ಬೆಂಗಳೂರು : ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯ ಮತ್ತು ಆಕರ್ಷಣೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರ ಗ್ರಹವು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ. ಯಾರ ಜಾತಕದಲ್ಲಿ ಶುಕ್ರ ಶುಭ ಸ್ಥಾನದಲ್ಲಿರುತ್ತಾನೆಯೋ ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅವರ ಜೀವನದಲ್ಲಿ ಸುಖ ಶಾಂತಿ ತುಂಬಿರುತ್ತದೆ. ಪ್ರೇಮ ಜೀವನವಾಗಲೀ, ವೈವಾಹಿಕ ಜೀವನವೇ ಆಗಲಿ ಸಮೃದ್ದಿಯಿಂದ ಕೂಡಿರುತ್ತದೆ. ಈ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ 29 ರಂದು ಶುಕ್ರ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಹೀಗೆ ರಾಶಿ ಬದಲಾಯಿಸಿದ ನಂತರ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಅದಕ್ಕಾಗಿಯೇ ಶುಕ್ರನು ಈ ರಾಶಿಯವರ ಮೇಲೆ ಸದಾ ದಯೆ ತೋರುತ್ತಾನೆ. ಡಿಸೆಂಬರ್ 29 ರಂದು ಸಂಭವಿಸಲಿರುವ ಶುಕ್ರ ಸಂಕ್ರಮಣವು ವೃಷಭ ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ. ಈ ರಾಶಿಯವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಬಹುದು. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಹರಿದು ಬರುವುದು. ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಇದನ್ನೂ ಓದಿ : Chanakya Niti : ಸಂತೋಷದ ಕುಟುಂಬಕ್ಕಾಗಿ ಚಾಣಕ್ಯನ ಈ 4 ನೀತಿಗಳನ್ನು ಅನುಸರಿಸಿ!
ಕನ್ಯಾ ರಾಶಿ : ಶುಕ್ರ ಸಂಕ್ರಮಣವು ಕನ್ಯಾ ರಾಶಿಯವರ ಪ್ರೇಮ ಜೀವನಕ್ಕೆ ಮಾಧುರ್ಯವನ್ನು ತುಂಬುತ್ತದೆ. ಕನ್ಯಾ ರಾಶಿಯವರ ಜೀವನದಲ್ಲಿ ಪ್ರೀತಿ ಚಿಗುರಬಹುದು. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. ಮನೆಯಲ್ಲಿ ಕೆಲವು ಧಾರ್ಮಿಕ ಅಥವಾ ಮಂಗಳಕರ ಕಾರ್ಯಗಳು ನಡೆಯಬಹುದು. ಜೀವನದಲ್ಲಿ ಸಂತೋಷ ಹೆಚ್ಚುತ್ತದೆ.
ತುಲಾ ರಾಶಿ : ಶುಕ್ರ ತುಲಾ ರಾಶಿಯ ಅಧಿಪತಿ ಕೂಡಾ ಹೌದು. ಹೀಗಾಗಿ ಶುಕ್ರ ಸಂಕ್ರಮಣ ತುಲಾ ರಾಶಿಯವರಿಗೂ ಶುಭ ಫಲಿತಾಂಶಗಳನ್ನು ನೀಡಲಿದೆ. ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತವೆ. ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಸ್ವಂತ ಮನೆ ಅಥವಾ ಕಾರು ಖರೀದಿಸುವ ಕನಸು ನನಸಾಗಬಹುದು. ಹೊಸ ಕೆಲಸಕ್ಕೆ ಸೇರುವ ಸಾಧ್ಯತೆ ಕೂಡಾ ಹೆಚ್ಚು. ಆದಾಯ ಹೆಚ್ಚಾಗಲಿದೆ.
ಇದನ್ನೂ ಓದಿ : Astro Tips : ಕೈಯಿಂದ ಈ 5 ವಸ್ತುಗಳು ಬೀಳುವುದು ಅಶುಭ! ದೊಡ್ಡ ತೊಂದರೆ ಬರುವ ಸೂಚನೆ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.