Indian Railways: ಜೋತಿರ್ಲಿಂಗ ದರ್ಶನಕ್ಕೆ ಅವಕಾಶ ನೀಡುತ್ತಿದೆ ಭಾರತೀಯ ರೇಲ್ವೆ, ಊಟ-ವಸತಿ ಉಚಿತ, ಇಲ್ಲಿದೆ ವಿವರ

Indian Railways Tour Package: ತೀರ್ಥಯಾತ್ರೆಗೆ ತೆರಳ ಬಯುವವರಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ನೀವೂ ಸಹ ಈ ವರ್ಷ ಎಲ್ಲಿಗಾದರೂ ತೀರ್ಥ ಯಾತ್ರೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ರೇಲ್ವೆ ನಿಮಗಾಗಿ ವಿಶೇಷ ಕೊಡುಗೆಯನ್ನು ಹೊತ್ತು ತಂದಿದೆ. ಈ ಯಾತ್ರೆಯಲ್ಲಿ ನೀವು ಜೋತಿರ್ಲಿಂಗಗಳ ದರ್ಶನ ಮಾಡಬಹುದು.  

Written by - Nitin Tabib | Last Updated : Jan 13, 2023, 08:39 PM IST
  • ಭಾರತೀಯ ರೇಲ್ವೆ ನಿಮಗಾಗಿ ವಿಶೇಷ ಕೊಡುಗೆಯನ್ನು ಹೊತ್ತು ತಂದಿದೆ.
  • ಈ ಯಾತ್ರೆಯಲ್ಲಿ ನೀವು ಜೋತಿರ್ಲಿಂಗಗಳ ದರ್ಶನ ಮಾಡಬಹುದು.
  • ಈ ಯಾತ್ರೆ ಸಂಪೂರ್ಣ 9 ದಿನಗಳ ಯಾತ್ರೆ ಇರಲಿದೆ.
Indian Railways: ಜೋತಿರ್ಲಿಂಗ ದರ್ಶನಕ್ಕೆ ಅವಕಾಶ ನೀಡುತ್ತಿದೆ ಭಾರತೀಯ ರೇಲ್ವೆ, ಊಟ-ವಸತಿ ಉಚಿತ, ಇಲ್ಲಿದೆ ವಿವರ title=
Jyotirling Darshan

IRCTC Tour Package: ತೀರ್ಥಯಾತ್ರೆಗೆ ತೆರಳ ಬಯುವವರಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ನೀವೂ ಸಹ ಈ ವರ್ಷ ಎಲ್ಲಿಗಾದರೂ ತೀರ್ಥ ಯಾತ್ರೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ರೇಲ್ವೆ ನಿಮಗಾಗಿ ವಿಶೇಷ ಕೊಡುಗೆಯನ್ನು ಹೊತ್ತು ತಂದಿದೆ. ಈ ಯಾತ್ರೆಯಲ್ಲಿ ನೀವು ಜೋತಿರ್ಲಿಂಗಗಳ ದರ್ಶನ ಮಾಡಬಹುದು. ಈ ಯಾತ್ರೆ ಸಂಪೂರ್ಣ 9 ದಿನಗಳ ಯಾತ್ರೆ ಇರಲಿದೆ. ಈ ಯಾತ್ರೆಯ ಕನಿಷ್ಠ ಖರ್ಚು 21390 ರೂ.ಗಳಾಗಿರಲಿದೆ, ಈ ಪ್ಯಾಕೇಜ್ ವಿಶೇಷತೆ ಎಂದರೆ ಇದರಲ್ಲಿ ನಿಮಗೆ ಊಟ ಮತ್ತು ವಸತಿ ಉಚಿತವಾಗಿರಲಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಐಆರ್ಸಿಟಿಸಿ
IRCTC ತನ್ನ ಅಧಿಕೃತ ಟ್ವೀಟ್‌ನಲ್ಲಿ ಇದೀಗ ನೀವು 5 ಜ್ಯೋತಿರ್ಲಿಂಗಗಳಿಗೆ ಯಾತ್ರೆ ಕೈಗೊಳ್ಳಬಹುದು ಎಂದು ಬರೆದಿದೆ. ನಿಮ್ಮ ಪ್ರಯಾಣವು ಜೈಪುರದಿಂದ ಪ್ರಾರಂಭವಾಗುತ್ತದೆ. ಧಾರ್ಮಿಕ ಪ್ರಯಾಣಕ್ಕೆ ಇದು ನಿಮಗೆ ಉತ್ತಮ ಅವಕಾಶವಿದೆ ಎಂದು ರೈಲ್ವೆ ಹೇಳಿದೆ.

