ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಅಡುಗೆ ಮನೆಯ ಈ ಒಂದೇ ಒಂದು ವಸ್ತು ನೀಡುತ್ತದೆ ಪರಿಹಾರ .!

ಪೌಷ್ಟಿಕಾಂಶದ ಕೊರತೆಯ ಕಾರಣದಿಂದಾಗಿ  ಕೂದಲ ಸಮಸ್ಯೆ ಕಂಡು ಬರುತ್ತದೆ.  ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿಯೇ ಲಭ್ಯವಿರುವ ಈ ವಸ್ತುವನ್ನು ಬಳಸಬಹುದು. 

ಬೆಂಗಳೂರು :  ಕೂದಲ ಆರೋಗ್ಯ ಸರಿಯಿಲ್ಲ ಎಂದಾದರೆ, ಅದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.  ಶುಷ್ಕ ಮತ್ತು ನಿರ್ಜೀವ ಕೂದಲಿನಿಂದ ಪ್ರತಿಯೊಬ್ಬರೂ ತೊಂದರೆಗೊಳಗಾಗುತ್ತಾರೆ. ಇದಕ್ಕೆ ಕಾರಣಗಳು ಕೂಡಾ ಅನೇಕ. ಹೊರಗಿನ ವಾತಾವರಣ, ಮಾಲಿನ್ಯ, ನಾವು ಸೇವಿಸುವ ಆಹಾರ, ಕೂದಲಿಗೆ ಬಳಸುವ ರಾಸಾಯನಿಕ ವಸ್ತುಗಳು ಎಲ್ಲವೂ ಸೇರಿ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಪೌಷ್ಟಿಕಾಂಶದ ಕೊರತೆಯ ಕಾರಣದಿಂದಾಗಿ  ಕೂದಲ ಸಮಸ್ಯೆ ಕಂಡು ಬರುತ್ತದೆ.  ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿಯೇ ಲಭ್ಯವಿರುವ ಈ ವಸ್ತುವನ್ನು ಬಳಸಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

 ಸುಂದರವಾದ ಕೂದಲು ಪ್ರತಿಯೊಬ್ಬರ ಕನಸು.  ಸುಂದರ ಕೂದಲನ್ನು ಪಡೆಯಲು ತುಪ್ಪವನ್ನು ಬಳಸಬಹುದು. ತುಪ್ಪವನ್ನು ಕೂದಲಿಗೆ ಬಳಸುವ ಮೂಲಕ  ಎಲ್ಲಾ  ಸಮಸ್ಯೆಗಳನ್ನು ನಿವಾರಿಸಬಹುದು. 

2 /5

ಕೂದಲಿನ ಪೋಷಣೆಗೆ ಮಸಾಜ್ ಮಾಡುವುದು ಬಹಳ ಮುಖ್ಯ. ಕೂದಲನ್ನು ತೊಳೆಯುವ ಮೊದಲು ತುಪ್ಪದಿಂದ ಮಸಾಜ್ ಮಾಡಬಹುದು. ಉಗುರು ಬೆಚ್ಚಗಿನ ತುಪ್ಪವನ್ನು ಕೂದಲಿನ ಬೇರುಗಳಿಗೆ  ಹಚ್ಚಿ ಮಸಾಜ್ ಮಾಡಿ. ಇದರಿಂದ ಕೂದಲು ಸದೃಢವಾಗುವುದಲ್ಲದೆ, ತಲೆಹೊಟ್ಟಿನ ಸಮಸ್ಯೆ ಕೂಡಾ ದೂರವಾಗುತ್ತದೆ.   

3 /5

ಕೂದಲು ಶುಷ್ಕವಾಗಿದ್ದರೆ ತುಪ್ಪ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಹಚ್ಚುವುದರಿಂದ ಶುಷ್ಕತೆ ದೂರವಾಗುತ್ತದೆ. ತುಪ್ಪದಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ ಕೂದಲಿಗೆ ಹಚ್ಚಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಹೀಗೆ ಮಾಡಿದರ ಹೊಳೆಯುವ ಕೂದಲು ನಿಮ್ಮದಾಗಬಹುದು. 

4 /5

ಕೂದಲಿನ ಬೇರುಗಳಲ್ಲಿ ತುರಿಕೆ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ಡ್ಯಾಂಡ್ರಫ್ ಕೂಡಾ ಕಾರಣವಾಗಿರಬಹುದು. ಬಾದಾಮಿ ಎಣ್ಣೆಯನ್ನು ತುಪ್ಪದಲ್ಲಿ ಬೆರೆಸಿ ಕೂದಲಿಗೆ ಹಚ್ಚಿ. ಕೂದಲು ತೊಳೆಯುವ ಮುನ್ನ ಸ್ವಲ್ಪ ರೋಸ್ ವಾಟರ್ ಹಾಕಿ ಮಸಾಜ್ ಮಾಡಿ.  ಹೀಗೆ ಮಾಡುತ್ತಾ ಬಂದರೆ ತುರಿಕೆ ದೂರವಾಗುತ್ತದೆ.    

5 /5

ಉದ್ದ ಕೂದಲಿಗೆ ತೆಂಗಿನೆಣ್ಣೆಯೊಂದಿಗೆ ತುಪ್ಪವನ್ನು ಬೆರೆಸಿ  ಹಚ್ಚಿ. ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತದೆ.  ಇದರಿಂದ ಕೂದಲು ಉದುರುವುದು ನಿಲ್ಲುವುದಲ್ಲದೆ, ಹೊಸ ಕೂದಲು ಬೆಳೆಯುವುದಕ್ಕೆ ಕೂಡಾ ಸಹಾಯವಾಗುತ್ತದೆ.