Maruti Alto Price Hike : ಅತ್ಯಂತ ಕಡಿಮೆ ಬಜೆಟ್ ನಲ್ಲಿ ಕಾರು ಖರೀದಿಸಬೇಕಾದರೆ ಮನಸ್ಸಿಗೆ ಮೊದಲು ಬರುವ ಹೆಸರೇ ಮಾರುತಿ ಆಲ್ಟೊ 800. ಆದರೆ, ಈಗ ಮಾರುತಿ ಸುಜುಕಿಯ ಆಲ್ಟೊ 800 ಕೂಡಾ ದುಬಾರಿಯಾಗಿದೆ. ಮಾರುತಿ ಸುಜುಕಿ ಕಳೆದ ವರ್ಷದ ಕೊನೆಯಲ್ಲಿ ತನ್ನ ಕಾರುಗಳ ಬೆಲೆಯನ್ನು ಹೊಸ ವರ್ಷದ ಆರಂಭದಿಂದ ಹೆಚ್ಚಿಸುವುದಾಗಿ ಘೋಷಿಸಿತ್ತು. ಇದೀಗ ಜನವರಿ 16 ರಿಂದ, ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಶೇಕಡಾ 1.1 ರಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಆಲ್ಟೊ 800 ಬೆಲೆಯೂ ಏರಿಕೆಯಾಗಿದೆ.
ಬೆಲೆ ಏರಿಕೆಗೂ ಮುನ್ನ ಆಲ್ಟೊ 800 ಬೆಲೆ 3.39 ಲಕ್ಷದಿಂದ ಆರಂಭವಾಗುತ್ತಿತ್ತು. ಆದರೆ ಈಗ 3.54 ಲಕ್ಷದಿಂದ ಆರಂಭವಾಗುತ್ತದೆ. ಈ ಹಿಂದೆ ಟಾಪ್ ವೆರಿಯೇಂಟ್ ಬೆಲೆ 5.03 ಲಕ್ಷ ರೂಪಾಯಿಗಳಷ್ಟಿತ್ತು ಆದರೆ ಈಗ ಅದು 5.13 ಲಕ್ಷ ರೂಪಾಯಿಯಾಗಿದೆ. ಅದರ ಸಿಎನ್‌ಜಿ ರೂಪಾಂತರದ ಬೆಲೆ 10,000 ರೂ.ಗಳಷ್ಟು ಏರಿಕೆಯಾಗಿದೆ.
ಇದನ್ನೂ ಓದಿ : Car Recall: ತಕ್ಷಣ ಈ ಕಾರುಗಳನ್ನು ಬಳಸುವುದನ್ನು ನಿಲ್ಲಿಸಿ, ಜೀವಕ್ಕೆ ಅಪಾಯವಿದೆ!
ಮಾರುತಿ ಆಲ್ಟೊ 800 :
ಮಾರುತಿ ಸುಜುಕಿ ಆಲ್ಟೊ ಹೆಚ್ಚು ಮಾರಾಟವಾದ ಕಾರು ಕೂಡ ಆಗಿದೆ. ಇದು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ (O), LXi(O), VXi ಮತ್ತು VXi+. CNG ಕಿಟ್ ಆಗಿರುವ LXI(O) ರೂಪಾಂತರದಲ್ಲಿ ಲಭ್ಯವಿದೆ. ಇದು 0.8-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಪೆಟ್ರೋಲ್ ಮೇಲೆ 48 PS/69 Nm ಅನ್ನು ಜನರೆಟ್ ಮಾಡಿದರೆ, ಇದು CNG ಯಲ್ಲಿ 41 PS/60 Nm ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ.
ಆಲ್ಟೊ 800 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಇದು ಕೀಲೆಸ್ ಎಂಟ್ರಿ ಮತ್ತು ಫ್ರಂಟ್ ಪವರ್ ವಿಂಡೋಗಳಂತಹ ವೈಶಿಷ್ಟ್ಯದೊಂದಿಗೆ ಬರುತ್ತದೆ. ಡ್ರೈವರ್ ಸೈಡ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮುಂತಾದ ವೈಶಿಷ್ಟ್ಯಗಳು ಸಹ ಕಾರಿನಲ್ಲಿ ಲಭ್ಯವಿದೆ.
ಇದನ್ನೂ ಓದಿ : Kisan Scheme : ರೈತರಿಗೆ ಕೇಂದ್ರದಿಂದ ಮಹತ್ವದ ಯೋಜನೆ : ಬೆಳೆ ಹಾನಿಯಾದರೆ ಆರ್ಥಿಕ ನೆರವು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.