ಸಾಸಿವೆ ಎಣ್ಣೆಯಲ್ಲಿ ಈ ವಸ್ತುಗಳನ್ನು ಸೇರಿಸಿ ಹಚ್ಚಿದರೆ ನ್ಯಾಚುರಲ್ ಆಗಿ ಕಪ್ಪಾಗಲಿದೆ ತಲೆ ಕೂದಲು

ಪ್ರಸ್ತುತ ಯುಗದಲ್ಲಿ, ಯುವಜನರು ಸಹ ಬಿಳಿ ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಮುಜುಗರವನ್ನು ಎದುರಿಸಬೇಕಾಗುತ್ತದೆ. ಆದರೆ ಸಿಂಪಲ್ ಮನೆಮದ್ದಿನ ಮೂಲಕ,  ನೈಸರ್ಗಿಕವಾಗಿ ಕೂದಲಿನ ಬಣ್ಣವನ್ನು  ಕಪ್ಪಾಗಿಸಬಹುದು. 

Written by - Ranjitha R K | Last Updated : Mar 2, 2022, 11:10 AM IST
  • ಬಿಳಿ ಕೂದಲಿನ ಬಗ್ಗೆ ಚಿಂತಿಸಬೇಡಿ
  • ಮನೆಯಲ್ಲಿಯೇ ಕೂದಲನ್ನು ಕಪ್ಪಾಗಿಸಬಹುದು
  • ನೈಸರ್ಗಿಕ ಬಣ್ಣವನ್ನು ಹೇಗೆ ತಯಾರಿಸುವುದು?
ಸಾಸಿವೆ ಎಣ್ಣೆಯಲ್ಲಿ ಈ ವಸ್ತುಗಳನ್ನು ಸೇರಿಸಿ ಹಚ್ಚಿದರೆ ನ್ಯಾಚುರಲ್ ಆಗಿ ಕಪ್ಪಾಗಲಿದೆ ತಲೆ ಕೂದಲು  title=
ಮನೆಯಲ್ಲಿಯೇ ಕೂದಲನ್ನು ಕಪ್ಪಾಗಿಸಬಹುದು (file photo)

ನವದೆಹಲಿ : ಚಿಕ್ಕ ವಯಸ್ಸಿನಲ್ಲೇ ತಲೆ ಕೂದಲು ಬೆಳ್ಳಗಾಗುವುದು ಇತ್ತೀಚಿನ ದಿನಗಳಲ್ಲಿ ಬಹುತೇಕರು ಎದುರಿಸುವ ಸಾಮಾನ್ಯ ಸಮಸ್ಯೆ. ಬೆಳ್ಳಗಾಗುವ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕಲರ್ ಬಳಸುತ್ತಾರೆ. ಆದರೆ ಇದು ರಾಸಾಯನಿಕಗಳನ್ನು ಒಳಗೊಂಡಿದ್ದು, ಅಡ್ಡಪರಿಣಾಮವನ್ನು ಬೀರುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೂದಲು ಕಪ್ಪಾಗಿಸಲು ಸರಳ ವಿಧಾನವಿದೆ. ಸಾಸಿವೆ ಎಣ್ಣೆಗೆ (Mustard Oil) ನೆಲ್ಲಿಕಾಯಿ ಪುಡಿಯನ್ನು (Gooseberry) ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗಲಿದೆ. ಇದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲ, ಕೂದಲಿಗೆ ಇನ್ನು ಅನೇಕ ಪ್ರಯೋಜನಗಳನ್ನು ನೀಡಲಿದೆ. 

ಕೂದಲು ಕಪ್ಪಾಗಿಸಲು ನೈಸರ್ಗಿಕ ಎಣ್ಣೆಯನ್ನು ಹೇಗೆ ತಯಾರಿಸುವುದು?
ಇದಕ್ಕಾಗಿ ಒಂದು ಕಬ್ಬಿಣದ ಕಡಾಯಿಯನ್ನು ತೆಗೆದುಕೊಳ್ಳಿ.  ಕಬ್ಬಿಣದ ಕಡಾಯಿ ಉತ್ತಮ  ಪರಿಣಾಮವನ್ನು ಬೀರುತ್ತದೆ ಆದ ಕಾರಣ ಈ ಎಣ್ಣೆಯನ್ನು (Mustard Oil)  ತಯಾರಿಸಲು ಯಾವಾಗಲೂ ಕಬ್ಬಿಣದ ಕಡಾಯಿಯನ್ನು ಬಳಸುವುದು ಉತ್ತಮ ಆಯ್ಕೆ. ಕಬ್ಬಿಣದ ಕಡಾಯಿ ಇಲ್ಲದೆ ಹೋದರೆ ಬೇರೆ ಕಡಾಯಿ ಕೂಡಾ ಬಳಸಬಹುದು. 

