೀ ಸೇವನೆ
ಮಧುಮೇಹಿಗಳಿಗೆ ಹಸಿರು ಚಹಾ ಸೇವನೆ ತುಂಬಾ ಲಾಭಕಾರಿಯಾಗಿದೆ. ಒಂದು ಸಂಶೋಧನಾ ವರದಿಯ ಪ್ರಕಾರ ಔಷಧೀಯ ಗುಣಗಳ ಆಗರವಾಗಿರುವ ಹಸಿರು ಚಹಾ ಎಪಿಗಲೋಕೆಟ್ಯಾಚಿನ್ ಗೆಲೆಟ್ ಅಥವಾ ಇಜಿಸಿಜಿ ಉಪ್ಪಿನ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಭಾವಶಾಲಿಗಳಾಗಿವೆ. ಹಸಿರು ಚಹಾ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮತ್ತೆ ಕೆಲ ವರದಿಗಳು ಸೂಚಿಸುತ್ತವೆ. ಹೀಗಾಗಿ ಮಧುಮೇಹಿಗಳು ನಿತ್ಯ ಎರಡು ಕಪ್ ಹಸಿರು ಚಹಾ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ.

ಹಸಿರು ಚಹಾ ಹೇಗೆ ತಯಾರಿಸಬೇಕು?
ಹಸಿರು ಚಹಾ ತಯಾರಿಸಲು ಎಲ್ಲಕ್ಕಿಂತ ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಹಾಕಿ ಸರಿಯಾಗಿ ಕುದಿಸಿಕೊಳ್ಳಿ . ನಂತರ ಅದಕ್ಕೆ ಒಂದು ಚಮಚ ಹಸಿರು ಚಹಾ ಬೆರೆಸಿ ಸೋಸಿ ಸೇವನೆ ಮಾಡಿ. 

ಇದನ್ನೂ ಓದಿ-Diabetes & BP: ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ಕೂಡ ನಿಯಂತ್ರಿಸುತ್ತೆ ಈ ಎಣ್ಣೆ!

ಹಸಿ ಶುಂಠಿ ಚಹಾ
ಸಾಕಷ್ಟು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ ಚಹಾ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಚಹಾದಲ್ಲಿ ಹಸಿ ಶುಂಠಿ ಬೆರಸಿ ಸೇವಿಸುವುದರಿಂದ ದೇಹದಲ್ಲಿ ನೈಸರ್ಗಿಕವಾಗಿ ಇನ್ಸುಲಿನ್ ಸ್ರವಿಕೆಯಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. 

ಇದನ್ನೂ ಓದಿ-Health Tips: ಶರೀರವನ್ನು ನಿರ್ವಿಷಗೊಳಿಸಬೇಕೆ? ಈ ಸೂಪರ್ ಫುಡ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News