ರಾಣಾ
ಜೋಗಿ ಪ್ರೇಮ್ ನಿರ್ದೇಶನದ 'ಏಕ್ಲವ್ಯಾ' ಸಿನಿಮಾ ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ತೆರೆಗೆ ಬಂದಿತ್ತು. ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ರೀಷ್ಮಾ ನಾಣಯ್ಯ, ರಚಿತಾ ರಾಮ್ ಲೀಡ್ ರೋಲ್ಗಳಲ್ಲಿ ಮಿಂಚಿದ್ದರು. ಇದು ಹೀರೊ ಆಗಿ ರಾಣಾ ಚೊಚ್ಚಲ ಪ್ರಯತ್ನ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ನಟನೆಯ ವಿಚಾರದಲ್ಲಿ ರಾಣಾ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದರು. ಇದೀಗ ಪ್ರೇಮ್ ಶಿಷ್ಯನ ಚಿತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ.
ವಿಕ್ರಮ್ ರವಿಚಂದ್ರನ್
ನಟ ರವಿಚಂದ್ರನ್ ಕಿರಿಯ ಪುತ್ರ ವಿಕ್ರಂ ಈ ವರ್ಷ 'ತ್ರಿವಿಕ್ರಮ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಮೊದಲ ವಾರವೇ ಸಿನಿಮಾ ಪ್ರೇಕ್ಷಕರ ಬರ ಎದುರಿಸಿದ್ದು ಸುಳ್ಳಲ್ಲ. ಚಿತ್ರದಲ್ಲಿ ಆಕಾಂಕ್ಷ ಶರ್ಮಾ ನಾಯಕಿಯಾಗಿ ಮಿಂಚಿದ್ದರು. ರಾಮ್ಕೋ ಸೋಮಣ್ಣ ಸಿನಿಮಾ ನಿರ್ಮಾಣ ಮಾಡಿದ್ದರು.
ಝೈದ್ ಖಾನ್
ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಕೂಡ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗಪ್ಪಳಿಸಿತ್ತು. ಚಿತ್ರದಲ್ಲಿ ಸೋನಲ್ ಮಂತೆರಿಯೋ ನಾಯಕಿಯಾಗಿ ಮಿಂಚಿದ್ದರು. ಕಾಶಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿತ್ತು. ಝೈದ್ ಖಾನ್ ಮೊದಲ ಚಿತ್ರದಲ್ಲೇ ಅನುಭವಿ ನಟನ ರೀತಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ.
ಇದನ್ನೂ ಓದಿ-ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್ನ 2ನೇ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ!
ಮೇಘಾ ಶೆಟ್ಟಿ
ಕಿರುತೆರೆಯ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮನೆ ಮಾತಾದ ನಟಿ ಮೇಘಾ ಶೆಟ್ಟಿ. ಈಗಾಗಲೇ ಕಿರಿತೆರೆಯಿಂದ ಸಾಕಷ್ಟು ನಟನಟಿಯರು ಬೆಳ್ಳಿತೆರೆಗೆ ಬಂದು ಸಕ್ಸಸ್ ಕಂಡಿದ್ದಾರೆ. ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ 'ತ್ರಿಬಲ್ ರೈಡಿಂಗ್'. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮೇಘಾ ಮಿಂಚಿದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಆದರೆ ಒಂದಷ್ಟು ಹೊಸ ಅವಕಾಶಗಳು ಆಕೆ ಸಿಕ್ಕಿದೆ.
