Monday Remedies: ಒತ್ತಡ ನಿವಾರಣೆ, ಇಷ್ಟಾರ್ಥ ಸಿದ್ದಿಗಾಗಿ ಸೋಮವಾರ ಕ್ರಮಗಳನ್ನು ಕೈಗೊಳ್ಳಿ

Monday Remedies: ಸೋಮವಾರ ದೇವಾಧಿದೇವ ಮಹಾದೇವನ ಆರಾಧನೆಯ ದಿನ. ಈ ದಿನದಂದು ಶಿವಲಿಂಗಕ್ಕೆ ಸರಳ ನೀರಿನಿಂದ ಅಭಿಷೇಕ ಮಾಡುವುದು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗಿದೆ. ಶಿವನ ಕೃಪೆಯಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Written by - Yashaswini V | Last Updated : Nov 7, 2022, 07:10 AM IST
  • ಹಿಂದೂ ಧರ್ಮದಲ್ಲಿ ಸೋಮವಾರವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ.
  • ಸೋಮವಾರದಂದು ಭೋಲೆನಾಥನ ಆರಾಧನೆಗೆ ವಿಶೇಷ ಮಹತ್ವವಿದೆ.
  • ಸೋಮವಾರದಂದು ಭಕ್ತಿಯಿಂದ ಭೋಲೆನಾಥನನ್ನು ಪೂಜಿಸಿ ಆರಾಧಿಸುವುದರಿಂದ, ಉಪವಾಸ ಮಾಡುವುದರಿಂದ ಶಿವನ ಆಶೀರ್ವಾದ ಪಡೆಯಬಹುದು ಎಂದು ಹೇಳಲಾಗುತ್ತದೆ.
Monday Remedies: ಒತ್ತಡ ನಿವಾರಣೆ, ಇಷ್ಟಾರ್ಥ ಸಿದ್ದಿಗಾಗಿ ಸೋಮವಾರ ಕ್ರಮಗಳನ್ನು ಕೈಗೊಳ್ಳಿ  title=
Monday Remedies

Monday Remedies: ಸೋಮವಾರ ಭಗವಾನ್ ಶಿವನನ್ನು ಮೆಚ್ಚಿಸಲು ಪ್ರಶಸ್ತವಾದ ದಿನ.  ಹಿಂದೂ ಧರ್ಮದಲ್ಲಿ ಸೋಮವಾರವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಸೋಮವಾರದಂದು ಭೋಲೆನಾಥನ ಆರಾಧನೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೋಮವಾರದಂದು  ಭಕ್ತಿಯಿಂದ ಭೋಲೆನಾಥನನ್ನು ಪೂಜಿಸಿ ಆರಾಧಿಸುವುದರಿಂದ, ಉಪವಾಸ ಮಾಡುವುದರಿಂದ ಶಿವನ ಆಶೀರ್ವಾದ ಪಡೆಯಬಹುದು ಎಂದು ಹೇಳಲಾಗುತ್ತದೆ.  ಶಿವನ ಆಶೀರ್ವಾದದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಲಿದೆ ಎಂಬ ನಂಬಿಕೆ ಇದೆ. ಹಾಗಾಗಿ, ಸೋಮವಾರದಂದು ಶಿವನ ಕೃಪೆಗೆ ಪಾತ್ರರಾಗಲು ಯಾವೆಲ್ಲಾ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಯೋಣ...

ಸೋಮವಾರ ಈ ಕೆಲಸಗಳನ್ನು ಮಾಡುವುದರಿಂದ ಶಿವನ ಆಶೀರ್ವಾದದ ಜೊತೆಗೆ ಸುಖ-ಸಂತೋಷ ಪ್ರಾಪ್ತಿ:-
* ಈ ದಿನ, ಭೋಲೆ ಬಾಬಾನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪಾಪದಿಂದ ಮುಕ್ತಿ ಸಿಗುತ್ತದೆ.

