Swara Bhaskar Wedding: ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೋಸ್ಟ್ ಒಂದು ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ: Astro Tips: ಗ್ರಹಣದ ಸಮಯದಲ್ಲಿ ಮಾಡುವ ಈ ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ!
ತಮ್ಮ ವಿವಾಹದ ಬಗ್ಗೆ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವರಾ ಭಾಸ್ಕರ್ ಬಹಿರಂಗಪಡಿಸಿದ್ದರು. ಸ್ವರಾ ಭಾಸ್ಕರ್ ಅವರು ದಿಢೀರ್ ಆಗಿ ಮದುವೆಯಾಗಿದ್ದನ್ನು ಕಂಡ ಅವರ ಅಭಿಮಾನಿಗಳು ಶಾಕ್ ಕೂಡ ಆಗಿದ್ದರು.
ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಬಳಿಕ ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಸಹ ಹೊಂದಿದ್ದಾರೆ.
ಇನ್ನು ಸ್ವರಾ ಭಾಸ್ಕರ್ ಅವರನ್ನು ಬಾಲಿವುಡ್ನ ಪ್ರಸಿದ್ಧ ನಟಿ ಎಂದು ಪರಿಗಣಿಸಲಾಗಿದೆ. ಇವರ ಮದುವೆಯ ಸುದ್ದಿ ಹೊರಬರುತ್ತಿದ್ದಂತೆ ಸ್ವರಾ ಭಾಸ್ಕರ್ ಮತ್ತು ಅವರ ಪತಿ ಫಹದ್ ಇಬ್ಬರನ್ನೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಸ್ವರಾ ಈ ಹಿಂದೆ ಮಾಡಿರುವ ಟ್ವೀಟ್ ಒಂದನ್ನು ಹಿಡಿದುಕೊಂಡು ಅಂತರ್ಜಾಲದಲ್ಲಿ ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ಇನ್ನು ಈ ಪೋಸ್ಟ್ ಗೆ ಜನ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ.
ಕೆಲವು ಸಮಯದ ಹಿಂದೆ ಸ್ವರಾ ಭಾಸ್ಕರ್ ಫಹಾದ್ ಅಹ್ಮದ್ ಅವರ ಹುಟ್ಟುಹಬ್ಬದಂದು ಶುಭ ಹಾರೈಸಿದ್ದರು. ಈ ಟ್ವೀಟ್ ನಲ್ಲಿ ಫಹದ್ ಅವರನ್ನು ‘ಸಹೋದರ’ ಎಂದೂ ಕರೆದಿದ್ದಾರೆ. ಈ ವಿಷಯವನ್ನು ಹಿಡಿದುಕೊಂಡು ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಸೇರಬೇಕಾಗುತ್ತದೆ !
ಸ್ವರಾ ಭಾಸ್ಕರ್ ತಮ್ಮ ಮದುವೆಯ ದಿನ ತನ್ನ ತಾಯಿಯ ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.