ಸೆಪ್ಟೆಂಬರ್ ಮೊದಲ ವಾರದಲ್ಲೇ ಎರಡು ಬೃಹತ್ ಗ್ರಹಗಳ ರಾಶಿ ಪರಿವರ್ತನೆ, ಬದಲಾಗಲಿದೆ ಈ ನಾಲ್ಕು ರಾಶಿಗಳ ಭಾಗ್ಯ

ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 6 ರಂದು  ಮಂಗಳ ಗ್ರಹವು  ಕನ್ಯಾರಾಶಿ ಪ್ರವೇಶಿಸುತ್ತದೆ.  22 ಸೆಪ್ಟೆಂಬರ್ ವರೆಗೆ ಮಂಗಳ ಕನ್ಯಾ ರಾಶಿಯಲ್ಲಿಯೇ ಇರಲಿದೆ.

Written by - Ranjitha R K | Last Updated : Sep 2, 2021, 06:02 PM IST
  • ಸೆಪ್ಟೆಂಬರ್ ನಲ್ಲಿ ಗ್ರಹಗಳ ಸಾಮಾನ್ಯ ರಾಶಿಚಕ್ರ ಬದಲಾವಣೆ
  • ಈ ತಿಂಗಳು 2 ದೊಡ್ಡ ಗ್ರಹಗಳ ರಾಶಿ ಪರಿವರ್ತನೆ
  • ನಾಲ್ಕು ರಾಶಿಯ ಜನರಿಗೆ ಸಿಗಲಿದೆ ಲಾಭ
ಸೆಪ್ಟೆಂಬರ್ ಮೊದಲ ವಾರದಲ್ಲೇ ಎರಡು ಬೃಹತ್ ಗ್ರಹಗಳ ರಾಶಿ ಪರಿವರ್ತನೆ, ಬದಲಾಗಲಿದೆ ಈ ನಾಲ್ಕು ರಾಶಿಗಳ ಭಾಗ್ಯ  title=
ಸೆಪ್ಟೆಂಬರ್ ನಲ್ಲಿ ಗ್ರಹಗಳ ಸಾಮಾನ್ಯ ರಾಶಿಚಕ್ರ ಬದಲಾವಣೆ (file photo)

ನವದೆಹಲಿ : ಸೆಪ್ಟೆಂಬರ್ ತಿಂಗಳಲ್ಲಿ, ಗ್ರಹ ನಕ್ಷತ್ರಗಳ ಸ್ಥಾನದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ. ಜ್ಯೋತಿಷ್ಯದ (Astrology) ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ, ಮಂಗಳ (Mars) ಮತ್ತು ಶುಕ್ರದಂತಹ (Venus) ಎರಡು ದೊಡ್ಡ ಗ್ರಹಗಳು ತಮ್ಮ ರಾಶಿ ಚಕ್ರವನ್ನು (Planetary Position) ಬದಲಾಯಿಸಲಿವೆ.  

ಮಂಗಳ ಮತ್ತು ಶುಕ್ರಗ್ರಹಗಳ ಸ್ಥಾನ ಪಲ್ಲಟ : 
ಜ್ಯೋತಿಷ್ಯದ (Astrology) ಪ್ರಕಾರ, ಸೆಪ್ಟೆಂಬರ್ 6 ರಂದು  ಮಂಗಳ ಗ್ರಹವು  ಕನ್ಯಾರಾಶಿ ಪ್ರವೇಶಿಸುತ್ತದೆ.  22 ಸೆಪ್ಟೆಂಬರ್ ವರೆಗೆ ಮಂಗಳ ಕನ್ಯಾ ರಾಶಿಯಲ್ಲಿಯೇ ಇರಲಿದೆ.  ಮಂಗಳ ಗ್ರಹದ (Mars) ರಾಶಿ ಪರಿವರ್ತನೆಯಿಂದ ಮೇಷ ಮತ್ತು ಕನ್ಯಾರಾಶಿ ರಾಶಿಯ ಜನರ ಮೇಲೆ ಹೆಚ್ಚಿನ  ಪರಿಣಾಮ ಬೀರಲಿದೆ. ಅದೇ ರೀತಿ ಶುಕ್ರ ಗ್ರಹ (Venus), ತುಲಾ ರಾಶಿಗೆ ಪ್ರವೇಶಿಸಿ ಅಕ್ಟೋಬರ್ 2 ರವರೆಗೆ ಅಲ್ಲಿಯೇ ಇರಲಿದ್ದಾನೆ. ಗ್ರಹಗಳ ಈ ರಾಶಿ ಪರಿವರ್ತನೆ, ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. 

ಇದನ್ನೂ ಓದಿ : Shree Lakshmi Chalisa: ಈ ದಿನ ಲಕ್ಷ್ಮೀ ದೇವಿ ಮಂತ್ರ ಜಪಿಸುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಸಿಗುತ್ತೆ ಮುಕ್ತಿ

ಮೇಷ: ಜ್ಯೋತಿಷ್ಯದ ಪ್ರಕಾರ ಮಂಗಳ ಮತ್ತು ಶುಕ್ರ ಗ್ರಹಗಳ ರಾಶಿ ಪರಿವರ್ತನೆ ಮೇಷ ರಾಶಿಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ, ಮೇಷ ರಾಶಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಹಣದ ಹೂಡಿಕೆಗೆ (Investment) ಉತ್ತಮ ಅವಕಾಶವೂ ಇದೆ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಲಾಭ ಗಳಿಸುವ ಸಾಧ್ಯತೆಗಳೂ ಇವೆ.

ವೃಷಭ ರಾಶಿ: ಈ ರಾಶಿಯ ಜನರು ಫಲಪ್ರದ ಫಲಿತಾಂಶಗಳನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮವು ಯಶಸ್ವಿಯಾಗುತ್ತದೆ, ಕೆಲಸವನ್ನು ಪ್ರಶಂಸಿಸಲಾಗುತ್ತದೆ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗಸ್ಥರಿಗೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧಗಳು ಬಲವಾಗಿರುತ್ತದೆ. ಪ್ರಗತಿಯ ಸಾಧ್ಯತೆ ಇರುತ್ತದೆ. ಆರೋಗ್ಯ (Health) ಸ್ಥಿತಿ ಕೂಡಾ ಉತ್ತಮವಾಗಿರಲಿದೆ. 

ವೃಶ್ಚಿಕ ರಾಶಿ:  ವೃಶ್ಚಿಕ ರಾಶಿಯವರಿಗೂ ಈ ಅವಧಿ ಮಂಗಳಕರವಾಗಿರುತ್ತದೆ. ಹಣಕಾಸಿನ ತೊಂದರೆಗಳನ್ನು ನಿವಾರಣೆಯಾಗಲಿದೆ.  ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ. ಆದರೆ ಆರೋಗ್ಯದ ಬಗ್ಗೆ ವಿಶೇಷ ಗಮನ ಬೇಕು.

ಇದನ್ನೂ ಓದಿ : September 2021: ನೀವೂ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಸೆಪ್ಟೆಂಬರ್‌ನಲ್ಲಿ ಈ 3 ದಿನಗಳು 'ಅದೃಷ್ಟದ ದಿನ' ಅಂತೆ!

ಧನು: ಜ್ಯೋತಿಷ್ಯದ ಪ್ರಕಾರ, ಧನು ರಾಶಿಯ ಜನರ ಮೇಲೆ ಕೆಲಸದ ಹೊರೆಯ ಜೊತೆಗೆ ಅನೇಕ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಶ್ರಮದ ಫಲ ಸಿಗಲಿದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News