ರೈತರ ಆದಾಯ ಹೆಚ್ಚಿಸಲು ಹೊಸ ಕ್ರಮಕ್ಕೆ ಮುಂದಾದ ಸರ್ಕಾರ !

Shree Cement and Cow Dung:ಛತ್ತೀಸ್‌ಗಢ ಸರ್ಕಾರವು ಗೋ ಪಾಲಕರ ಆದಾಯ ಹೆಚ್ಚಿಸಲು ಗೋಧನ್ ನ್ಯಾಯ ಯೋಜನೆಯನ್ನು ಕೂಡಾ ಜಾರಿಗೆ ತಂದಿದೆ. ಈ ಯೋಜನೆಯಡಿ ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಸರಕಾರವೇ ಖರೀದಿಸುತ್ತಿದೆ.

Written by - Ranjitha R K | Last Updated : Mar 23, 2023, 11:50 AM IST
  • ಕಲ್ಲಿದ್ದಲಿನ ಬದಲು ಗೋವಿನ ಸಗಣಿ
  • ಪ್ರತಿ ದಿನ 10 ಮೆಟ್ರಿಕ್ ಟನ್ ಹಸುವಿನ ಸಗಣಿ ಖರೀದಿ
  • ರೈತರ ಆದಾಯ ಹೆಚ್ಚಿಸಲು ಸರ್ಕಾರದ ಕ್ರಮ
ರೈತರ ಆದಾಯ ಹೆಚ್ಚಿಸಲು ಹೊಸ ಕ್ರಮಕ್ಕೆ ಮುಂದಾದ ಸರ್ಕಾರ !  title=

Shree Cement and Cow Dung : ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಪ್ರಧಾನ ಮಂತ್ರಿ ಬಿಮಾ ಫಸಲ್ ಯೋಜನೆ ಮೂಲಕ  ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗಷ್ಟೇ ಛತ್ತೀಸ್‌ಗಢ ಸರ್ಕಾರವು ಗೋ ಪಾಲಕರ ಆದಾಯ ಹೆಚ್ಚಿಸಲು ಗೋಧನ್ ನ್ಯಾಯ ಯೋಜನೆಯನ್ನು ಕೂಡಾ ಜಾರಿಗೆ ತಂದಿದೆ. ಈ ಯೋಜನೆಯಡಿ ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಸರಕಾರವೇ ಖರೀದಿಸುತ್ತಿದೆ.

ಕಲ್ಲಿದ್ದಲಿನ ಬದಲು ಗೋವಿನ ಸಗಣಿ : 
ರಾಜ್ಯ ಸರ್ಕಾರವು ಗೋ ಪಾಲಕರಿಂದ ಖರೀದಿಸಿದ ಗೋ ಮೂತ್ರ ಮತ್ತು ಸಗಣಿಯ ಬದಲಾಗಿ ರೈತರಿಗೆ ನಿಗದಿತ ಮೊತ್ತವನ್ನು ನೀಡುತ್ತದೆ. ಈ ಮೂಲಕ ರೈತರ ಆದಾಯ ಹೆಚ್ಚಿಸುವ ಪ್ರಯತ್ನಕ್ಕ್ ಕೈ ಹಾಕಿದೆ. ಹಸುವಿನ ಸಗಣಿ ಖರೀದಿಗೆ ಸಂಬಂಧಿಸಿದಂತೆ ಸಿಮೆಂಟ್ ತಯಾರಕ ಕಂಪನಿಯಾದ ಶ್ರೀ ಸಿಮೆಂಟ್ ಮತ್ತು ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಿಮೆಂಟ್ ಕಂಪನಿಯು ಕಲ್ಲಿದ್ದಲು ಬದಲಿಗೆ ಗೋವಿನ ಸಗಣಿ ಬಳಸುತ್ತದೆ.  ಗ್ರೀನ್ ಎನರ್ಜಿಯನ್ನು ಉತ್ತೇಜಿಸುವ ಸಲುವಾಗಿ ಛತ್ತೀಸ್‌ಗಢ ಸರ್ಕಾರ ಈ ಹೆಜ್ಜೆ ಇಟ್ಟಿದೆ. 

