ನವದೆಹಲಿ: ಬಿಜೆಪಿ ವಿರುದ್ದ ಕಿಡಿಕಾರಿದ ನ್ಯಾಶನಲ್ ಕಾನಫೆರನ್ಸ್ ಮುಖಸ್ಥ ಫಾರೂಕ್ ಅಬ್ದುಲ್ಲಾ ಮುಂಬರುವ 2019 ರ ಚುನಾವಣೆಯಲ್ಲಿ ಬಿಜೆಪಿಯನ್ನು ಆ ಶ್ರೀರಾಮನು ಗೆಲ್ಲಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ "ಬಿಜೆಪಿಯವರು 2019 ರ ಚುನಾವಣೆಯಲ್ಲಿ ಶ್ರೀರಾಮನು ತಮ್ಮನ್ನು ಗೆಲ್ಲಿಸುತ್ತಾನೆ ಎಂದು ಭಾವಿಸಿದ್ದಾರೆ. ಆದರೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಅವರಿಗೆ ದೇವರು ಸಹಾಯ ಮಾಡುವುದಿಲ್ಲ,ಮತದಾನ ಮಾಡುವವರು ಜನರು ಜನಸಾಮಾನ್ಯರೇ ಹೊರತು ರಾಮ ಅಥವಾ ಅಲ್ಲಾ ಅಲ್ಲ" ಎಂದು ಅವರು ತಿಳಿಸಿದರು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ರಾಮಮಂದಿರ-ಬಾಬ್ರಿ ಮಸೀದಿ ವಿಷಯದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇತ್ತೀಚಿಗೆ ಸುಪ್ರಿಂಕೋರ್ಟ್ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಹಿನ್ನಲೆಯಲ್ಲಿ ಬಿಜೆಪಿ ಸೇರಿ ಹಲವು ಸಂಘಪರಿವಾರದ ಸಂಘಟನೆಗಳು ಸರ್ಕಾರ ಈ ವಿಚಾರವಾಗಿ ಸುಗ್ರಿವಾಜ್ನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದವು.