ಯೋಧನ ಹೆಸರಲ್ಲಿ ಮೋಸಕ್ಕೆ ಇಳಿದ ಆನ್ ಲೈನ್ ವಂಚಕರು..!

ದೀಪಕ್ ಪವಾರ್ ಎಂಬ ಯೋಧನ ಹೆಸರಿನಲ್ಲಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.  

Written by - VISHWANATH HARIHARA | Edited by - Ranjitha R K | Last Updated : Dec 2, 2022, 03:38 PM IST
  • ಯೋಧನ ಹೆಸರಿನಲ್ಲಿ ವಂಚನೆಗೆ ಮುಂದಾದ ಖದೀಮರು
  • ಮನೆ ಬಾಡಿಗೆಗೆ ಬೇಕು ಎಂದು ಹಣ ದೋಚಲು ಪ್ಲಾನ್
  • ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ
 ಯೋಧನ ಹೆಸರಲ್ಲಿ ಮೋಸಕ್ಕೆ ಇಳಿದ ಆನ್ ಲೈನ್ ವಂಚಕರು..! title=

ಬೆಂಗಳೂರು: ಯೋಧರ ಹೆಸರು ಬಳಸಿಕೊಂಡು ಆನ್‌ಲೈನ್ ವಂಚಕರು ಮತ್ತೆ ತಮ್ಮ ಪ್ರವೃತ್ತಿ ಮುಂದುವರೆಸಿದ್ದಾರೆ. ಸದ್ಯ ದೀಪಕ್ ಪವಾರ್ ಎಂಬ ಯೋಧನ ಹೆಸರಿನಲ್ಲಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

ನೋ ಬ್ರೋಕರ್ ಆ್ಯಪ್ನಲ್ಲಿ ಮಹೇಶ್ ರಾಜಗೋಪಾಲ್ ಎಂಬುವವರು 2 ಬಿಹೆಚ್ ಕೆ ಮನೆ ಖಾಲಿ ಇದೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ದೀಪಕ್ ಪವಾರ್ ಎಂಬ ಯೋಧನ ಹೆಸರಲ್ಲಿ ಮಹೇ ಶ್ ಅವರಿಗೆ ಸೈಬರ್ ಖದೀಮರು ಮೇಸೆಜ್ ಮಾಡಿ ನಮಗೆ ಬಾಡಿಗೆಗೆ ಮನೆ ಬೇಕು ಎಂದು ಕೇಳಿ ಕೊಂಡಿದ್ದಾರೆ. ಹೀಗೆ ಮಹೇಶ್ ಹಾಗೂ ಸೈಬರ್ ವಂಚಕರ ನಡುವೆ ಮೆಸೇಜ್ ಮೂಲಕವೇ ಮಾತುಕತೆ ನಡೆದಿದೆ. 

ಇದನ್ನೂ ಓದಿ : ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಹೆಂಡತಿ ಒತ್ತಾಯ : ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ

ಅತ್ತ ಸೈಬರ್ ವಂಚಕ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಫೋಟೋ , ಆರ್ಮಿಯ ಐಡಿ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕೂಡಾ ಕಳುಹಿಸಿದ್ದಾನೆ. ನಂತರ ಮನೆ ಬಾಡಿಗೆಗೆ ಪಡೆಯಲು ಅಡ್ವಾನ್ಸ್ ಕೊಡುವುದಾಗಿ ಹೇಳಿ ಗೂಗಲ್ ಪೇ ಮೂಲಕ ಒಂದು ರೂಪಾಯಿ ಹಣ ಕಳುಹಿಸುವಂತೆ ಮನೆ ಮಾಲೀಕ ಮಹೇಶ್ ಗೆ  ಹೇಳಿದ್ದ. ಇದಕ್ಕೆ ಒಪ್ಪದ ಮನೆ ಮಾಲೀಕ ಮಹೇಶ್, ನೇರವಾಗಿ ಬಂದು ಭೇಟಿಯಾಗಲು ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಸೈಬರ್ ವಂಚಕ ಒಂದು ರೂಪಾಯಿ ಗೂಗಲ್ ಪೇ ಮಾಡಿ ಎಂದು ಹತ್ತಾರು ಬಾರಿ ಸತಾಯಿಸಲು ಶುರು ಮಾಡಿದ್ದಾನೆ. 

ಇದರಿಂದ ಅನುಮಾನಗೊಂಡ ಮನೆ ಮಾಲೀಕ ಮಹೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಗೂಗಲ್ ಪೇ ಬಳಿಕ ಕ್ಯೂ ಆರ್ ಕೋಡ್ ಕೇಳಿ ಹಣ ಲಪಟಾಯಿಸಲು ಸೈಬರ್ ಖದೀಮರು ಪ್ಲ್ಯಾನ್ ಮಾಡಿದ್ದರು ಎಂಬುದು ಗೊತ್ತಾಗಿದೆ. ಈ ಹಿಂದಿನಿಂದಲೂ ಸಹ ಯೋಧನ ಹೆಸರಿನಲ್ಲಿ ಹಣ ಕೇಳುವ ದಂಧೆ ನಗರದಲ್ಲಿ ಹೆಚ್ಚಾಗುತ್ತಿದೆ. ಅನೇಕ ಮಂದಿ ಸೈಬರ್ ಖದೀಮರ‌ ಬಗ್ಗೆ ಅರಿಯದೇ ಯೋಧ ಎಂದು ನಂಬಿ ಲಕ್ಷಾಂತರ ಹಣ ಕಳೆದುಕೊಂಡಿದ್ದರು. 

ಇದನ್ನೂ ಓದಿ : ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ ಮತದಾರರನ್ನು ಕೈಬಿಟ್ಟಿಲ್ಲ : ಸಿಎಂ ಬೊಮ್ಮಾಯಿ

ಸೈಬರ್ ವಂಚಕರು ಜನರನ್ನು ಯಾಮಾರಿಸಿ ಹಣ ದೋಚಲು ನಾನಾ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಜಾಗ್ರತೆ ವಹಿಸಿ ಎಂದು ಪೊಲೀಸರ ಮನವಿ ಸಾರ್ವಜನಿಕರಿಗೆ ಮನವಿ‌ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News