Home Remedy: ಹಲ್ಲು ನೋವು ಅಷ್ಟೇ ಅಲ್ಲ, ಈ ಕಾಯಿಲೆಗಳನ್ನು ಕೂಡ ನಿವಾರಿಸುವ ಸಾಮರ್ಥ್ಯ ಪಟಕಕ್ಕಿದೆ

Alum Benefits: ನೀವು ಪಟಕದ  ಬಿಳಿ ತುಂಡನ್ನು ಹಲವು ಬಾರಿ ನೋಡಿರಬಹುದು ಮತ್ತು ಹಲವು ಬಾರಿ ಅದನ್ನು ನಿಸ್ಪ್ರಯೋಜಕ ಎಂದೂ ಕೂಡ ಪರಿಗನಿಸಿರಬಹುದು. ಆದರೆ, ಪಾತಕವನ್ನು ಹಲವು ಉದ್ದೇಶಗಳಿಗಾಗಿ ನೀವು ಬಳಸಬಹುದು. ಹಾಗಾದರೆ ಬನ್ನಿ ಪಟಕದ ಉಪಯೋಗಗಳು ಏನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Nov 22, 2022, 09:33 PM IST
  • ಪಟಕದಿಂದ ಹಲವು ಪ್ರಯೋಜನಗಳಿವೆ.
  • ಪಟಕದಲ್ಲಿ ಹಲವು ಔಷಧೀಯ ಗುಣಗಳಿದ್ದು,
  • ಹಲವು ರೋಗಗಳಿಗೆ ಇದು ತಕ್ಷಣದ ಪರಿಹಾರ ನೀಡುತ್ತದೆ.
Home Remedy: ಹಲ್ಲು ನೋವು ಅಷ್ಟೇ ಅಲ್ಲ, ಈ ಕಾಯಿಲೆಗಳನ್ನು ಕೂಡ ನಿವಾರಿಸುವ ಸಾಮರ್ಥ್ಯ ಪಟಕಕ್ಕಿದೆ title=
Alum Home Remedies

Alum Home Remedies: ಮನೆಮದ್ದುಗಳ ಬಗ್ಗೆ ಚರ್ಚೆ ನಡೆಸುವಾಗ ಪಟಕದ ವಿಷಯ ಬರದೆ ಇರಲು ಸಾಧ್ಯವೇ ಇಲ್ಲ. ಪ್ರಾಚೀನ ಕಾಲದಿಂದಲೂ ಪಟಕವನ್ನು ವಿವಿಧ ಕೆಲಸಗಳಿಗಾಗಿ ಮನೆಮದ್ದಾಗಿ ಬಳಸಲಾಗುತ್ತದೆ. ಔಷಧಿಗಳ ಟ್ರೆಂಡ್ ಕಡಿಮೆ ಇದ್ದ ಆ ಕಾಲದಲ್ಲೂ ಪಟಕ ನೋವು ನಿವಾರಕದಂತೆ ಕೆಲಸ ಮಾಡುತ್ತಿತ್ತು. ಪಟಕದಿಂದ ಹಲವು ಪ್ರಯೋಜನಗಳಿವೆ. ಪಟಕದಲ್ಲಿ ಹಲವು ಔಷಧೀಯ ಗುಣಗಳಿದ್ದು, ಹಲವು ರೋಗಗಳಿಗೆ ಇದು ತಕ್ಷಣದ ಪರಿಹಾರ ನೀಡುತ್ತದೆ.

