Grah Dosha Remedies: ಪುಟ್ಟ ಕಂದಮ್ಮಗಳಿಗೆ ದೃಷ್ಟಿ ನಿವಾರಣೆಗಾಗಿ ಬಳಸುವ ಕಣ್ಕಪ್ಪು ಮಹಿಳೆಯರ ಸೌಂದರ್ಯದ ಗಣಿ. ಅಷ್ಟೇ ಅಲ್ಲ, ಕಣ್ಣಿಗೆ ಹಚ್ಚುವ ಕಾಡಿಗೆಯು ಕಣ್ಣುಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಲೂ ಕೂಡ ಸಹಕಾರಿ ಆಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಕಾಡಿಗೆಯು ಹಲವು ಗ್ರಹಗಳ ದೋಷಗಳನ್ನು ಕೂಡ ನಿವಾರಿಸಬಲ್ಲ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ, ಶನಿ, ರಾಹು-ಕೇತು ಗ್ರಹಗಳಿಗೆ ಸಂಬಂಧಿಸಿದ ದೋಷವನ್ನು ನಿವಾರಿಸಲು ಕಣ್ಕಪ್ಪು ರಾಮಬಾಣವಿದ್ದಂತೆ ಎನ್ನಲಾಗುವುದು. ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ಗ್ರಹಗಳ ದೋಷವನ್ನು ನಿವಾರಿಸಲು ಹೇಗೆ ಸಾಧ್ಯ? ಅದಕ್ಕಾಗಿ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ನಿಮ್ಮ ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ಮಂಗಳ, ಶನಿ, ರಾಹು-ಕೇತು ಗ್ರಹಗಳ ದೋಷ ನಿವಾರಿಸಲು ಈ ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಿ:
ಮಂಗಳ ದೋಷ ನಿವಾರಣೆ:
ವೈದಿಕ ಜ್ಯೋತಿಷ್ಯದ ಪ್ರಕಾರ, ನಿತ್ಯ ಹನುಮಾನ್ ಚಾಲೀಸಾವನ್ನು ಪಠಿಸಿ ನಂತರ ಕಣ್ಣಿಗೆ ಕಾಡಿಗೆ ಹಚ್ಚಿ. ಈ ರೀತಿ ಮಾಡುವುದರಿಂದ ಮಂಗಳ ದೋಷದಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
ಶನಿ, ರಾಹು-ಕೇತು ಗ್ರಹಗಳ ದೋಷ ನಿವಾರಣೆಗೆ ಏನು ಮಾಡಬೇಕು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳನ ದಶಾ ಚೆನ್ನಾಗಿಲ್ಲದಿದ್ದರೆ ಶನಿ, ರಾಹು-ಕೇತು ಗ್ರಹಗಳ ದೋಷವೂ ಉಂಟಾಗುತ್ತದೆ. ಈ ದೋಷಗಳನ್ನು ನಿವಾರಿಸಲು ಸತತ 40 ದಿನಗಳವರೆಗೆ ಕಣ್ಣಿಗೆ ತಪ್ಪದೇ ಕಾಡಿಗೆ ಹಚ್ಚಬೇಕು.
ಇದನ್ನೂ ಓದಿ- Remedies For Mercury: ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು ಸರಳ ಸಲಹೆಗಳು
ಸಾಡೇ ಸಾತಿ ಶನಿ ದೋಷ ನಿವಾರಣೆ:
ಯಾವುದೇ ವ್ಯಕ್ತಿಯ ಜಾತಕದಲ್ಲಿ ಸಾಡೇ ಸಾತಿ ಶನಿ ದೋಷ ಇದ್ದರೆ, ಇದರ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಕಣ್ಣು ಕಪ್ಪಿನ ಬಟ್ಟಲನ್ನು ಹಿಡಿದು ತಲೆಯಿಂದ ಕಾಲಿನವರೆಗೆ 9 ಬಾರಿ ನಿವಾಳಿಸಿ ಬಳಿಕ ಆ ಕಣ್ಕಪ್ಪಿನ ಬಟ್ಟಲನ್ನು ಅಜ್ಞಾತ ಸ್ಥಳದಲ್ಲಿ ಹೂತು ಹಾಕಿ. ಹಿಂದಿರುಗಿ ನೋಡದೇ ಆ ಸ್ಥಳದಿಂದ ಹೊರಡಿ. ಹೀಗೆ ಮಾದುವುದರಿಂದ ಸಾಡೇ ಸಾತಿ ಶನಿ ಪ್ರಭಾವದಿಂದ ಉಂಟಾಗಬಹುದಾದ ತೊಂದರೆಗಳಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ
ವೃತ್ತಿ ಬಾಧೆ ತಪ್ಪಿಸಲು ಕಾಡಿಗೆ ಪರಿಹಾರ:
ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ತೊಡಕುಗಳನ್ನು ಎದುರಿಸುತ್ತಿದ್ದರೆ ಇದನ್ನು ತಪ್ಪಿಸಲು, ಶನಿವಾರದಂದು 5ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಕಣ್ಕಪ್ಪನ್ನು ತೆಗೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಯಾರಿಗೂ ಕಾಣದ ರೀತಿಯಲ್ಲಿ ಹೂತುಹಾಕಿ. ಬಳಿಕ ಹಿಂದೆ ತಿರುಗಿ ನೋಡದೆಯೇ ಮನೆಗೆ ಹೋಗಿ. ಈ ರೀತಿ ಮಾಡುವುದರಿಂದ ನಿಮ್ಮ ವೃತ್ತಿ ರಂಗದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.