Triple Riding Movie Review: ಫೈನಲಿ ಗೋಲ್ಡನ್ ಸ್ಟಾರ್ ಗಣೇಶ್ ಹೊರಟೇ ಬಿಟ್ಟರು 'ತ್ರಿಬಲ್ ರೈಡಿಂಗ್'.. ಯೆಸ್ ಗೋಲ್ಡನ್ ಸ್ಟಾರ್ ಗಣೇಶ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಈ ಚಿತ್ರದಲ್ಲಿ ಕಲಾವಿದರ ಮಹಾಸಂಗಮವಾಗಿದೆ.ಯಾಕಂದ್ರೆ ತ್ರಿಬಲ್ ರೈಡಿಂಗ್ನಲ್ಲಿ ನಿಮ್ಮನ್ನ ರಂಜಿಸಲು ಹಲವು ನಟನಟಿಯರು ಒಂದಾಗಿದ್ದಾರೆ.
ಆರಂಭದಲ್ಲಿ ವೈದ್ಯನಾಗಿ ಎಂಟ್ರಿ ಕೊಡೋ ಗಣೇಶ್, ಭರ್ಜರಿಯಾಗಿ ನಗಿಸುತ್ತಾರೆ.ಗಣಿ ಇದ್ದಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗಬೋದು. ಇಲ್ಲಿ ಗಾಲ್ಫ್ ಆಟಗಾರ ಮತ್ತು ಸ್ಪೋರ್ಟ್ಸ್ ಕಾರ್ ಡೀಲರ್ ಆಗಿ ಕೂಡ ಗಣಿ ನಿಮ್ಮನ್ನ ರಂಜಿಸುತ್ತಾರೆ.ಅದು ಹೇಗೆ ಅನ್ನೋದನ್ನ ನೀವು ಚಿತ್ರಮಂದಿರಕ್ಕೆ ಬಂದು ಅರ್ಥ ಮಡ್ಕೋಳ್ಳಿ. ಇಷ್ಟೇ ಅಲ್ಲದೇ ಸಮರ ಕಲೆ ಮತ್ತು ಈಜನ್ನು ಕಲಿಸುತ್ತಾರೆ.ಹೀಗಿರುವಾಗ ಮಹೇಶ್ (ಗೋಲ್ಡನ್ ಸ್ಟಾರ್ ಗಣೇಶ್) ಲೈಫ್ ನಲ್ಲಿ ರಮ್ಯಾ,ರಕ್ಷಿತಾ,ರಾಧಿಕಾ ಎಂಟ್ರಿಯಾಗುತ್ತೆ. ಮೂವರು ನಾಯಕಿಯರ ಜೊತೆಗಿನ ತ್ರಿಬಲ್ ರೈಡಿಂಗ್ ಆಹಾ..ಓಹೋ ಅನಿಸುವಂತಿದೆ. ಇಲ್ಲಿ ತುಂಬಾ ತರ್ಲೆಯಾಗಿ ಗಣಿ ನಿಮ್ಮ ಮನಸ್ಸನ್ನ ಗೆಲ್ಲುತ್ತಾರೆ.
ಇದನ್ನೂ ಓದಿ: Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!
ಗಣಿ ಈ ರೀತಿಯ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು.ತ್ರಿಬಲ್ ರೈಡಿಂಗ್ನಲ್ಲೂ ಆಕ್ಷನ್ ಇದೆ,ಫೈಟಿಂಗ್ ಇದೆ,ಪಂಚಿಂಗ್ ಡೈಲಾಗ್ ಇದೆ,ರೋಮ್ಯಾನ್ಸ್,ಭರ್ಜರಿ ಹಾಡು ಕೂಡ ಇದೆ.ಸೋ ಭರ್ಜರಿ ಮೀಲ್ಸ್ ಪಕ್ಕಾ ಕನ್ಫರ್ಮ್. ಗಣೇಶ್ ಜೊತೆ ಮೂವರು ನಾಯಕಿಯರು ಡ್ಯೂಯಟ್ ಹಾಡಿದ್ದಾರೆ.ಆದ್ರೆ ಇಲ್ಲಿ ಇಬ್ಬರು ನಾಯಕಿಯರು ತಮ್ಮ ಸ್ವಾರ್ಥಕ್ಕಾಗಿ ಮಹೇಶ್ (ಗಣೇಶ್) ನ ಬಳಸಿಕೊಳ್ಳುತ್ತಿದ್ದಾರೆ. ಅದು ಹೇಗೆ ಯಾಕೆ ಅನ್ನೋದನ್ನ ನೀವು ಥೀಯೇಟರ್ಗೆ ಬಂದು ನೋಡಿ. ನಾಯಕಿ ಮೇಘ ಶೆಟ್ಟಿ ನಟನೆ ಮನಸ್ಸಿಗೆ ತುಂಬಾ ಹತ್ತಿರವೆನಿಸುತ್ತೆ. ಅದಿತಿ ಪ್ರಭುದೇವ್ ಕೂಡ ಸಿಕ್ಕ ಪಾತ್ರಕ್ಕೆ ಜೀವತುಂಬಿದ್ದಾರೆ.ದ್ವಿತೀಯಾರ್ಧದಲ್ಲಿ ರಚನಾ ಇಂದರ್ ಎಂಟ್ರಿಯಾದ ಮೇಲೆ ಸಿನಿಮಾದಲ್ಲಿ ಮಸ್ತ್ ಟ್ವಿಸ್ಟ್ ಆಂಡ್ ಟರ್ನ್ ಗಳಿವೆ.ಆದ್ರೆ ಸಿನಿಮಾದಲ್ಲಿ ಕೆಲವೊಂದು ಕಡೆ ತುಂಬಾ ತಾಂತ್ರಿಕ ದೋಷವಿರೋದು ಎದ್ದು ಕಾಣಿಸಿದೆ.ಅದನ್ನ ಹೊರತು ಪಡಿಸಿದರೆ ಬೋರು ಅನ್ನೋ ಪದಕ್ಕೆ ಸಿನಿಮಾದಲ್ಲಿ ಜಾಗವಿಲ್ಲ. ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದ್ದು, ಆನಂದ್ ಅವರ ಕ್ಯಾಮರಾ ವರ್ಕ್ ಇದೆ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ- ಮಳೆಗೆ ಹತ್ತಿ ಬೆಳೆ ಸಂಪೂರ್ಣ ಹಾಳು, ವಿಷದ ಬಾಟಲಿ ಹಿಡಿದು ರೈತ ಕಣ್ಣೀರು
ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯ ಚಿತ್ರಕ್ಕಿದೆ. ರಗಡ್ ಅಂತಹ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರೋ ನಿರ್ದೇಶಕ ಮಹೇಶ್ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಮಹೇಶ್ ಗೌಡ ಈ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ. ಕೃಪಾಳು ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ವೈ.ಎಮ್. ರಾಮ್ ಗೋಪಾಲ್ ಅದ್ಧೂರಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.