Beetroot Side Effects: ಬೀಟ್ರೂಟ್ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ವಿಟಮಿನ್-ಬಿ, ವಿಟಮಿನ್-ಸಿ, ಫಾಸ್ಫರಸ್, ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಹಾಗಿದ್ದರೆ, ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ಹಾನಿಕಾರಕವಾಗಿದೆ. ಇದರ ಅನಾನುಕೂಲಗಳೇನು ಎಂದು ತಿಳಿಯೋಣ...
ನಿಮಗೂ ಈ ಆರೋಗ್ಯ ಸಮಸ್ಯೆಗಳಿವೆಯೇ? ಹಾಗಿದ್ದರೆ ಅಪ್ಪಿತಪ್ಪಿಯೂ ಬೀಟ್ರೂಟ್ ಸೇವಿಸಬೇಡಿ
ಮಧುಮೇಹ:
ಮಧುಮೇಹಿಗಳಿಗೆ ಬೀಟ್ರೂಟ್ ಅಪಾಯಕಾರಿ. ವಾಸ್ತವವಾಗಿ, ಬೀಟ್ರೂಟ್ ನಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ಅಧಿಕವಾಗಿದ್ದು, ಫೈಬರ್ ತುಂಬಾ ಕಡಿಮೆ ಇದೆ. ಹಾಗಾಗಿ, ಮಧುಮೇಹಿಗಳು ಬೀಟ್ರೂಟ್ ಸೇವಿಸುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.
ಇದನ್ನೂ ಓದಿ- ನಿಮ್ಮ ಲಿಪ್‌ಸ್ಟಿಕ್ ದೀರ್ಘಕಾಲದವರೆಗೆ ಉಳಿಯಲು ಈ ಟಿಪ್ಸ್ ಅನುಸರಿಸಿ
ಲೋ ಬಿಪಿ:
ಬೀಟ್ರೂಟ್ನಲ್ಲಿ ನೈಟ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ರಕ್ತವನ್ನು ತೆಳುಗೊಳಿಸುತ್ತದೆ, ಇದರಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಹಾಗಾಗಿ, ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡ ಇರುವವರು ಬೀಟ್ರೂಟ್ ಸೇವನೆಯನ್ನು ತಪ್ಪಿಸುವುದು ಒಳಿತು ಎಂದು ಹೇಳಲಾಗುತ್ತದೆ.
ಕಿಡ್ನಿ ಸ್ಟೋನ್:
ಬೀಟ್ರೂಟ್ ನಲ್ಲಿರುವ ಆಕ್ಸಲೇಟ್‌ಗಳು ಕಲ್ಲುಗಳು ಅಥವಾ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- ಶಿಲ್ಪಾ ಶೆಟ್ಟಿಯಂತಹ ಸ್ಲಿಮ್ ಫಿಗರ್ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು
ಯಕೃತ್ ಸಮಸ್ಯೆ ಇರುವವರು:
ಬೀಟ್‌ರೂಟ್‌ನಲ್ಲಿರುವ ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳು ಯಕೃತ್ತಿನಲ್ಲಿ ಸಂಗ್ರಹವಾಗಬಹುದು. ಆದರೆ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಇದು ಸಮಸ್ಯೆಯನ್ನು ಹೆಚ್ಚಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.