PF Withdrawal New Rule: ನೀವು ಕೂಡ ಪಿಎಫ್ ಚಂದಾದಾರರಾಗಿದ್ದರೆ ಈ ಸಂತಸದ ಸುದ್ದಿ ನಿಮಗಾಗಿ. ಇನ್ಮುಂದೆ ನೀವು ಪಿಎಫ್ ಬ್ಯಾಲೆನ್ಸ್ ಹಿಂಪಡೆದ ಮೇಲೆ ನಿಮಗೆ ಟಿಡಿಎಸ್‌ನಲ್ಲಿ ಪರಿಹಾರ ಸಿಗಲಿದೆ. ವಾಸ್ತವದಲ್ಲಿ, 2023 ರ ಕೇಂದ್ರ ಬಜೆಟ್‌ನಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿಯಿಂದ (ಇಪಿಎಫ್) ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್) ಹಿಮ್ಪದೆದುಕೊಳ್ಳುವ ನಿಮಯಗಳಲ್ಲಿ ಕೇಂದ್ರ ಹಣಕಾಸು ಸಚಿವೆ ಬದಲಾವಣೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಕೆಲವು ಕಾರಣಗಳಿಗಾಗಿ ನೀವು 5 ವರ್ಷಗಳ ಅವಧಿಯ ಮೊದಲು ನಿಮ್ಮ PF ಬ್ಯಾಲೆನ್ಸ್ ಅನ್ನು ಹಿಂಪಡೆಯಲು ಬಯಸಿದರೆ ಮತ್ತು ನಿಮ್ಮ PAN ಕಾರ್ಡ್ ಲಿಂಕ್ ಆಗಿರದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಈಗ ಶೇ.30 ಬದಲಿಗೆ ಶೇ.20ರಷ್ಟು TDS ಅನ್ನು ಪಾವತಿಸಬೇಕಾಗಾಲಿದೆ. ಈ ಹೊಸ ನಿಯಮ 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿದೆ. ಆದರೆ, ಪ್ಯಾನ್ ಲಿಂಕ್ ಮಾಡದ ಖಾತೆಗಳಿಗೆ ಈ ನಿಯಮಗಳು ಅನ್ವಯಿಸಲಿದೆ.
ಮೊದಲಿಗಿಂತ ಕಡಿಮೆ ಟಿಡಿಎಸ್ ಪಾವತಿಸಬೇಕಾಗಲಿದೆ
ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಹೂಡಿಕೆ ಮಾಡುವುದು ಯಾವುದೇ ಉದ್ಯೋಗಿ ವ್ಯಕ್ತಿಗೆ ಒಂದು ಉತ್ತಮ ಆಯ್ಕೆಯಾಗಿದೆ. ವೇತನ ಪಡೆಯುವ ವರ್ಗದ ಜನರ ವೇತನದ ಒಂದು ಭಾಗವನ್ನು ಅವರ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಅದರ ಮೇಲೆ ಸರ್ಕಾರವು ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಪಿಎಫ್ ಬ್ಯಾಲೆನ್ಸ್ ಭವಿಷ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಲ್ಲಿ ಜನರಿಗೆ ಸಹಾಯ ಮಾಡುತ್ತದೆ. ಅನೇಕ ಬಾರಿ ಅಗತ್ಯ ಅಥವಾ ಕಷ್ಟದ ಸಮಯದಲ್ಲಿ, ನಾವು 5 ವರ್ಷಗಳ ಮೊದಲು ಪಿಎಫ್ ಬ್ಯಾಲೆನ್ಸ್ ಅನ್ನು ಹಿಂಪಡೆಯಬೇಕಾಗುತ್ತದೆ. ಇಂತಹ ಸಮಯದಲ್ಲಿ ಖಾತೆದಾರರು ಟಿಡಿಎಸ್ ಪಾವತಿಸಬೇಕಾಗುತ್ತದೆ. ಈ ಸಮಯದಲ್ಲಿ, PF ಖಾತೆಯನ್ನು ತಮ್ಮ PAN ಕಾರ್ಡ್‌ಗೆ ಲಿಂಕ್ ಮಾಡದ ಖಾತೆದಾರರು ಮೊದಲಿಗಿಂತ ಕಡಿಮೆ TDS ಅನ್ನು ಪಾವತಿಸಬೇಕಾಗಲಿದೆ. ಅಂತಹ ಖಾತೆದಾರರಿಗೆ ಇದರಿಂದ ಅವರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ, ಈ ಹಿಂದೆ ಅವರು ಇಂತಹ ಹಿಂಪಡೆಯುವಿಕೆಗೆ 30% TDS ಅನ್ನು ಪಾವತಿಸಬೇಕಾಗಿತ್ತು, ಅದನ್ನು ಈಗ 20% ಕ್ಕೆ ಇಳಿಸುವುದಾಗಿ ಘೋಷಿಸಲಾಗಿದೆ.
