/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಪಿ. ಚಿದಂಬರಂ ನಂ.1 ಆರೋಪಿ: ಚಾರ್ಜ್‌ಶೀಟ್‌ ದಾಖಲು

ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳನ್ನು ಹೆಸರಿಸಿರುವ ಇಡಿ ಚಿದಂಬರಂ ಅವರನ್ನು ನಂಬರ್ 1 ಆರೋಪಿ ಎಂದಿದೆ.

Last Updated : Oct 26, 2018, 09:23 AM IST
ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಪಿ. ಚಿದಂಬರಂ ನಂ.1 ಆರೋಪಿ: ಚಾರ್ಜ್‌ಶೀಟ್‌ ದಾಖಲು title=

ನವದೆಹಲಿ: ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಚಾರ್ಜ್ ಶೀಟ್ ದಾಖಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಪಟ್ಟಿ  ಸಲ್ಲಿಸಿರುವ ಇಡಿ ಚಿದಂಬರಂ ಆರೋಪಿ ನಂಬರ್ ಒನ್ ಎಂದು ಉಲ್ಲೇಖಿಸಿದೆ. ಅವರ ಜತೆಗೆ ಇತರ ಎಂಟು ಮಂದಿ ಪ್ರಮುಖರು ಮತ್ತು ಸಂಸ್ಥೆಗಳ ಹೆಸರುಗಳನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಚಿದಂಬರಂನ ಅವರ ಎಫ್ಐಪಿಬಿ ಅಕ್ರಮ ಅನುಮೋದನೆ ಕುರಿತಂತೆ ಇದರಲ್ಲಿ ವಿವರಗಳಿದೆ. 2006 ರ ಮಾರ್ಚ್ ನಲ್ಲಿ  ಎಫ್ಐಪಿಬಿ ಅನುಮೋದನೆಯನ್ನು ನೀಡಿದ್ದಾರೆ ಮಾರಿಶಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವಿಸಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ಅಂಗಸಂಸ್ಥೆ ಮ್ಯಾಕ್ಸಿಸ್ ಗೆ ಅನುಮೋದನೆ ದೊರಕಿದೆ ಎಂದು ಇಡಿ ಆರೋಪಿಸಿದೆ. ವಿಶೇಷ ಕೋರ್ಟ್‌ ನ್ಯಾಯಾಧೀಶ ಓ.ಪಿ.ಸೈನಿ ಅವರಿಗೆ ಈ ಆರೋಪ ಪಟ್ಟಿ ಸಲ್ಲಿಸಲಾಗಿದೆ. ನ.26ರಂದು ಅದರ ಪರಿಶೀಲನೆ ನಡೆಯಲಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಎರಡು ಆರೋಪಪಟ್ಟಿ ಸಲ್ಲಿಕೆ ಆಗಿದ್ದರೂ, ಚಿದಂಬರಂ ಹೆಸರು ಉಲ್ಲೇಖವಾಗಿರಲಿಲ್ಲ. ಪುತ್ರ ಕಾರ್ತಿ ಚಿದಂಬರಂ, ಮಾಜಿ ಸಚಿವ ದಯಾನಿಧಿ ಮಾರನ್ ಅವರ ಹೆಸರು ಇತ್ತು. ಇದೀಗ ಪಿ. ಚಿದಂಬರಂ ಅವರನ್ನೇ ಮೊದಲ ಆರೋಪಿ ಎಂದು ಕೇಂದ್ರ ತನಿಖಾ ಸಂಸ್ಥೆ ಬೊಟ್ಟು ಮಾಡಿದ್ದು, ಚಿದಂಬರಂಗೆ ಕಾನೂನು ಸಂಕಷ್ಟ ಎದುರಾಗಿದೆ. ಒಂದು ವೇಳೆ ಅವರ ವಿರುದ್ಧದ ಆರೋಪ ಸಾಬೀತಾದರೆ ದಂಡ ಸಹಿತ ಏಳು ವರ್ಷಗಳ ಜೈಲು ಶಿಕ್ಷೆಯಾಗಲಿದೆ.