ಇದನ್ನೂ ಓದಿ : Diabetes: ಮಧುಮೇಹಿಗಳಿಗೆ ಆಹಾರ ಸೇವಿಸುವ ಸರಿಯಾದ ವಿಧಾನ ಇದು

-  ಸುಮಾರು 200 ಮಿಲಿ ಸಾಸಿವೆ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ.
- ಈ ಎಣ್ಣೆಯನ್ನು ಗ್ಯಾಸ್ ಮೇಲಿಟ್ಟು, ಮಧ್ಯಮ ಉರಿಯಲ್ಲಿ ಕುಡಿಸಿ. ಈಗ ಈ ಎಣ್ಣೆಗೆ 2 ರಿಂದ 3 ಚಮಚ ಮೆಹಂದಿ ಪುಡಿಯನ್ನು ಸೇರಿಸಿ.
-ಮೆಹಂದಿಯನ್ನು ಎಣ್ಣೆಯೊಂದಿಗೆ ಚೆನ್ನಾಗಿ ತಿರುಗಿಸಿ ಬೆರೆಸಿಕೊಳ್ಳಿ. ಹೀಗೆ ಬೆರೆಸುವಾಗ ಗಂಟುಗಳಾಗಲು ಬಿಡಬೇಡಿ. ನೆನಪಿರಲಿ ಈ ವಿಧಾನವನ್ನು ಮಾಡುವಾಗ ಬೆಂಕಿ ಉರಿ ಕಡಿಮೆ ಇರಲಿ. ಮೆಹಂದಿ ಎಣ್ಣೆಯೊಂದಿಗೆ (mehendi benefits on hair) ಚೆನ್ನಾಗಿ ಬೆರೆತ ನಂತರ 2 ರಿಂದ 3 ನಿಮಿಷ ಬೇಯಿಸಲು ಬಿಡಿ.
-ಈಗ 1 tbsp ಆಮ್ಲಾ ಪುಡಿಯನ್ನು ಸೇರಿಸಿ (Amla powder). ಇದು ಕೂದಲಿನ ಹೊಳಪನ್ನು ಕಾಪಾಡಿಕೊಳ್ಳಲು, ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ಬಿಳಿ ಕೂದಲನ್ನು ಹೋಗಲಾಡಿಸಲು ಸಹಕಾರಿಯಾಗಿದೆ (Amla benefits on hair).
-ಈಗ ಅದಕ್ಕೆ ಒಂದೂವರೆಯಿಂದ ಎರಡು ಚಮಚ ಮೆಂತ್ಯ ಪುಡಿಯನ್ನು ಸೇರಿಸಿ. ಮೆಂತೆ ಬೇರುಗಳಿಂದ ಕೂದಲನ್ನು ಕಪ್ಪಾಗಿಸಲು ಪ್ರಯೋಜನಕಾರಿಯಾಗಿದೆ.
-ಈಗ ಈ ಮಿಶ್ರಣ ಕಂದು ಬಣ್ಣ ಬರುವವರೆಗೆ ಬೇಯಿಸಿ. ಈ ಸಂಪೂರ್ಣ ಪ್ರಕ್ರಿಯೆಯು 7 ರಿಂದ 8 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿ ಎಣ್ಣೆಯನ್ನು ಸುಡಬಾರದು.  ಅದಕ್ಕಾಗಿ ಈ ಮಿಶ್ರಣವನ್ನು ನಿರಂತರವಾಗಿ ತಿರುಗಿಸುತ್ತಾ ಇರಬೇಕು.  ಮಿಶ್ರಣ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿದಾಗ, ಗ್ಯಾಸ್ ಆಫ್ ಮಾಡಿ. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. 

ಇದನ್ನೂ ಓದಿ : Heart Disease: ನಿಮ್ಮ ಹೃದಯದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಈ ಸಲಹೆ ಪಾಲಿಸಿ

ತಣ್ಣಾಗಾದ ಮಿಶ್ರಣವನ್ನು 12 ರಿಂದ 24 ಗಂಟೆಗಳ ಕಾಲ ಮುಚ್ಚಿಡಿ. ಹೀಗೆ ಮಾಡುವುದರಿಂದ ದ್ರಾವಣ ದಪ್ಪವಾಗುತ್ತದೆ. ಹಾಗೆಯೇ ಮೆಂತ್ಯ, ಆಮ್ಲಾ ಮತ್ತು ಮೆಹಂದಿ ಬಣ್ಣವನ್ನು ಚೆನ್ನಾಗಿ  ಬಿಡುತ್ತದೆ. 

12 ರಿಂದ 24 ಗಂಟೆಗಳ ನಂತರ ಈ ಎಣ್ಣೆಯನ್ನು ಫಿಲ್ಟರ್ ಮಾಡಿ. ಹೀಗೆ ಮಾಡಿದ ಎಣ್ಣೆಯನ್ನು  ಕೆಲವು ತಿಂಗಳುಗಳವರೆಗೆ ಸಂಗ್ರಹಿಸಬಹುದು (mustard oil benefits for hair).

ಶಾಂಪೂ ಮಾಡುವ 3 ಗಂಟೆಗಳ ಮೊದಲು ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಕೂದಲಿಗೆ ಈ ಎಣ್ಣೆಯನ್ನು  ಹಚ್ಚುವಾಗ  ಕೂದಲಿನ ಬೇರುಗಳಿಗೆ ಇದನ್ನು ಸರಿಯಾಗಿ ಅನ್ವಯಿಸಿ. 

ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಎಣ್ಣೆಯನ್ನು  ಹಚ್ಚಬಹುದು. ಇದರಿಂದ ಕೂದಲಿನ  ಶುಷ್ಕತನವನ್ನು ಕೂಡಾ ಹೋಗಲಾಡಿಸಬಹುದು. ಈ ಎಣ್ಣೆಯು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News