ಹಲ್ಲುನೋವು ನಿವಾರಕ
ಪಟಕ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಒಂದು ನೈಸರ್ಗಿಕ ಮೌತ್ ವಾಶ್ ನಂತೆ ಕೆಲಸ ಮಾಡುತ್ತದೆ. ಪಟಕದ ನೀರಿನಿಂದ ಬಾಯಿಯನ್ನು ಮುಕ್ಕಳಿಸಿದರೆ  ಹಲ್ಲುನೋವು ನಿವಾರಣೆಯಾಗುತ್ತದೆ. ಪಟಕದಿಂದ ತಯಾರಿಸಿದ ಮೌತ್ ವಾಶ್ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಮೂಗಿನ ಗಾಯಗಳಿಗೆ ಮುಲಾಮು
ಪಟಕ ಹಚ್ಚುವುದರಿಂದ ರಕ್ತಸ್ರಾವ ನಿಲ್ಲುತ್ತದೆ. ಗಾಯಗೊಂಡ ಸ್ಥಳವನ್ನು ಪಟಕದ ನೀರಿನಿಂದ ತೊಳೆದರೆ, ರಕ್ತಸ್ರಾವ ನಿಲ್ಲುತ್ತದೆ. ಪಟಕದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಗಾಯದ ಮೇಲೆ ಸೋಂಕಿನ ಅಪಾಯವನ್ನು ಕಡಿಮೆಮಾಡುತ್ತದೆ.

ಕೆಮ್ಮಿಗೆ ಪರಿಹಾರ
ಪಟಕ ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪಟಕದ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಪಟಕದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಕ್ಷಣಾರ್ಧದಲ್ಲಿ ಕೆಮ್ಮು ನಿವಾರಣೆಯಾಗುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ
ಪಟಕ ಅನೇಕ ತ್ವಚೆಯ ಸಮಸ್ಯೆಗಳಿಗೆ ಒಂದು ವರದಾನವಿದ್ದಂತೆ. ಪಟಕ ಮುಖವನ್ನು ನೈಸರ್ಗಿಕವಾಗಿ ಶುಚಿಗೊಳಿಸುವ ಕೆಲಸ ಮಾಡುತ್ತದೆ. ಪಟಕದ ನೀರಿನಿಂದ ಮುಖಕ್ಕೆ ಮಸಾಜ್ ಮಾಡುವ ಮೂಲಕ ಮುಖವನ್ನು ಸ್ವಚ್ಛಗೊಳಿಸಬಹುದು. ಇದರಿಂದ ಮುಖದ ಸುಕ್ಕುಗಳು ಕಡಿಮೆಯಾಗುತ್ತವೆ.

ತಲೆಯಿಂದ ಕೊಳೆಯನ್ನು ತೆಗೆದುಹಾಕುತ್ತದೆ
ಶಾಂಪೂ ಕೂದಲನ್ನು ಸ್ವಚ್ಛಗೊಳಿಸುತ್ತದೆ, ಆದರೆ ಶಾಂಪೂ ನೆತ್ತಿಯಲ್ಲಿ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುವುದಿಲ್ಲ. ಹೀಗಾಗಿ, ತಲೆಯಲ್ಲಿ ಸೂಕ್ಷ್ಮ ಜೀವಿಗಳು ಸೃಷ್ಟಿಯಾಗುತ್ತವೆ. ಪಟಕದ ನೀರಿನಿಂದ ಕೂದಲುಗಳನ್ನೂ ತೊಳೆದರೆ, ಕೂದಲು ಬೇರಿನಿಂದ ಸ್ವಚ್ಛವಾಗುತ್ತದೆ. ಧೂಳು ಮತ್ತು ಕೊಳಕು ಹೊರಬರುತ್ತದೆ. ಇದು ಪರೋಪಜೀವಿಗಳನ್ನು ಕೊಲ್ಲುತ್ತದೆ.

ಇದನ್ನೂ ಓದಿ-Curry Leaves Benefits : ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಕರಿಬೇವಿನ ಎಲೆ : ಹೇಗೆ ಇಲ್ಲಿದೆ ನೋಡಿ

ಮೂತ್ರದ ಸೋಂಕು ನಿವಾರಣೆ
ಪಟಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದೆ. ಮೂತ್ರದ ಸೋಂಕನ್ನು ತೊಡೆದುಹಾಕಲು, ಪಟಕದ ನೀರಿನಿಂದ ಗುಪ್ತಾಂಗಗಳ ಪ್ರದೇಶವನ್ನು ತೊಳೆಯಬಹುದು.

ಇದನ್ನೂ ಓದಿ-Health Tips: ಪ್ರತಿದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ..!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

Trending News