iPhone 13 In Cheapest Price: ಹೊಸ ವರ್ಷದ ಆಚರಣೆಗಾಗಿ ಎಲ್ಲೆಡೆ ತಯಾರಿ ಆರಂಭವಾಗಿದೆ. ಈ ಮಧ್ಯೆ, ಹಳೆಯ ವರ್ಷ ಮುಗಿಯುವ ಮೊದಲು ಹಲವು ಶಾಪಿಂಗ್ ಆಪ್ ಗಳು ಸ್ಟಾಕ್ ಕ್ಲಿಯರೆನ್ಸ್ ಗಾಗಿ ವರ್ಷಾಂತ್ಯದ ಕೊಡುಗೆಗಳನ್ನು ನೀಡುತ್ತಿವೆ. ಇದೀಗ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಕೂಡ ನಿತ್ಯ ಒಂದಿಲ್ಲೊಂದು ಅತ್ಯುತ್ತಮ ಕೊಡುಗೆಗಳನ್ನು ಕಾಣಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ದುಬಾರಿ ಸ್ಮಾರ್ಟ್‌ಫೋನ್, ಐಫೋನ್ ಗಳಲ್ಲಿ ಬಂಪರ್ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಭಾಗವಾಗಿ ಇಂದು ಐಫೋನ್ 13ರ ಮೇಲೂ ಭರ್ಜರಿ ಬೆಲೆ ಕಡಿತವನ್ನು ಘೋಷಿಸಲಾಗಿದೆ. ನೀವೂ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಅವಕಾಶವನ್ನು ಖಂಡಿತ ಮಿಸ್ ಮಾಡಿಕೊಳ್ಳಬೇಡಿ. ಇಂದು ನೀವು
ಫ್ಲಿಪ್‌ಕಾರ್ಟ್‌ನಲ್ಲಿ 70 ಸಾವಿರ ರೂಪಾಯಿಯ ಐಫೋನ್ 13 ಅನ್ನು 45 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ. ಏನಿದು ಕೊಡುಗೆ ಎಂದು ತಿಳಿಯಿರಿ.
iPhone 13ನಲ್ಲಿ ಬಂಪರ್ ಡಿಸ್ಕೌಂಟ್:
ವಾಸ್ತವವಾಗಿ, iPhone 13 (128GB) ಬಿಡುಗಡೆಯ ಬೆಲೆ 69,700 ರೂ. ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್ ಖರೀದಿಯಲ್ಲಿ 4,901ರೂ.ಗಳ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಿಂದಾಗಿ ಐಫೋನ್ 13ರ ಬೆಲೆ 64,999ಗೆ ಇಳಿಕೆ ಆಗಲಿದೆ. ಆದರೆ, ಈ ಸೇಲ್ನಲ್ಲಿ ಲಭ್ಯವಿರುವ ಇತರ ಬ್ಯಾಂಕಿಂಗ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯವ ಮೂಲಕ ಈ ಫೋನ್ ಅನ್ನು ಇನ್ನೂ ಕಡಿಮೆ ಬೆಲೆಯನ್ನು ನಿಮ್ಮದಾಗಿಸಬಹುದಾಗಿದೆ.
ಇದನ್ನೂ ಓದಿ- ಕೇವಲ 174 ರೂ.ಗೆ ಮನೆಗೆ ತನ್ನಿ 15 ಲೀಟರ್ ಗೀಸರ್ .! ಮುಗಿ ಬಿದ್ದು ಖರೀದಿಸುತ್ತಿದ್ದಾರೆ ಗ್ರಾಹಕರು
iPhone 13ನಲ್ಲಿ ಲಭ್ಯವಿರುವ ಬ್ಯಾಂಕ್ ಆಫರ್:
ನೀವು ಫೆಡರಲ್ ಬ್ಯಾಂಕ್‌ನ ಗ್ರಾಹಕರಾಗಿದ್ದು ಈ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ನಲ್ಲಿ ಪಾವತಿಸುವ ಮೂಲಕ iPhone 13 ಅನ್ನು ಖರೀದಿಸಿದರೆ, ನಿಮಗೆ 1,500 ರೂ.ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇದರಿಂದ ಐಫೋನ್ 13 ಬೆಲೆ 63,499 ರೂ. ಆಗಲಿದೆ. ನೀವು ಫೋನ್ ನಲ್ಲಿ ಲಭ್ಯವಿರುವ ವಿನಿಮಯ ಕೊಡುಗೆಯ ಲಾಭವನ್ನು ಪಡೆದರೆ ಇದರ ಬೆಲೆ ಗಣನೀಯವಾಗಿ ಇನ್ನಷ್ಟು ಇಳಿಕೆ ಆಗಲಿದೆ.
ಇದನ್ನೂ ಓದಿ- Year Ender 2022: Srivalli ಯಿಂದ ಹಿಡಿದು ಕಚ್ಚಾ ಬಾದಾಮವರೆಗೆ ಯುಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳಿವು
iPhone 13 ಎಕ್ಸ್‌ಚೇಂಜ್ ಆಫರ್:
ಐಫೋನ್ ಖರೀದಿಯಲ್ಲಿ ನೀವು ಗರಿಷ್ಠ ರಿಯಾಯಿತಿಯನ್ನು ಬಯಸಿದರೆ ಎಕ್ಸ್‌ಚೇಂಜ್ ಕೊಡುಗೆಯ ಲಾಭವನ್ನು ಪಡೆಯಬಹುದು. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ ಆದರೆ ಮೇಲೆ 17,500 ರೂಪಾಯಿಗಳ ಭಾರೀ ಡಿಸ್ಕೌಂಟ್ ಲಭ್ಯವಾಗಲಿದೆ. ಆದಾಗ್ಯೂ, ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ಸ್ಥಿತಿಯಲ್ಲಿದ್ದು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ ಇಷ್ಟು ರಿಯಾಯಿತಿ ಸಿಗಲಿದೆ. ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಐಫೋನ್ 13 ಅನ್ನು 45,999 ರೂ.ಗಳಿಗೆ ನಿಮ್ಮದಾಗಿಸಬಹುದಾಗಿದೆ. ಆದರೆ, ನೆನಪಿಡಿ, ಈ ಡೀಲ್ ಯಾವಾಗ ಬೇಕಾದರೂ ಕೊನೆಗೊಳ್ಳಬಹುದು. ಹಾಗಾಗಿ, ತಡಮಾಡದೆ ಐಫೋನ್ ಬುಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.