ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ!

ಹೊಟ್ಟೆ ಬೊಜ್ಜು ಕರಗಿಸಲು ನೀವೇನಾದರೂ ಡಯಟ್ ಮಾಡುತ್ತಿದ್ದರೆ, ಅದರಲ್ಲಿ ಮೊಟ್ಟೆಯನ್ನು ಸೇರಿಸುವುದು ಒಳ್ಳೆಯದು. 

Last Updated : Jan 3, 2019, 02:11 PM IST
ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ! title=

ನವದೆಹಲಿ: ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಹಲವರು ಸಾಕಷ್ಟು ಡಯಟ್ ಪ್ಲಾನ್ ಗಳನ್ನು ಅನುಸರಿಸುತ್ತಾರೆ. ಆದರೆ ತಾವು ಪಾಲಿಸುತ್ತಿರುವ ಡಯಟ್ ಪ್ಲಾನ್'ನಲ್ಲಿ ಪ್ರೋಟಿನ್ ಅಂಶಗಳು ಇವೆಯೇ ಎಂಬುದರ ಬಗ್ಗೆ ಹೆಚ್ಚು ಗಮನಹರಿಸಬೇಕು. ಡಯಟ್ ಸಂದರ್ಭದಲ್ಲಿ ದೇಹಕ್ಕೆ ಪ್ರೊಟೀನಿನ ಅವಶ್ಯಕತೆ ಬಹಳ ಇರುತ್ತದೆ. ಇದು ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸಿ, ದೇಹದ ತೂಕವನ್ನು ನಿಯಂತ್ರಿಸುವ ಹಾರ್ಮೋನುಗಳನ್ನಾಗಿಸುತ್ತದೆ. 

ಹೊಟ್ಟೆ ಬೊಜ್ಜು ಕರಗಿಸಲು ನೀವೇನಾದರೂ ಡಯಟ್ ಮಾಡುತ್ತಿದ್ದರೆ, ಅದರಲ್ಲಿ ಮೊಟ್ಟೆಯನ್ನು ಸೇರಿಸುವುದು ಒಳ್ಳೆಯದು. ಮೊಟ್ಟೆಯಲ್ಲಿ ಹೆಚ್ಚು ಪ್ರೋಟೀನ್ ಅಂಶವಿದ್ದು, ಇದನ್ನು ನಿಮ್ಮ ಪ್ರತಿನಿತ್ಯ ಆಹಾರಕ್ರಮದಲ್ಲಿ ಸೇವಿಸುವುದರಿಂದ ನೀವೇ ನಂಬಲಾಗದಷ್ಟು ತೂಕ ಇಳಿಕೆಯಾಗಲಿದೆ. 

ಮೊಟ್ಟೆಯಲ್ಲಿ ಕ್ಯಾಲೋರಿ ಕಡಿಮೆ ಇದೆಯಲ್ಲದೆ ಬೇಗನೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಪ್ರೋಟೀನ್, ಕಬ್ಬಿಣ, ಫಾಸ್ಪರಸ್ ಮತ್ತು ವಿಟಮಿನ್ ಅಂಶಗಳು ಮೊಟ್ಟೆಯಲ್ಲಿ ಇರುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ದೊರೆಯುವುದರೊಂದಿಗೆ ಆರೋಗ್ಯಯುತವಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. 

Trending News