ಅಕ್ಷಿತ್ ಶಶಿಕುಮಾರ್
ಸುಪ್ರೀಂ ಹೀರೊ ಶಶಿಕುಮಾರ್ ಪುತ್ರ ಅಕ್ಷಿತ್ ಕೂಡ ಬಣ್ಣದಲೋಕಕ್ಕೆ ಕಾಲಿಟ್ಟರು. ಆದರೆ ಅಕ್ಷಿತ್ ನಟಿಸಿದ 'ಸೀತಾಯಣ' ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ಈ ಸಿನಿಮಾ ಏಕಕಾಲಕ್ಕೆ ತೆಲುಗಿನಲ್ಲೂ ತೆರೆಗೆ ಬಂದಿತ್ತು. ಆದರೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಮತ್ತೆರಡು ಸಿನಿಮಾಗಳಿಗೆ ಅಕ್ಷಿತ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ರೀಷ್ಮಾ ನಾನಯ್ಯ
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರೀಷ್ಮಾ ನಾನಯ್ಯ ಅವರನ್ನು ಸ್ಯಾಂಡಲ್ವುಡ್ಗೆ ಕರೆತಂದಿದ್ದು ಜೋಗಿ ಪ್ರೇಮ್. ‘ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾಗೆ ನಾಯಕಿಯಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ರೀಷ್ಮಾ ನಾನಯ್ಯ ವಾಮನ, ಮಾರ್ಗ, ಬಾನ ದಾರಿಯಲ್ಲಿ ಸಿನಿಮಾಗಲ್ಲಿ ನಟಿಸಿದ್ದು, ಈ ವರ್ಷ ತೆರೆಗೆ ಬರಲಿವೆ.
ಧೀರೇನ್ ರಾಮ್ ಕುಮಾರ್
ಅಣ್ಣಾವ್ರ ಮೊಮ್ಮಗ ರಾಮ್ಕುಮಾರ್ ಪುತ್ರ ಧೀರೇನ್ ಅಂತೂ ಇಂತೂ ಈ ವರ್ಷ ಚಿತ್ರರಂಗಕ್ಕೆ ಕಾಲಿಟ್ಟರು. ಬಹಳ ಹಿಂದೆ ಸೆಟ್ಟೇರಿದ್ದ 'ಶಿವ 143' ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಿತ್ತು. ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ರಗಡ್ ಲುಕ್ನಲ್ಲಿ ಧೀರೇನ್ ಅಬ್ಬರಿಸಿದ್ದರು. ಮಾನ್ವಿತಾ ಜೊತೆ ಧೀರೇನ್ ಬೋಲ್ಡ್ ದೃಶ್ಯಗಳು ಹುಬ್ಬೇರಿಸಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ.
ತಪಸ್ವಿನಿ ಪೂಣಚ್ಚ
ಮೂಲತಃ ಕೊಡಗಿನವರಾದ ತಪಸ್ವಿನಿ ಪೂಣಚ್ಚ ರಿಷಭ್ ಶೆಟ್ಟಿಯವರ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಚಿತ್ರಕ್ಕಾಗಿ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದ ಚಿತ್ರತಂಡ ತಪಸ್ವಿನಿಯನ್ನು ಆಡಿಷನ್ ಮೂಲಕ ಆಯ್ಕೆ ಮಾಡಿತ್ತು.
ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಬಳಿಕ ಹಲವಾರು ಅವಕಾಶ ಗಿಟ್ಟಿಸಿಕೊಂಡ ಅವರು ಸದ್ಯ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಯಶಾ ಶಿವಕುಮಾರ್
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯಶಾ ಶಿವಕುಮಾರ್ ಅವರು, ಪದವಿಪೂರ್ವ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಶಿವರಾಜ್ ಕುಮಾರ್ ಅಭಿನಯನಾದ ಬೈರಾಗಿ, ಪ್ರಜ್ವಲ್ ದೇವರಾಜ್ ಅಭಿನಯದ ಗಣ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾದಲ್ಲಿ ನಟಿಸಿದರು. ಆದರೆ. ಈ ಸಿನಿಮಾಗಳು ಅಷ್ಟು ಯಶಸ್ಸು ಕಾಣಲಿಲ್ಲ.
ನೀತಾ ಅಶೋಕ್
ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ನೀತಾ ಅಶೋಕ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು. ತಮ್ಮ ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು.
ಇದನ್ನೂ ಓದಿ-ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.