ಬೆಂಗಳೂರು : ಮೊಸರು ಉತ್ತಮ ಆಹಾರವಾಗಿದೆ. ಮೊಸರಿನಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಕಂಡು ಬರುತ್ತವೆ. ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ಗಳು, ಮೆಗ್ನೀಸಿಯಮ್ನಂತಹ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡುವುದು ಸಾಧ್ಯ. ಈ ಕಾರಣಕ್ಕಾಗಿಯೇ ಮೊಸರನ್ನು ಪ್ರತಿದಿನ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ, ಮೊಸರಿನ ಜೊತೆ ತಪ್ಪಿಯೂ ಕೆಲವು ಆಹಾರಗಳನ್ನು ಸೇವಿಸಬಾರದು.
ಮೊಸರಿನೊಂದಿಗೆ ಈ ವಸ್ತುಗಳನ್ನು ಸೇವಿಸಬೇಡಿ :
ಉದ್ದಿನಬೇಳೆ :
ಮೊಸರು ಉದರದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಮೊಸರನ್ನು ಉದ್ದಿನ ಬೇಳೆಯೊಂದಿಗೆ ಸೇವಿಸಬಾರದು. ಒಂದು ವೇಳೆ ಮೊಸರನ್ನು ಉದ್ದಿನಬೇಳೆಯೊಂದಿಗೆ ಸೇವಿಸಿದರೆ ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ವಾಂತಿ-ಭೇದಿ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಈ ಕಾರಣದಿಂದಾಗಿ ಉದ್ದಿನಬೇಳೆಯಿಂದ ತಯಾರಿಸಿದ ಆಹಾರದೊಂದಿಗೆ ಮೊಸರನ್ನು ಸೇವಿಸಬಾರದು.
ಇದನ್ನೂ ಓದಿ : Diabetes Diet : ಮಧುಮೇಹಿಗಳೆ ಈಗಲೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ, ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ!
ಹಾಲು :
ಹಾಲಿನಲ್ಲೇ ಮೊಸರನ್ನು ತಯಾರಿಸಲಾಗುತ್ತದೆ. ಆದರೆ ಮೊಸರಿನ ಜೊತೆ ಹಾಲನ್ನು ಎಂದಿಗೂ ಸೇವಿಸಬಾರದು. ಮೊಸರು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬುವುದು, ಮಲಬದ್ಧತೆ, ವಾಂತಿ ಅತಿಸಾರದಂತಹ ತೊಂದರೆಗಳು ಉಂಟಾಗಬಹುದು. ಹೀಗಿರುವಾಗ ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಲೇ ಬಾರದು.
ಈರುಳ್ಳಿ :
ಜನರು ಮೊಸರು ಬಜ್ಜಿಯಲ್ಲಿ ಅನೇಕ ರೀತಿಯ ತರಕಾರಿಗಳನ್ನು ಬಳಸುತ್ತಾರೆ. ಅನೇಕ ಜನರು ಕೇವಲ ಈರುಳ್ಳಿ ಹಾಕಿ ಮೊಸರು ಬಜ್ಜಿ ಅಥವಾ ರಾಯಿತಾ ತಯಾರಿಸುತ್ತಾರೆ. ಈರುಳ್ಳಿಯೊಂದಿಗೆ ಮೊಸರು ಸೇವಿಸುವುದರಿಂದ ಅಲರ್ಜಿ ಉಂಟಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈ ಕಾರಣದಿಂದಾಗಿ ಈರುಳ್ಳಿಯೊಂದಿಗೆ ಮೊಸರು ಸೇವಿಸುವುದನ್ನು ತಪ್ಪಿಸಿ.
ಇದನ್ನೂ ಓದಿ : Weight Loss Tips : ದೇಹ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ರೆ, ಪ್ರತಿದಿನ ಈ ಜ್ಯೂಸ್ ಕುಡಿಯಿರಿ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.