ನಾಳೆ ಮೇಷ ರಾಶಿಯಲ್ಲಿ ರಾಹು-ಚಂದ್ರರ ಮೈತ್ರಿಯಿಂದ 'ಗ್ರಹಣ ದೋಷ ಯೋಗ', ಈ ರಾಶಿಗಳ ಜನರಿಗೆ ಎಚ್ಚರಿಕೆ!

Grahan Yog In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಮೇಷ ರಾಶಿಯಲ್ಲಿ ಗ್ರಹಣ ದೋಷ ಯೋಗ ನಿರ್ಮಾಣಗೊಳ್ಳುತ್ತಿದೆ. ಇದು ಒಟ್ಟು 4 ರಾಶಿಗಳ ಜಾತಕದವರ ಪಾಲಿಗೆ ನಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಹೀಗಾಗಿ ಈ ಅವಧಿಯಲ್ಲಿ ಅವರಿಗೆ ಧನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಬನ್ನಿ ಯಾರಿಗೆ ಇದರಿಂದ ಹಾನಿ ತಿಳಿದುಕೊಳ್ಳೋಣ ಬನ್ನಿ,
 

Grahan Dosh Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ನಿರ್ಧಿಷ್ಟ ಕಾಲಾಂತರದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ ಮತ್ತು ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ  ಶುಭ ಮತ್ತು ಅಶುಭ ಯೋಗವನ್ನು ಸೃಷ್ಟಿಸುತ್ತವೆ. ಇದರ ಪರಿಣಾಮವು ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳ ಮೇಲೆ ಗೋಚರಿಸುತ್ತದೆ. ಮಾರ್ಚ್ 23 ರಂದು ಮೇಷ ರಾಶಿಯಲ್ಲಿ ರಾಹು ಮತ್ತು ಚಂದ್ರರ ಮೈತ್ರಿಯು ರೂಪುಗೊಳ್ಳಲಿದೆ. ಇದರಿಂದ 'ಗ್ರಹಣ ಯೋಗ' ಸೃಷ್ಟಿಯಾಗುತ್ತಿದೆ. ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ. ಆದರೆ 4 ರಾಶಿಗಳ ಜನರು ಈ ಗ್ರಹಣ ದೋಷ ಯೋಗಾದ ಸಮಯದಲ್ಲಿ ಜಾಗರೂಕರಾಗಿರಬೇಕು. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-​ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಚತುರ್ಗ್ರಹಿ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಾಗಮನ ಭಾಗ್ಯ ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವೃಶ್ಚಿಕ ರಾಶಿ- ಗ್ರಹಣ ಯೋಗವು ವೃಶ್ಚಿಕ ರಾಶಿಯವರಿಗೆ ಪ್ರತಿಕೂಲ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಷಷ್ಟಮ ಭಾವದಲ್ಲಿ ರಾಹು ಮತ್ತು ಚಂದ್ರರ ಮೈತ್ರಿಯು ರೂಪುಗೊಳ್ಳಲಿದೆ. ಹೀಗಾಗಿ ರಹಸ್ಯ ಶತ್ರುಗಳು ಈ ಅವಧಿಯಲ್ಲಿ  ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಪ್ರಮುಖ ಕೆಲಸ ನಿಂತು ಹೋಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಈ ಅವಧಿಯಲ್ಲಿ ಆದಷ್ಟು ವಾಗ್ವಾದ ತಪ್ಪಿಸಿ. ಸಾಲ ನೀಡುವುದನ್ನು ಸಹ ತಪ್ಪಿಸಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.  

2 /4

ಮಕರ ರಾಶಿ- ಗ್ರಹಣ ಯೋಗದ ರೂಪಗೊಳ್ಳುವಿಕೆ ಮಕರ ರಾಶಿಯ ಜನರಿಗೆ ಹಾನಿಕಾರಕ ಸಾಬೀತಾಗಬಹುದು. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದೆ. ಮನದಲ್ಲಿ ಯಾವುದೋ ಒಂದು ಚಿಂತೆ ನಿಮ್ಮನ್ನು ಕಾಡಲಿದೆ. ಇದರೊಂದಿಗೆ ಕುಟುಂಬದಲ್ಲಿ ಯಾರೊಂದಿಗಾದರೂ ಜಗಳಗಳ ಉಂಟಾಗುವ ಸಾಧ್ಯತೆ ಇದೇ. ಏಕೆಂದರೆ ಪ್ರಸ್ತುತ ನಿಮ್ಮ ಮೇಲೆ ಸಾಡೇಸಾತಿ ನಡೆಯುತ್ತಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.  

3 /4

ವೃಷಭ ರಾಶಿ- ಗ್ರಹಣ ಯೋಗವು ನಿಮಗೆ ಸ್ವಲ್ಪ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ನೀವು ಅನಗತ್ಯ ವೆಚ್ಚಗಳನ್ನು ತಪ್ಪಿಸಬೇಕು, ಏಕೆಂದರೆ ಅದರಿಂದ ನಿಮ್ಮ ಬಜೆಟ್ ಹದಗೆಡಬಹುದು. ಜೊತೆಗೆ ಮಾನಸಿಕ ಒತ್ತಡವೂ ಎದುರಾಗಬಹುದು. ಈ ಅವಧಿಯಲ್ಲಿ ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಡಿ ಅಥವಾ ಮಾಡಿಕೊಳ್ಳಬೇಡಿ, ಜೊತೆಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಅದೇ ಸಮಯದಲ್ಲಿ, ನೀವು ಪ್ರಯಾಣಿಸಬಹುದು, ಆದರೆ ಅದು ವ್ಯರ್ಥವಾಗುತ್ತದೆ. ಅಲ್ಲದೆ, ಈ ಅವಧಿಯಲ್ಲಿ ದಾಖಲೆಗಳು ಕಳೆದುಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆದಷ್ಟು ಕೋಪವನ್ನು ತಪ್ಪಿಸಲು ಯತ್ನಿಸಿ.  

4 /4

ಕನ್ಯಾ ರಾಶಿ- ಗ್ರಹಣ ಯೋಗವು ನಿಮ್ಮ ಪಾಲಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಅಷ್ಟಮ ಭಾವದಲ್ಲಿ ರಾಹು ಮತ್ತು ಚಂದ್ರರ ಈ ಮೈತ್ರಿ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನೆಗಡಿ, ಶೀತ, ಜ್ವರ ಬರಬಹುದು. ಇದರೊಂದಿಗೆ ಮನಸ್ಸಿನಲ್ಲಿ ಚಂಚಲತೆ ಇರಲಿದೆ, ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗದಿರಬಹುದು. ಆದ್ದರಿಂದ ಈ ಸಮಯದಲ್ಲಿ ಕೆಲಸ ಬದಲಾಯಿಸಬೇಡಿ. ಈ ಅವಧಿಯಲ್ಲಿ ಮಾನಸಿಕ ಒತ್ತಡವೂ ಉಂಟಾಗಬಹುದು. ಇದೇ ವೇಳೆ, ವ್ಯಾಪಾರಿಗಳು ಯಾವುದೇ ಒಪ್ಪಂದಕ್ಕೆ ಸಹಿ ಹಾಕಬಾರದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ  ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)