/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ಬ್ಯಾನ್‌ ಅಂದವರ ಮುಂದೆ ಟಾಪ್‌ ಸ್ಥಾನಕ್ಕೇರಿದ ರಶ್ಮಿಕಾ : ಸ್ಯಾಂಡಲ್‌ವುಡ್‌ ನಂ1 ನಟಿ ಈಕೆ..!

ಸತತವಾಗಿ ವಿರೋಧಗಳ ಹಾದಿಯಲ್ಲೇ ನಡೆಯುತ್ತಿರುವ ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಓರ್‌ಮ್ಯಾಕ್ಸ್‌ ಬಿಡುಗಡೆ ಮಾಡಿರುವ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಅವರು ನಂ.1 ಸ್ಥಾನದಲ್ಲಿದ್ದಾರೆ. ಈ ವಿಚಾರ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಖುಷಿ ತಂದಿದೆ.

Written by - Krishna N K | Last Updated : Dec 17, 2022, 04:43 PM IST
  • ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ
  • ಓರ್‌ಮ್ಯಾಕ್ಸ್‌ ಬಿಡುಗಡೆ ಮಾಡಿರುವ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಅವರು ನಂ.1
  • ಬ್ಯಾನ್‌ ರಶ್ಮಿಕಾ ಎಂಬ ಹ್ಯಾಷ್‌ ಟ್ಯಾಗ್‌ ಕೂಡಾ ಭಾರಿ ಸದ್ದು ಮಾಡಿತ್ತು
ಬ್ಯಾನ್‌ ಅಂದವರ ಮುಂದೆ ಟಾಪ್‌ ಸ್ಥಾನಕ್ಕೇರಿದ ರಶ್ಮಿಕಾ : ಸ್ಯಾಂಡಲ್‌ವುಡ್‌ ನಂ1 ನಟಿ ಈಕೆ..! title=

Rashmika mandanna : ಸತತವಾಗಿ ವಿರೋಧಗಳ ಹಾದಿಯಲ್ಲೇ ನಡೆಯುತ್ತಿರುವ ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಓರ್‌ಮ್ಯಾಕ್ಸ್‌ ಬಿಡುಗಡೆ ಮಾಡಿರುವ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಅವರು ನಂ.1 ಸ್ಥಾನದಲ್ಲಿದ್ದಾರೆ. ಈ ವಿಚಾರ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಖುಷಿ ತಂದಿದೆ.

ಸ್ಯಾಂಡಲ್‌ವುಡ್‌ ಸಿನಿಮಾಗಳಿಂದ ರಶ್ಮಿಕಾ ಬ್ಯಾನ್‌ ಎಂಬ ಕೂಗು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅದರ ಬೆನ್ನಲ್ಲೆ ಬ್ಯಾನ್‌ ರಶ್ಮಿಕಾ ಎಂಬ ಹ್ಯಾಷ್‌ ಟ್ಯಾಗ್‌ ಕೂಡಾ ಭಾರಿ ಸದ್ದು ಮಾಡಿತ್ತು. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ರಶ್ಮಿಕಾ ಪುಷ್ಪಾ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ವಿದೇಶಗಳಲ್ಲಿ ಪುಷ್ಪಾ ಸಿನಿಮಾದ ಪ್ರಮೋಷನ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.́

ಇದನ್ನೂ ಓದಿ: Janhvi Kapoor : ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಜಾನ್ವಿ ಅದ್ಭುತ ಮೈಸಿರಿ..!

ಇನ್ನು ಸಾಲು ಸಾಲು ವಿರೋಧಗಳ ಸರಮಾಲೆ ಮಧ್ಯ ನಂ1 ನಟಿಯಾಗಿ ರಶ್ಮಿಕಾ ಗುರುತಿಸಿಕೊಂಡಿದ್ದಾರೆ. ಓರ್‌ಮ್ಯಾಕ್ಸ್‌ ಮೀಡಿಯಾ ಪ್ರಕಾರ, ರಶ್ಮಿಕಾ ಮಂದಣ್ಣ ನಂ1 ಸ್ಥಾನದಲ್ಲಿದ್ದಾರೆ. ಸಿನಿಮಾಗಳಿಂದ ದೂರದಲ್ಲಿದ್ದರೂ ಸಹ ರಮ್ಯಾ 2ನೇ ಸ್ಥಾನದಲ್ಲಿ ಮಿಂಚಿದ್ದಾರೆ. ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ 3, ರಾಧಿಕಾ ಪಂಡಿತ್‌ 4, ಶ್ರೀನಿಧಿ ಶೆಟ್ಟಿ 5 ಸ್ಥಾನದಲ್ಲಿದ್ದಾರೆ. ಶ್ರೀನಿಧಿ ಶೆಟ್ಟಿ ಕೆಜಿಎಫ್‌ ಮೂಲಕ ಸ್ಟಾರ್‌ಡಮ್‌ ಪಡೆದರು. ಸದ್ಯ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಭಾರತೀಯ ಸಿನಿ ರಂಗದಲ್ಲಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಓಟ ಮುಂದುವರೆದಿದೆ. ಕಿರಿಕ್‌ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೆಡಗಿಗೆ ಭಾರಿ ಬೇಡಿಕೆ ಇದೆ. ಬಾಲಿವುಡ್‌ ಬಿಗ್‌ ಬಿ ಜೊತೆ ಕೂಡ ರಶ್ಮಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ನಟನೆಯ ಸುಕುಮಾರ್‌ ನಿರ್ದೇಶನ ಪುಷ್ಪಾ ಸಿನಿಮಾ ರಶ್ಮಿಕಾಗೆ ಲಕ್‌ ತಂದುಕೊಟ್ಟಿತ್ತು. ಸಾಮಿ... ಸಾಮಿ ಹಾಡಿನಲ್ಲಿ ರಶ್ಮಿಕಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಗಮನಸೆಳೆದಿದ್ದರು. ಅದಕ್ಕಾಗಿ ಇಂದಿಗೂ ಅವರು ನಂ1 ಸ್ಥಾನದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.