ಜನವರಿ 26 ರಂದು, ಅಂದರೆ ನಾಳೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಪರೇಡ್ನಲ್ಲಿ ಭಾರತೀಯ ಸೇನೆಯ ಶಕ್ತಿಯ ಪ್ರದರ್ಶನವಾಗಲಿದೆ.
ಬೆಂಗಳೂರು : ಜನವರಿ 26 ರಂದು, ಅಂದರೆ ನಾಳೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಪರೇಡ್ನಲ್ಲಿ ಭಾರತೀಯ ಸೇನೆಯ ಶಕ್ತಿಯ ಪ್ರದರ್ಶನವಾಗಲಿದೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಕೂಡಾ ಬಹಳ ವಿಶೇಷವಾಗಿರಲಿದೆ. ಈ ಬಾರಿಯ ಪರೇಡ್ನಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ ಒತ್ತು ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಭಾರತೀಯ ಸೇನೆಯ ಹೇಳಿಕೆಯ ಪ್ರಕಾರ, ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಪ್ರದರ್ಶಿಸಲಾಗುವುದು. ಈ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.
DRDO ಪ್ರಕಾರ, ಅರ್ಜುನ್ ಟ್ಯಾಂಕ್ ಅತ್ಯಾಧುನಿಕ ಟ್ಯಾಂಕ್ ಆಗಿದೆ. MBT ಅರ್ಜುನ್ನ ಹನ್ನೆರಡು Mk 1 ಮಾದರಿಗಳನ್ನು ನಿರ್ಮಿಸಲಾಗಿದೆ. ಇದು 120 ಎಂಎಂ ಗನ್ ಅನ್ನು ಹೊಂದಿದ್ದು, ಟ್ಯಾಂಕ್ನಲ್ಲಿ ಬಳಸುವ ರಕ್ಷಾ ಕವಚವನ್ನು ಹೊಡೆದುರುಳಿಸುತ್ತದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ನಾಗ ಮಿಸೈಲ್ ಸಿಸ್ಟಮ್ ಈ ಬಾರಿ ಕರ್ತವ್ಯ ಪಥದಲ್ಲಿ ಸಾಗಲಿದೆ. ಇದರ ವಿಶೇಷತೆಯೆಂದರೆ ಇದನ್ನು BMP 2ಕ್ಯಾರಿಯರ್ ನಲ್ಲಿ ಅಳವಡಿಸಲಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಟಾಪ್ ಟೆಕ್ನಿಕ್ ಅನ್ನು ಆಧರಿಸಿದೆ. 4 ಕಿಲೋಮೀಟರ್ ಪರಿದಿಯಲ್ಲಿರುವ ಟ್ಯಾಂಕ್ಗಳನ್ನು ಸ್ಫೋಟಿಸುವುದು ಇದಕ್ಕೆ ಸಾಧ್ಯ.
ಈ ಬಾರಿ ಗಣರಾಜ್ಯೋತ್ಸವ ಪರೇಡ್ನ ಕರ್ತವ್ಯ ಪಥದಲ್ಲಿ ಕೆ9 ವಜ್ರವೂ ರಾರಾಜಿಸಲಿದೆ. K-9 ನ ಫೈರ್ಪವರ್ ಅತ್ಯದ್ಭುತವಾಗಿದೆ. ದಾಳಿಯ ನಂತರ ತಕ್ಷಣವೇ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಈ ಕಾರಣಕ್ಕಾಗಿ, ಇದು ಶತ್ರುಗಳ ಪ್ರತೀಕಾರದಿಂದ ತಪ್ಪಿಸಿಕೊಳ್ಳುತ್ತದೆ. ಕೆ-9 ವಜ್ರವು 40 ಮೀಟರ್ ದೂರದಲ್ಲಿದಲ್ಲಿರುವ ಶತ್ರುಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.
ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪರೇಡ್ನಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಕಾಣಿಸಿಕೊಳ್ಳಲಿದೆ. ಇದು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ DRDO ಮತ್ತು ಭಾರತ್ ಡೈನಾಮಿಕ್ಸ್ ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.