Public Provident Fund investment: ಖಾತರಿಯ ಆದಾಯ ನಿರೀಕ್ಷಿಸುತ್ತಿರುವ ಜನರಿಗೆ PPF ಹೂಡಿಕೆ ಅತ್ಯುತ್ತಮ ಮಾರ್ಗವಾಗಿದೆ. ನೀವು PPFನಲ್ಲಿ ಶೇ.7.1ರಷ್ಟು ಬಡ್ಡಿ ಪಡೆಯುತ್ತೀರಿ
ಸಾರ್ವಜನಿಕ ಭವಿಷ್ಯ ನಿಧಿ ಹೂಡಿಕೆ: ನೀವು PPFನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದಿರಬೇಕು. ಖಾತರಿಯ ಆದಾಯ ನಿರೀಕ್ಷಿಸುತ್ತಿರುವ ಜನರಿಗೆ PPF ಹೂಡಿಕೆ ಅತ್ಯುತ್ತಮ ಮಾರ್ಗವಾಗಿದೆ. ನೀವು PPFನಲ್ಲಿ ಶೇ.7.1ರಷ್ಟು ಬಡ್ಡಿ ಪಡೆಯುತ್ತೀರಿ ಮತ್ತು ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಯಾವುದೇ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿಗೆ ಲಿಂಕ್ ಮಾಡಲಾದ 1 ಖಾತೆಯನ್ನು ಮಾತ್ರ ನೀವು ತೆರೆಯಬಹುದು. ಆದರೆ ಎಫ್ಡಿ, ಆರ್ಡಿಯಲ್ಲಿ ಹಲವು ಬಾರಿ ಖಾತೆ ತೆರೆಯಬಹುದು. ಅದರೆ ಇಲ್ಲಿ 1 ಖಾತೆ ಮಾತ್ರ ಮಾನ್ಯವಾಗಿರುತ್ತದೆ.
PPFನಲ್ಲಿ ನೀವು ಉಳಿತಾಯ ಖಾತೆ, RD ಖಾತೆಯಂತಹ ಜಂಟಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಇದರಲ್ಲಿ ಒಬ್ಬರ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. ಆದರೆ ಇದರಲ್ಲಿ ನೀವು ಯಾರನ್ನಾದರೂ ನಾಮಿನಿ ಮಾಡುವುದು ಅವಶ್ಯಕ.
ಇತರ ಯೋಜನೆಗಳಿಗೆ ಹೋಲಿಸಿದರೆ ನೀವು PPFನಲ್ಲಿ ಶೇ.7.1ರಷ್ಟು ಬಡ್ಡಿ ಪಡೆಯುತ್ತೀರಿ. ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.7.6 ಬಡ್ಡಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಶೇ.8 ಬಡ್ಡಿ, ಮಹಿಳಾ ಸಮ್ಮಾನ್ ಬಚತ್ ಪತ್ರಕ್ಕೆ ಶೇ.7.5ರ ಬಡ್ಡಿ ಸಿಗುತ್ತದೆ.
ಒಮ್ಮೆ ನೀವು PPFನಲ್ಲಿ ಹೂಡಿಕೆ ಮಾಡಿದ್ರೆ ನೀವು 15 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡಬೇಕು. ಇದು ಇತರ ಯೋಜನೆಗಳಂತೆ ಅಲ್ಲ. ಇತರ ಯೋಜನೆಗಳಲ್ಲಿ ನಿಮ್ಮ ಆಯ್ಕೆಯ ಪ್ರಕಾರ ನೀವು 1, 2, 3, 5, 10ವರ್ಷಗಳವರೆಗೆ ಹೂಡಿಕೆ ಮಾಡಬಹುದು.
NRIಗಳಿಗೆ PPFನಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದ ನಂತರ ನೀವು NRI ಆಗಿದ್ದರೆ, ನಿಮ್ಮ ಖಾತೆಯೊಂದಿಗೆ ನೀವು ಮುಂದುವರಿಯಬಹುದು.