ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರು ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ .!

 2023 ರ ಗ್ರಹಗಳ ಸ್ಥಾನ ಬದಲಾವಣೆ ರಾಶಿ ಬದಲಾವಣೆಯ ಕಾರಣ, ಕೆಲವು ರಾಶಿಯವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. 

ಬೆಂಗಳೂರು : ಹೊಸ ವರ್ಷ 2023 ಕೆಲವರ ಪಾಲಿಗೆ ಸಂತೋಷವನ್ನೇ ಹೊತ್ತು ತರಲಿದೆ. ಇನ್ನು ಕೆಲವರ ಪಾಲಿಗೆ ಕಷ್ಟಗಳ ಸರಮಾಲೆಯೇ ಎದುರಾಗಲಿದೆ.  ಇವರು ಹೊಸ ವರ್ಷದಲ್ಲಿ ಮಾಡುವ ಎಲ್ಲಾ ಕೆಲಸಗಳನ್ನು ಯೋಚಿಸಿ ಮಾಡಬೇಕಾಗುತ್ತದೆ. ಯೋಚಿಸಿ ಹೆಜ್ಜೆ ಇಡಬೇಕಾಗುತ್ತದೆ. 2023 ರ ಗ್ರಹಗಳ ಸ್ಥಾನ ಬದಲಾವಣೆ ರಾಶಿ ಬದಲಾವಣೆಯ ಕಾರಣ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವೃಷಭ ರಾಶಿ :ವೃಷಭ ರಾಶಿಯ ಜನರು ಮುಂಬರುವ ವರ್ಷದಲ್ಲಿ ಜಾಗರೂಕರಾಗಿರಬೇಕು. ಇವರ ಆರೋಗ್ಯ ಏರುಪೇರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು.   

2 /4

ಸಿಂಹ ರಾಶಿ  : 2023 ರಲ್ಲಿ ಸಿಂಹ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಪತ್ನಿಯ ಆರೋಗ್ಯ ಕೆಡಬಹುದು. ಆದ ಕಾರಣ ನಿಮ್ಮ ಬಾಳ ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವ ಅಗತ್ಯವಿದೆ. ಆರ್ತಿಕ ಸ್ಥಿತಿ ಹದಗೆಡಬಹುದು. ಅನಗತ್ಯ ಖರ್ಚುಗಳಿಂದ  ಸಾಧ್ಯವಾದಷ್ಟು ದೂರವಿರಿ. ಇಲ್ಲವಾದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. 

3 /4

ಕನ್ಯಾ ರಾಶಿ :ಹೊಸ ವರ್ಷ 2023 ರಲ್ಲಿ, ಕನ್ಯಾರಾಶಿಯ ಜನರು  ರಹಸ್ಯ ಶತ್ರುಗಳಿಂದ ತೊಂದರೆಗೊಳಗಾಗಬಹುದು. 2023 ರಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ದಾಂಪತ್ಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ನೋಡಬೇಕಾಗಿ ಬರಬಹುದು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

4 /4

ಮೀನ ರಾಶಿ : 2023 ರ ವರ್ಷವು ಮೀನ ರಾಶಿಯವರ ಪಾಲಿಗೂ ನೋವಿನ ವರ್ಷವಾಗಿರಲಿದೆ. ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನಾವಶ್ಯಕ ಖರ್ಚುಗಳಿಂದ ತೊಂದರೆಯಾಗುವುದು. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿವೆ.  (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)