ಇದನ್ನೂ ಓದಿ-Modi Government: ದೇಶಾದ್ಯಂತದ ಮಹಿಳೆಯರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್, ಸಿಗಲಿದೆ 15,000 ರೂ.ಗಳು!
PF ಖಾತೆಯನ್ನು ತೆರೆದು ಐದು ವರ್ಷಗಳಾಗಿಲ್ಲದಿದ್ದರೆ ಮತ್ತು ಹಣ ಹಿಂಪಡೆಯಲು ಬಯಸಿದರೆ, ಒಂದು ವೇಳೆ ಖಾತೆಯನ್ನು PAN ಕಾರ್ಡ್‌ಗೆ ಲಿಂಕ್ ಮಾಡಿದ್ದರೆ, ನೀವು ಯಾವುದೇ ರೀತಿಯ TDS ಅನ್ನು ಪಾವತಿಸುವ ಅವಶ್ಯಕತೆ ಇಲ್ಲ, ಆದರೆ ಹಿಂಪಡೆದ ಮೊತ್ತವನ್ನು ತೆರಿಗೆಗೆ ಒಳಪಡಿಸಲಾಗುತ್ತದೆ.
ಈ ರೀತಿ ನಿಮ್ಮ ಪಿಎಫ್ ಖಾತೆ ಬ್ಯಾಲೆನ್ಸ್ ಪರಿಶೀಲಿಸಿ
ಇದಕ್ಕಾಗಿ, ನೀವು EPFO ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು. ಇದಕ್ಕಾಗಿ ಸಂದೇಶ ಬಾಕ್ಸ್ ನಲ್ಲಿ ನೀವು 'EPFOHO UAN' ಅನ್ನು ನಮೂದಿಸಬೇಕು ಅಂದರೆ ಮೊದಲು EPFOHO ಮತ್ತು ನಂತರ UAN. ಈ ಸೌಲಭ್ಯವು 10 ಭಾಷೆಗಳಲ್ಲಿ ಲಭ್ಯವಿದೆ - ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಕನ್ನಡ, ತೆಲುಗು ಮತ್ತು ಬೆಂಗಾಲಿ. ನೀವು ಇಂಗ್ಲೀಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ SMS ಬಯಸಿದರೆ, UAN ID ನಂತರ ಅದರ ಮೊದಲ ಮೂರು ಅಕ್ಷರಗಳನ್ನು ಸೇರಿಸಿ. ಉದಾಹರಣೆಗೆ, ನೀವು ಕನ್ನಡದಲ್ಲಿ ಸಂದೇಶವನ್ನು ಬಯಸಿದರೆ, ನೀವು 'EPFOHO UAN KAN' ಎಂದು ಬರೆಯಬೇಕು.
ಇದನ್ನೂ ಓದಿ-Valentine's Day 2023 ಪ್ರಯುಕ್ತ ಐಆರ್ಸಿಟಿಸಿ ವಿಶೇಷ ಕೊಡುಗೆ, ಸಂಗಾತಿ ಜೊತೆಗೆ ಗೋವಾದಲ್ಲಿ 5 ದಿನ ಸುತ್ತಾಡುವ ಅವಕಾಶ
ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಈ ರೀತಿ ಪರಿಶೀಲಿಸಿ
ಪಿಎಫ್ ಖಾತೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಮಿಸ್ಡ್ ಕಾಲ್ ಮೂಲಕವೂ ತಿಳಿದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ಮಾಡಬೇಕು. ಇದರ ನಂತರ, ಖಾತೆಯ ಮೊತ್ತಕ್ಕೆ ಸಂಬಂಧಿಸಿದ ಸಂದೇಶವು ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.