ಕೊಪ್ಪಳ : ಸಿದ್ದರಾಮಯ್ಯ ಪರದೇಶಿ ಗಿರಾಕಿ, ಚಾಮುಂಡಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬದಾಮಿಗೆ ಬಂದಿದ್ದೀರಿ. ಈಗ ಬದಾಮಿಯಲ್ಲೂ ನೆಲೆ ಇಲ್ಲದ ನೀನು ಕ್ಷೇತ್ರ ಹುಡುಕುತ್ತಿದ್ದೀಯಾ ಎಂದು ಸಚಿವ ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ಒಬ್ಬ ಸಿಎಂ ಆಗಿದ್ದ ವ್ಯಕ್ತಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಹೀನಾಯವಾಗಿ ಸೋಲಿಸಿದರು. ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದಾರೆ. ನಿಮ್ಮ ಕ್ಷೇತ್ರ ಯಾವುದು ಎಂದು ಮೊದಲು ನೀನು ಹೇಳು, ಆ ಮೇಲೆ ನನ್ನ ಬಗ್ಗೆ ಮಾತನಾಡು. ನಾನೆಲ್ಲೂ ಮೊಳಕಾಲ್ಮೂರು ಕ್ಷೇತ್ರ ಬಿಡುತ್ತೇನೆ ಎಂದು ಹೇಳಿಲ್ಲ. ನೀನಾಗಲೇ ಬದಾಮಿ ಬಿಡುವುದಾಗಿ ಹೇಳ್ತಿದ್ದಿ. ಬಿಜೆಪಿಗೆ ಅನೇಕ ಮುಖಂಡರು ಬರುತ್ತುದ್ದಾರೆ. ಶಶಿಕುಮಾರ್, ಮುದ್ದಹನುಮೇಗೌಡ ಬಂದಿದ್ದಾರೆ. ಇನ್ನೂ ಅನೇಕ ಘಟಾನುಘಟಿಗಳು ಬರುತ್ತಾರೆ. ಕಾಂಗ್ರೆಸ್ ನಿಂದ ದೇಶಕ್ಕೆ, ರಾಜ್ಯಕ್ಕೆ ಭವಿಷ್ಯವಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲ ಬೈಟೂ ಇದೆ. 14 ಜಿಲ್ಲೆ ಸಿದ್ದರಾಮಯ್ಯ, 14 ಜಿಲ್ಲೆ ಡಿಕೆಶಿ. ಈ ಬೈಟು ಗಿರಾಕಿಗಳು ಮುಂದೆ ಬೈ ಫೋರ್ ಆಗುತ್ತವೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಸಿಎಂ ಖುರ್ಚಿ ಮ್ಯೂಸಿಕಲ್ ಚೇರ್ ಅಲ್ಲ. 2023 ರ ಚುನಾವಣೆಯಲ್ಲಿಯೂ ಪೂರ್ಣ ಪ್ರಮಾಣ ನಮ್ಮದೆ ಸರ್ಕಾರ ಬರುತ್ತದೆ. 150 ಸ್ಥಾನಕ್ಕೆ ಜನರು ಆಶೀರ್ವಾದ ಮಾಡುತ್ತಾರೆ. ನನ್ನನ್ನು ಆರ್ ಎಸ್ ಎಸ್ ಗಿರಾಕಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ನೀನು ಯಾವ ಗಿರಾಕಿ. ನಿನ್ನನ್ನು ಯಾವ ಗಿರಾಕಿ ಎನ್ನಬೇಕು? ಅವರ ತರಹ ನಾಲ್ಕು ನಾಲ್ಕು ಕಡೆ ಹೋಗಿಲ್ಲ. ಕಾಂಗ್ರೆಸ್ ಬಿಟ್ಟು ಅನೇಕರು ಹೋಗ್ತಿರೋದ್ರಿಂದ ವಾಪಾಸ್ ಬರ್ರಿ ಅಂತ ಅವರ ಪಕ್ಷ ಬಿಟ್ಟು ಹೋದವರನ್ನು ಕರೆಯುತ್ತಿದ್ದಾರೆ.ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧೆ ಮಾಡುವ ಕುರಿತಂತೆ ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ಜನಾರ್ಧನರೆಡ್ಡಿಯವರೊಂದಿಗೆ ನಾನು ಗೌಪ್ಯ ಸಭೆ ಮಾಡಿಲ್ಲ. ಅವರು ಏನು ಹೇಳಿದ್ದಾರೆ ಎಂದು ನಾನು ಪಕ್ಷದ ಮುಖಂಡರಿಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : "ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು"?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.