PM Mudra Yojana: ಕೇಂದ್ರ ಸರ್ಕಾರಕ್ಕೆ ರೂ.4,500 ಕೊಟ್ಟರೆ ನೀಡುತ್ತೆ 10 ಲಕ್ಷ ಸಾಲ! ಹೊಸ ಯೋಜನೆ ಸತ್ಯಾಂಶವೇನು?

PM Mudra Loan Online Apply:  ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯಡಿಯಲ್ಲಿ ಕಾರ್ಪೊರೇಟ್ ಮತ್ತು ಕೃಷಿಯೇತರ ಸಣ್ಣ/ಸೂಕ್ಷ್ಮ ಕೈಗಾರಿಕೆಗಳಿಗೆ ರೂ.10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿದಿದೆ. 2015 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಅನೇಕ ಜನರು ಪ್ರಯೋಜನ ಪಡೆದಿದ್ದಾರೆ.

Written by - Bhavishya Shetty | Last Updated : Nov 27, 2022, 10:31 AM IST
    • ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ರೂ.10 ಲಕ್ಷಕ್ಕೆ ರೂ.4500 ಪಾವತಿಸಬೇಕು
    • ಹೀಗೆಂದು ಭಾರೀ ವೈರಲ್ ಆಗುತ್ತಿರುವ ಪತ್ರ
    • ಇದೀಗ ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋ ಈ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದೆ
PM Mudra Yojana: ಕೇಂದ್ರ ಸರ್ಕಾರಕ್ಕೆ ರೂ.4,500 ಕೊಟ್ಟರೆ ನೀಡುತ್ತೆ 10 ಲಕ್ಷ ಸಾಲ! ಹೊಸ ಯೋಜನೆ ಸತ್ಯಾಂಶವೇನು? title=
Mudra Yojana

PM Mudra Loan Online Apply:  ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಡಿಜಿಟಲೀಕರಣದ ಪ್ರಭಾವದಿಂದ ಬ್ಯಾಂಕಿಂಗ್ ಸೇವೆಗಳೂ ಡಿಜಿಟಲ್ ಆಗಿವೆ. ಈ ದಿನಗಳಲ್ಲಿ ಗ್ರಾಹಕರಿಗೆ ಆನ್‌ಲೈನ್ ಸಾಲಗಳು ಸುಲಭವಾಗಿ ಲಭ್ಯವಿವೆ. ಆದರೆ ಇದರ ಜೊತೆಗೆ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಸದ್ಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ರೂ.10 ಲಕ್ಷಕ್ಕೆ ರೂ.4500 ಪಾವತಿಸಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: Rain Stops IND vs NZ play: ಇಂಡೋ-ಕೀವಿಸ್ 2ನೇ ಏಕದಿನ ಪಂದ್ಯಕ್ಕೆ ವರುಣನಿಂದ ಅಡ್ಡಿ: ಬಲಿಯಾಗುತ್ತಾ ಟೀಂ ಇಂಡಿಯಾ ಕನಸು!

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯಡಿಯಲ್ಲಿ ಕಾರ್ಪೊರೇಟ್ ಮತ್ತು ಕೃಷಿಯೇತರ ಸಣ್ಣ/ಸೂಕ್ಷ್ಮ ಕೈಗಾರಿಕೆಗಳಿಗೆ ರೂ.10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿದಿದೆ. 2015 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಅನೇಕ ಜನರು ಪ್ರಯೋಜನ ಪಡೆದಿದ್ದಾರೆ. ವಾಣಿಜ್ಯ ಬ್ಯಾಂಕ್‌ಗಳು, ಆರ್‌ಆರ್‌ಬಿಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಎಂಎಫ್‌ಐಗಳು ಮತ್ತು ಎನ್‌ಬಿಎಫ್‌ಸಿಗಳು ಸಾಲ ನೀಡುತ್ತಿವೆ. ಸಾಲ ಬಯಸುವವರು ಇವುಗಳಲ್ಲಿ ಯಾವುದನ್ನಾದರೂ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಇತ್ತೀಚೆಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಂಬಂಧಿಸಿದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಿಎಂಎಂವೈ ಶೀರ್ಷಿಕೆಯ ಈ ಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರವನ್ನೂ ಮುದ್ರಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ರೂ.10 ಲಕ್ಷ ಸಾಲಕ್ಕೆ ಕೇವಲ ರೂ.4500 ಪರಿಶೀಲನೆ ಮತ್ತು ಪ್ರಕ್ರಿಯೆಗೆ ಪಾವತಿಸಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ನಗದು ಜಮಾ ಆಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

 

 

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಫಿಫಾ ವಿಶ್ವಕಪ್ ಸ್ಟ್ರೀಮಿಂಗ್ ಗೆ ನಿರ್ಬಂಧ

ಇದೀಗ ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋ ಈ ಪತ್ರದ ಬಗ್ಗೆ  ಸ್ಪಷ್ಟನೆ ನೀಡಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ 4500 ರೂ. ಪಾವತಿಸುವಂತೆ ವೈರಲ್ ಆಗುತ್ತಿರುವ ಪತ್ರ ನಕಲಿ. ಹಣಕಾಸು ಸಚಿವಾಲಯವು ಈ ಪತ್ರವನ್ನು ನೀಡಿಲ್ಲ ಎಂದು ಹೇಳಿದೆ. ಈ ಪತ್ರದ ಜೊತೆಗೆ ಟ್ವೀಟ್ ಮಾಡಿದೆ. ಅಂತಹ ಪತ್ರಕ್ಕೆ ಸಂಬಂಧಿಸಿದಂತೆ ನೀವು ಸಂದೇಶ ಅಥವಾ ಇಮೇಲ್ ಅನ್ನು ಸ್ವೀಕರಿಸಿದರೆ, ಅದನ್ನು ನಂಬಬೇಡಿ. ನಿರ್ಲಕ್ಷಿಸಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News