ನಾಗಪುರ್: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ದ್ವೀತಿಯ ಟೆಸ್ಟ್ನಲ್ಲಿ 4ವಿಕೆಟ್ ಗಳನ್ನು ಪಡೆಯುವುದರ ಮೂಲಕ ಅತಿ ವೇಗವಾಗಿ 300 ವಿಕೆಟ್ ಗಳನ್ನು ಪಡೆದ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾದರು.
ಈ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಯವರ ಹೆಸರಿನಲ್ಲಿದ್ದ ದಾಖಲೆಯನ್ನು ಆರ್.ಅಶ್ವಿನ್ ಅಳಿಸಿಹಾಕಿದ್ದಾರೆ.ಡೆನ್ನಿಸ್ ಲಿಲ್ಲಿ ಈ ಸಾಧನೆಯನ್ನು 56 ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದರೆ,ಅಶ್ವಿನ್ ಕೇವಲ 54 ಟೆಸ್ಟ್ ನಲ್ಲಿ ಈ ಸಾಧನೆಗೈದಿದ್ದಾರೆ.ಕೂತುಹಲದ ವಿಷಯವೆಂದರೆ 300 ಗಳನ್ನು ಪಡೆಯಲು ಕೇವಲ 15,634 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಅಲ್ಲದೆ ಈ ಸಾಧನೆಯನ್ನು ಕೇವಲ 2214 ದಿನಗಳಲ್ಲಿ ಮಾಡಿರುವುದು ಕೂಡ ಒಂದು ದಾಖಲೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಅಶ್ವಿನ್ ಈಗ ಭಾರತದ ಕ್ರಿಕೆಟ್ ನಲ್ಲಿ ಓಡುತ್ತಿರುವ ಕುದುರೆ ಇದ್ದ ಹಾಗೆ ಆದ್ದರಿಂದ ತಮ್ಮ ಆಪ್ ಸ್ಪಿನ್ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಜಾಗತಿಕ ತಾರೆಯಾಗಿ ಮೆರೆಯುತ್ತಿದ್ದಾರೆ.ಆದ್ದರಿಂದ ಅಂತಹ ಹಿರಿಮೆಯ ಭಾಗವಾಗಿ ಈ ಸಾಧನೆ ಇವರಿಂದ ಮೂಡಿ ಬಂದಿರುವುದು ನಿಜಕ್ಕೂ ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸವನ್ನು ಉಂಟುಮಾಡಿದೆ ಎಂದು ಹೇಳಬಹುದು.