ಇದನ್ನೂ ಓದಿ : Cheapest Best Mileage Cars: ಬೆಲೆ 7 ಲಕ್ಷಕ್ಕಿಂತ ಕಡಿಮೆ, ಮೈಲೆಜ್ 34 ಕಿ.ಮೀಗೂ ಅಧಿಕ, ಇಲ್ಲಿವೆ 4 ಅತಿ ಹೆಚ್ಚು ಮಾರಾಟಗೊಳ್ಳುವ ಕಾರುಗಳು!

ಪ್ರತಿ ದಿನ 10 ಮೆಟ್ರಿಕ್ ಟನ್ ಹಸುವಿನ ಸಗಣಿ ಖರೀದಿ : 
ಮಾಹಿತಿಯ ಪ್ರಕಾರ ಶ್ರೀ ಸಿಮೆಂಟ್ ಕಂಪನಿಯು ಗ್ರೀನ್ ಎನರ್ಜಿಯನ್ನು  ತ್ತೇಜಿಸಲು ಕಲ್ಲಿದ್ದಲಿನ ಬದಲಿಗೆ ಪ್ರತಿ ದಿನ 10 ಮೆಟ್ರಿಕ್ ಟನ್ ಹಸುವಿನ ಸಗಣಿ ಖರೀದಿಸಲಿದೆ. ಸಿಮೆಂಟ್ ಕಂಪನಿ ಮತ್ತು ಛತ್ತೀಸ್‌ಗಢ ಸರ್ಕಾರದ ನಡುವಿನ ಒಪ್ಪಂದದ ಅಡಿಯಲ್ಲಿ, ಬಲೋದಬಜಾರ್-ಭಟಪಾರಾ ಜಿಲ್ಲೆಯ ಸಿಮ್ಗಾ ಬ್ಲಾಕ್‌ನಲ್ಲಿರುವ ಶ್ರೀ ಸಿಮೆಂಟ್ ಇಂಡಸ್ಟ್ರಿ ಪರವಾಗಿ ಹಸುವಿನ ಸಗಣಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

 8.20 ಕೋಟಿ ಬಿಡುಗಡೆ : 
ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ 2020 ರಲ್ಲಿ 'ಗೋಧನ್ ನ್ಯಾಯ್ ಯೋಜನೆ'ಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ, ರಾಜ್ಯದ ದನಕರುಗಳು ಮತ್ತು ಗೋಶಾಲೆಗಳಿಂದ ಹಸುವಿನ ಸಗಣಿ ಖರೀದಿಸಲಾಗುತ್ತಿದೆ. ಹಸುವಿನ ಸಗಣಿಯಿಂದ ಸಾವಯವ ಗೊಬ್ಬರ, ದೀಪಗಳು, ಅಗರಬತ್ತಿಗಳು ಮತ್ತು ಗುಲಾಲ್ ಇತ್ಯಾದಿಗಳನ್ನು ತಯಾರಿಸಲಾಗುತ್ತಿದೆ. ಯೋಜನೆಯ ಪ್ರಯೋಜನವನ್ನು ಪಡೆಯುವ ಗೋಪಾಲಕರಿಗೆ ಡಿಸೆಂಬರ್ 2022 ರವರೆಗೆ,ರಾಜ್ಯ ಸರ್ಕಾರದಿಂದ ರೂ 8.20 ಕೋಟಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ಈಗ ಯಾವುದೇ ದಾಖಲೆಗಳಿಲ್ಲದೆಯೂ ಆಧಾರ್ ಕಾರ್ಡ್ ಮಾಡಿಸಬಹುದು!

ಈ ಒಪ್ಪಂದದ ನಂತರ, ಶ್ರೀ ಸಿಮೆಂಟ್ ಕಂಪನಿಯು ಕಲ್ಲಿದ್ದಲಿನ ಬದಲಿಗೆ ಗೋಮಯವನ್ನು ಸುಡಲಾಗುತ್ತದೆ. ಸಿಮೆಂಟ್ ತಯಾರಿಸಲು ಕುಲುಮೆಗಳಲ್ಲಿ ಬಳಸುವ ಕಲ್ಲಿದ್ದಲಿನ ಬದಲಿಗೆ ಈಗ ಹಸುವಿನ ಸಗಣಿ  ಬಳಸಲಾಗುತ್ತದೆ. ಈ ಮೂಲಕ ಕಂಪನಿಗೆ ಕಲ್ಲಿದ್ದಲು ವೆಚ್ಚವೂ ಕಡಿಮೆಯಾಗಲಿದೆ. ರೈತರ ಆದಾಯವೂ ಹೆಚ್ಚಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News