* ಸೋಮವಾರದಂದು ಶಿವನಿಗೆ ಶ್ರೀಗಂಧ, ಹಾಲು, ಗಂಗಾಜಲ, ಅಕ್ಷತ, ಬೇಲ್ಪತ್ರ, ಧಾತುರ ಅಥವಾ ಆಕೃತಿಯ ಹೂವುಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸಿ. ಇದರಿಂದ ಭೋಲೆನಾಥ ಭಕ್ತರ ಕೂಗಿಗೆ ಬೇಗ ಕಿವಿಗೊಡುತ್ತಾನೆ.

ಇದನ್ನೂ ಓದಿ- Shani Margi 2022: ಶನಿಯ ನೇರ ನಡೆಯಿಂದ ಈ ರಾಶಿಯವರಿಗೆ ಸಂಕಷ್ಟ

* ಸೋಮವಾರ ಬಿಳಿ ಬಟ್ಟೆಗಳನ್ನು ಧರಿಸಬೇಕು. ಇದರೊಂದಿಗೆ ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಬೇಕು. 

* ಬಡತನವನ್ನು ತೊಡೆದುಹಾಕಲು, ಯಾವುದೇ ಶಿವ ದೇವಾಲಯದಲ್ಲಿ 'ದರಿದ್ರದಹನ್ ಸ್ತೋತ್ರ' ಪಠಿಸಿ. ಇದರಿಂದ ಬಡತನ ದೂರವಾಗುತ್ತದೆ. 

* ಸೋಮವಾರದಂದು ಬಡವರಿಗೆ ಆಹಾರ ನೀಡಿ. ಇದರಿಂದಾಗಿ ಅಂತಹ ಮನೆಯಲ್ಲಿ ಮಾತೆ  ಅನ್ನಪೂರ್ಣ ಸದಾ ನೆಲೆಸುತ್ತಾಳೆ. 

* ನಿಮಗೆ ಯಾವುದೇ ವಿಶೇಷ ಆಸೆ ಇದ್ದರೆ, ಸೋಮವಾರ 21 ಬೆಲ್ಪತ್ರೆಯಲ್ಲಿ  ಓಂ ನಮಃ ಶಿವಾಯ ಎಂದು ಬರೆದು ಶಿವಲಿಂಗದ ಮೇಲೆ ಅರ್ಪಿಸಿ. 

* ಚಂದ್ರ ದೋಷ ಇರುವವರು ಸೋಮವಾರದ ದಿನ 'ಚಂದ್ರಶೇಖರ್ ಸ್ತೋತ್ರ' ಪಠಿಸಿ, ಇದು ಚಂದ್ರನನ್ನು ಬಲಪಡಿಸುತ್ತದೆ.

* ನಂದಿಯು ಶಿವನಿಗೆ ಬಹಳ ಪ್ರಿಯ. ಇಂತಹ ಸಂದರ್ಭದಲ್ಲಿ ನಂದಿ ಗೂಳಿಗೆ ಹುಲ್ಲು ತಿನ್ನಿಸುವುದು ಶುಭ. ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 

ಇದನ್ನೂ ಓದಿ- Guru Mahadasha: 16 ವರ್ಷಗಳವರೆಗೆ ಗುರು ಮಹಾದಶಾ- ಯಾರಿಗೆಲ್ಲಾ ಹಣ, ಗೌರವ, ಸಂತೋಷ ಕರುಣಿಸಲಿದ್ದಾನೆ ಗುರು!

* ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ, ಅದು ನಿಮಗೆ ಭೋಲೆನಾಥನ ವಿಶೇಷ ಆಶೀರ್ವಾದವನ್ನು ನೀಡುತ್ತದೆ.

* ಸೂರ್ಯಾಸ್ತದ ನಂತರ ಶಿವನ ದೇವಸ್ಥಾನದಲ್ಲಿ ದೀಪವನ್ನು ದಾನ ಮಾಡಿ ಮತ್ತು ಅಲ್ಲಿ 108 ಬಾರಿ ಓಂ ನಮಃ ಶಿವಾಯ ಪಠಿಸಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News