ಪ್ಯಾಕೇಜ್‌ನ ವಿವರಗಳು ಕೆಳಗಿನಂತಿವೆ
>> ಪ್ಯಾಕೇಜ್ ಹೆಸರು - 05 ಜ್ಯೋತಿರ್ಲಿಂಗ ಯಾತ್ರೆ
>> ಪ್ರವಾಸ ಪ್ಯಾಕೇಜ್ ಎಷ್ಟು ದಿನಗಳದ್ದಾಗಿದೆ - 8 ರಾತ್ರಿಗಳು / 9 ದಿನಗಳು
>> ಯಾತ್ರೆ ಆರಂಭದ ದಿನಾಂಕ - 4 ಫೆಬ್ರವರಿ 2023
>> ಪ್ರಯಾಣ - ಜೈಪುರ - ನಾಸಿಕ್ - ಔರಂಗಾಬಾದ್ - ಪುಣೆ - ದ್ವಾರಕಾ - ವೆರಾವಲ್ - ಜೈಪುರ
>> ಆಸನಗಳ ಸಂಖ್ಯೆ - 600 (ಸ್ಟ್ಯಾಂಡರ್ಡ್ - 300, ಸುಪೀರಿಯರ್ - 300)
>> ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಪಾಯಿಂಟ್ - ಜೈಪುರ - ಅಜ್ಮೀರ್ - ಭಿಲ್ವಾರಾ - ಚಂದೇರಿಯಾ - ಉದಯಪುರ

ಎಷ್ಟು ವೆಚ್ಚವಾಗುತ್ತದೆ?
ಈ ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ವೆಚ್ಚಗಳ ಕುರಿತು ಹೇಳುವುದಾದರೆ, ಸ್ಟ್ಯಾಂಡರ್ಡ್ ವರ್ಗದಲ್ಲಿ ಸಿಂಗಲ್ ಆಕ್ಯುಪೆನ್ಸಿಗೆ ಪ್ರತಿ ವ್ಯಕ್ತಿಗೆ 27810 ರೂ., ಡಬಲ್ ಮತ್ತು ಟ್ರಿಪಲ್ ಆಕ್ಯುಪೆನ್ಸಿಗೆ ಪ್ರತಿ ವ್ಯಕ್ತಿಗೆ 21390 ರೂ. ಮತ್ತೊಂದೆಡೆ, ಉನ್ನತ ವರ್ಗದ ಬಗ್ಗೆ ಹೇಳುವುದಾದರೆ, ಒಬ್ಬ ವ್ಯಕ್ತಿಗೆ 31500 ರೂ., ಡಬಲ್ ಆಕ್ಯುಪೆನ್ಸಿಗೆ ಪ್ರತಿ ವ್ಯಕ್ತಿಗೆ 24230 ರೂ.

ಇದನ್ನೂ ಓದಿ-Good News: ದೇಶಾದ್ಯಂತ ಟಿಕೆಟ್ ಇಲ್ಲದೆ ಎಲ್ಲಿಗೆ ಬೇಕಾದರು ಉಚಿತವಾಗಿ ಪ್ರಯಾಣಿಸಿ ಎಂದ ಗೋ ಫಸ್ಟ್

ಮಕ್ಕಳ ಪ್ರಯಾಣ ದರ ಎಷ್ಟು?
ಮಕ್ಕಳ ಬಗ್ಗೆ ಹೇಳುವುದಾದರೆ, ಉನ್ನತ ವರ್ಗದಲ್ಲಿ  5 ರಿಂದ 11 ವರ್ಷದೊಳಗಿನ  ಪ್ರತಿ ಮಗುವಿಗೆ 21,810 ರೂ. ಇದೇ ವೇಳೆ, ಪ್ರಮಾಣಿತ ವರ್ಗದಲ್ಲಿ ಪ್ರತಿ ಮಗುವಿಗೆ 19260 ರೂ.

ಇದನ್ನೂ ಓದಿ-Bank Strike: ದೇಶಾದ್ಯಂತ ಈ 2 ದಿನ ಎಲ್ಲಾ ಬ್ಯಾಂಕ್, ಎಟಿಎಂ ಸೇರಿದಂತೆ ಈ ಎಲ್ಲಾ ಸೇವೆಗಳು ಬಂದ್

ಅಧಿಕೃತ ಲಿಂಕ್ ಪರಿಶೀಲಿಸಿ
ಈ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ಲಿಂಕ್ http://bit.ly/3Xx0L4Z ಗೆ ಭೇಟಿ ನೀಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News