ನವದೆಹಲಿ: ಛತ್ತೀಸ್ಗಢದ ಕೊರ್ಬಾದಲ್ಲಿ ಬುಡಕಟ್ಟು ಸಮುದಾಯದ ಬಾಲಕಿಯ ಭೀಕರ ಹತ್ಯೆಯ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಜೊತೆಗೆ ಮಾತನಾಡಲು ನಿರಾಕರಿಸಿದ ನೀಲ್ಕುಸುಮ್ ಎಂಬ 21 ವರ್ಷದ ಯುವತಿಗೆ ವ್ಯಕ್ತಿಯೊಬ್ಬ ಸ್ಕ್ರೂಡ್ರೈವರ್ನಿಂದ 51 ಬಾರಿ ಚುಚ್ಚಿ ಚುಚ್ಚಿ ಕೊಂದಿದ್ದಾನೆ.
ಹುಟ್ಟಿನಿಂದ ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ನೀಲ್ಕುಸುಮ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಳು. ಈ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಶಹಬಾಜ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 24ರ ಶನಿವಾರ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎಸ್ ಇಸಿಎಲ್)ನ ಪಂಪ್ ಹೌಸ್ ಕಾಲೋನಿಯಲ್ಲಿಈ ಭಯಾನಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಮೇಲೆ ಕಣ್ಣಿಟ್ಟು ಸುಳ್ಳು ಬರೆದ ಗಿರೀಶ್ ಕಾರ್ನಾಡ್ ಓರ್ವ ಡುಪ್ಲಿಕೇಟ್: ಅಡ್ಡಂಡ ಕಾರ್ಯಪ್ಪ
ಯುವತಿಯನ್ನು ಭೀಕರವಾಗಿ ಕೊಂದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ಪ್ರಕಾರ ಆರೋಪಿ ಜಶ್ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಭೇಟಿಯಾಗಲು ಬಂದಿದ್ದನಂತೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೊನೆಗೆ ಆತ ಆಕೆಯ ಬಾಯಿಮುಚ್ಚಿ ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ಸಹೋದರ ಸೋಮವಾರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆರೋಪಿ 3 ವರ್ಷಗಳ ಹಿಂದೆ ಸಂತ್ರಸ್ತೆ ಜೊತೆ ಸ್ನೇಹ ಬೆಳೆಸಿದ್ದನಂತೆ. ಆತ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಬಸ್ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಕೆಲವು ದಿನಗಳ ನಂತರ ಆರೋಪಿ ಕೆಲಸಕ್ಕಾಗಿ ಗುಜರಾತ್ನ ಅಹಮದಾಬಾದ್ಗೆ ತೆರಳಿದ್ದನಂತೆ. ಈ ವೇಳೆ ಇಬ್ಬರೂ ಫೋನ್ ಸಂಪರ್ಕದಲ್ಲಿದ್ದರು.
Chhatisgarh: Stalker Shahbaz killed 21-year-old Neelkusum by stabbing a screwdriver multiple times on her chest. He was angered as she was not taking his calls. Shahbaz who lived in Gujrat took a flight to reach Korba, where he killed the victim.
He is absconding for now. pic.twitter.com/T6rcrJqyYW
— Subhi Vishwakarma (@subhi_karma) December 25, 2022
ಇದನ್ನೂ ಓದಿ: Viral Video: ಭರ್ಜರಿಯಾಗಿ ಚಂಡೆ ಬಾರಿಸಿದ ಮದುಮಗಳು! ಸಾಥ್ ನೀಡಿದ ಅಪ್ಪ
ಕೆಲವು ದಿನಗಳ ಬಳಿಕ ಯುವತಿ ಆತನೊಂದಿಗೆ ಫೋನ್ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಳು. ತನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಿದಳೆಂಬ ಕಾರಣಕ್ಕೆ ಕೋಪಗೊಂಡಿದ್ದ ಆರೋಪಿ ಆಕೆಯನ್ನು ಭೇಟಿಯಾಗಲು ಕೊರ್ಬಾಗೆ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಆತ ಯುವತಿಯ ಬಾಯಿಮುಚ್ಚಿ ಸ್ಕ್ರೂಡ್ರೈವರ್ನಿಂದ ಚುಚ್ಚಿ ಚುಚ್ಚಿ ಕೊಂದಿದಿದ್ದಾನೆ. ಯುವತಿಯ ಎದೆಗೆ 34 ಬಾರಿ, ಬೆನ್ನಿಗೆ 16 ಬಾರಿ ಚುಚ್ಚಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 3 ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.