Vivo ಹೊರ ತರಲಿದೆ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್ .! ಏನಿರಲಿದೆ ವೈಶಿಷ್ಟ್ಯ ?

3C certification ಪ್ಲಾಟ್‌ಫಾರ್ಮ್‌ನ ಡೇಟಾಬೆಟ್‌ನಲ್ಲಿ ಈ  ಸರಣಿಯ ಎರಡು ಫೋನ್‌ಗಳು ಕಂಡು ಬಂದಿವೆ.

Written by - Ranjitha R K | Last Updated : Nov 28, 2022, 01:05 PM IST
  • ಶೀಘ್ರದಲ್ಲೇ ಮಿಡ್-ಸೆಗ್ಮೆಂಟ್ ಸ್ಮಾರ್ಟ್‌ಫೋನ್ ಹೊರ ತರುತ್ತಿರುವ Vivo
  • ಈಗ ಕಂಪನಿಯ ಹೊಸ ಫೋನ್ S-Series ಮಾರುಕಟ್ಟೆಗೆ
  • 3C ಸರ್ಟಿಫಿಕೇಶನ್ ಪ್ಲಾಟ್ ಫಾರಂನಲ್ಲಿ ಕಂಡು ಬಂತು ಎರಡು ಫೋನ್‌
Vivo ಹೊರ ತರಲಿದೆ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್ .! ಏನಿರಲಿದೆ ವೈಶಿಷ್ಟ್ಯ ?  title=
Vivo 5G smartphone

ಬೆಂಗಳೂರು : Vivo ಶೀಘ್ರದಲ್ಲೇ ಮಿಡ್-ಸೆಗ್ಮೆಂಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಇತ್ತೀಚೆಗೆ ಚೀನಾದಲ್ಲಿ Vivo X90  ಸೀರೀಸ್ ಅನ್ನು ಬಿಡುಗಡೆ ಮಾಡಿದೆ. ಈಗ  ಕಂಪನಿಯ ಹೊಸ ಫೋನ್ S-Series ಮಾರುಕಟ್ಟೆಗೆ ಬರಲಿದೆ. 3C certification ಪ್ಲಾಟ್‌ಫಾರ್ಮ್‌ನ ಡೇಟಾಬೆಟ್‌ನಲ್ಲಿ ಈ  ಸರಣಿಯ ಎರಡು ಫೋನ್‌ಗಳು ಕಂಡು ಬಂದಿವೆ. ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಹೊಸ ಸ್ಮಾರ್ಟ್‌ಫೋನ್ Vivo S16 ಸರಣಿಯ ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. 

3C ಸರ್ಟಿಫಿಕೇಶನ್ ಪ್ಲಾಟ್ ಫಾರಂನಲ್ಲಿ ಕಂಡು ಬಂತು ಎರಡು  ಫೋನ್‌ :
ಈ ಎರಡು Vivo ಸ್ಮಾರ್ಟ್‌ಫೋನ್‌ಗಳು 3C ಸರ್ಟಿಫಿಕೇಶನ್ ಪ್ಲಾಟ್ ಫಾರಂನ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿವೆ. ಈ ಎರಡು ಫೋನ್ ನ ಮಾಡೆಲ್ ಸಂಖ್ಯೆ V2244A ಮತ್ತು V2245A ಆಗಿದೆ. ಇದೀಗ ಈ ಫೋನ್ ನ ಸ್ಕ್ರೀನ್ ಶಾಟ್ ಸಾಕಷ್ಟು ವೈರಲ್ ಆಗುತ್ತಿದೆ. ಇವು ಎರಡೂ 5G ಸ್ಮಾರ್ಟ್‌ಫೋನ್‌ಗಳಾಗಿವೆ. ಈ ಎರಡೂ ಫೋನ್‌ಗಳು 80W ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತವೆ. Vivo S16 ಮತ್ತು Vivo S16 Pro ಎಂಬ ಹೆಸರಿನಲ್ಲಿ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎನ್ನಲಾಗಿದೆ. 

ಇದನ್ನೂ ಓದಿ : ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ

ಯಾವಾಗ ಬಿಡುಗಡೆಯಾಗಲಿದೆ Vivo S16 ಸರಣಿಯ  ಫೋನ್ : 
ಮೂಲಗಳ ಪ್ರಕಾರ, Vivo S16 ಸೀರೀಸ್ ಶೀಘ್ರದಲ್ಲೇ ಚೀನಾದಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. Vivo S16 ಮತ್ತು Vivo S16 Pro ಅನ್ನು ಡಿಸೆಂಬರ್ ಅಥವಾ 2023 ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. Vivo S16e ಹೆಸರಿನ ಹೊಸ ಮಾದರಿಯನ್ನು ಈ ಸರಣಿಯಲ್ಲಿ ಸೇರಿಸಬಹುದು. Vivo S15e ನಲ್ಲಿ Exynos 1080, Vivo S15 ನಲ್ಲಿ Snapdragon 870 ಮತ್ತು Vivo S15 Pro ನಲ್ಲಿನ ಡೈಮೆನ್ಸಿಟಿ 8100 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. Vivo S16 ಸ್ನಾಪ್‌ಡ್ರಾಗನ್ 870 ಚಿಪ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

Vivo S16 ಸರಣಿಯ ಬಣ್ಣಗಳು :
Vivo S16 ಮೂರು ಬಣ್ಣಗಳಲ್ಲಿ (ಕಪ್ಪು, ನೀಲಿ ಮತ್ತು ನೇರಳೆ) ಬರಲಿದೆ. ಅಲ್ಲದೆ,  Vivo S16 Pro ಕೂಡಾ ಕಪ್ಪು, ಹಸಿರು ಮತ್ತು ಆರೆಂಜ್  ಗೋಲ್ಡ್ ಎಂಬ ಮೂರು ಬಣ್ಣಗಾಲ್ಲಿ ಲಭ್ಯವಿರಲಿದೆ. ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇನ್ನೂ ಏನನ್ನೂ ಹೇಳಲಾಗಿಲ್ಲ.

ಇದನ್ನೂ ಓದಿ : VIP Sim Card : 9999 ಅಥವಾ 7777 ನಂತಹ ಸಂಖ್ಯೆಯ ಉಚಿತ ಸಿಮ್ ಕಾರ್ಡ್ ಬೇಕೇ? ಈ ರೀತಿಯ ಬುಕ್ ಮಾಡಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News