Clove Water: ಬೆಳಗ್ಗೆ ನೀರಿನಲ್ಲಿ ಈ ಸಾಂಬಾರ ಪದಾರ್ಥ ಕುದಿಸಿ ಸೇವಿಸಿ, ಮಧುಮೇಹ ನಿಯಂತ್ರಣದ ಜೊತೆಗೆ ಹಲವು ಲಾಭಗಳು ಸಿಗುತ್ತವೆ

Cloves Benefits: ಲವಂಗ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಒಂದು ಸಂಬಾರ ಪದಾರ್ಥವಾಗಿದೆ. ಮತ್ತೊಂದೆಡೆ, ನೀವು ಪ್ರತಿದಿನ ಬೆಳಗ್ಗೆ ಲವಂಗವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.  

Written by - Nitin Tabib | Last Updated : Nov 2, 2022, 05:51 PM IST
  • ಲವಂಗದಲ್ಲಿ ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ.
  • ಮತ್ತೊಂದೆಡೆ, ನೀವು ಬೆಳಗ್ಗೆ ಲವಂಗವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಿದರೆ,
  • ರಕ್ತದಲ್ಲಿನ ಸಕ್ಕರೆ ಸಹ ನಿಯಂತ್ರಣದಲ್ಲಿರುತ್ತದೆ.
Clove Water: ಬೆಳಗ್ಗೆ ನೀರಿನಲ್ಲಿ ಈ ಸಾಂಬಾರ ಪದಾರ್ಥ ಕುದಿಸಿ ಸೇವಿಸಿ, ಮಧುಮೇಹ ನಿಯಂತ್ರಣದ ಜೊತೆಗೆ ಹಲವು ಲಾಭಗಳು ಸಿಗುತ್ತವೆ title=
Clove Water Benefits

Bolided Cloves Water Benefits: ಲವಂಗ ನಮ್ಮ ಆಹಾರ ಪದಾರ್ಥಗಳ ಸ್ವಾದ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಆಹಾರದಲ್ಲಿ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಲವಂಗ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಲವಂಗದಲ್ಲಿ ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ. ಮತ್ತೊಂದೆಡೆ, ನೀವು ಬೆಳಗ್ಗೆ ಲವಂಗವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಸಹ ನಿಯಂತ್ರಣದಲ್ಲಿರುತ್ತದೆ. ಹೀಗಿರುವಾಗ ಪ್ರತಿದಿನ ಬೆಳಗ್ಗೆ ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳು
ಉರಿಯೂತ ನಿವಾರಣೆ

ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಇದು ಉರಿಯೂತದ ವಿರುದ್ಧ ಹೋರಾಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ, ಜೊತೆಗೆ ಉತ್ಕರ್ಷಣ ನಿರೋಧಕಗಳು ಮತ್ತು ಹಾನಿಕಾರಕ ರಾಡಿಕಲ್ಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಕೀಲುಗಳು, ಸ್ನಾಯುಗಳು, ಕರುಳು ಮತ್ತು ಹೊಟ್ಟೆ ಇತ್ಯಾದಿಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಕ್ಕರೆ ನಿಯಂತ್ರಣ
ಲವಂಗದ ನೀರನ್ನು ಕುಡಿಯುವುದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಅದು ಸಹಾಯ ಮಾಡುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಇದು ತುಂಬಾ ಸಹಾಯಕವಾಗಿದೆ. ಆದ್ದರಿಂದ, ನೀವು ಲವಂಗದ ನೀರನ್ನು ಕುದಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಕುಡಿಯಬಹುದು, ಹೀಗೆ ಮಾಡುವುದರಿಂದ ಮಧುಮೇಹ ರೋಗಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ
ಬೆಳಗ್ಗೆ ಲವಂಗ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿದರೆ, ಗ್ಯಾಸ್ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ದೇಹ ನಿರ್ವಿಷಗೊಳ್ಳುತ್ತದೆ
ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿ ಸಂಗ್ರಹಗೊಂಡಿರುವ ಕೊಳೆ, ಹಾನಿಕಾರಕ ಮತ್ತು ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಿಮ್ಮ ದೇಹದ ಡಿಟಾಕ್ಸ್‌ಗೆ ಕಾರಣವಾಗುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
 

Trending News