Valentine's Day : ಹುಡ್ಗೀರು ʼಪ್ರೇಮಿಗಳ ದಿನʼ ಯಾವ ಡ್ರೇಸ್‌ ಹಾಕ್ಕೊಂಡ್ರೆ ಚೆಂದ ಗೊತ್ತಾ..!

ಪ್ರೇಮಿಗಳ ದಿನ, ಆಂಗ್ಲ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ, ವ್ಯಾಲೆಂಟೆನ್ಸ್​​ ಡೇ.. ಅಂದು ಎಲ್ಲಿ ನೋಡಿದ್ರು ಪ್ರೇಮಿಗಳ ಕಲರವ, ಚಇನ್ನು ಕೆಲವು ಜೋಡಿಗಳು ಪ್ರೇಮಿಗಳ ದಿನವನ್ನು ಆಚರಣೆ ಮಾಡೋಕೆ ಅಂತ ಊಟಿ, ಕೊಡೈಕೆನಾಲ್‌, ಗೋವಾ, ಚಿಕ್ಕಮಗಳೂರು, ಹೀಗೆ ನಾನಾ ರೊಮ್ಯಾಂಟಿಕ್‌ ಪ್ಲೇಸ್‌ಗಳಿಗೆ ತೆರಳುತ್ತಾರೆ..

Written by - Krishna N K | Last Updated : Feb 9, 2023, 05:12 PM IST
  • ವ್ಯಾಲೆಂಟೆನ್ಸ್​​ ಡೇ.. ಅಂದು ಎಲ್ಲಿ ನೋಡಿದ್ರು ಪ್ರೇಮಿಗಳ ಕಲರವ.
  • ಕಲರ್‌ ಕಲರ್‌ ಬಟ್ಟೆ ತೊಟ್ಟು ಕೈ ಕೈ ಹಿಡಿದುಕೊಂಡು ಗೆಳೆಯ/ಗೆಳತಿಯ ಜೊತೆ ಹೆಜ್ಜೆ ಹಾಕುತ್ತಿರುತ್ತಾರೆ.
  • ಪಾರ್ಲರ್‌ಗೆ ಹೋಗಿ ಪೇಸ್‌ ಪ್ಯಾಕ್‌ ಮಾಡಿಸಿ ಕ್ಯೂಟಾಗಿ ಕಂಟ್ರೆ ಸಾಕಾ..? ಡ್ರೇಸ್‌ ಕೂಡ ಮುಖ್ಯ.. ಅಲ್ವಾ.
Valentine's Day : ಹುಡ್ಗೀರು ʼಪ್ರೇಮಿಗಳ ದಿನʼ ಯಾವ ಡ್ರೇಸ್‌ ಹಾಕ್ಕೊಂಡ್ರೆ ಚೆಂದ ಗೊತ್ತಾ..! title=

Valentine's Day : ಪ್ರೇಮಿಗಳ ದಿನ, ಆಂಗ್ಲ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ, ವ್ಯಾಲೆಂಟೆನ್ಸ್​​ ಡೇ.. ಅಂದು ಎಲ್ಲಿ ನೋಡಿದ್ರು ಪ್ರೇಮಿಗಳ ಕಲರವ, ಚಇನ್ನು ಕೆಲವು ಜೋಡಿಗಳು ಪ್ರೇಮಿಗಳ ದಿನವನ್ನು ಆಚರಣೆ ಮಾಡೋಕೆ ಅಂತ ಊಟಿ, ಕೊಡೈಕೆನಾಲ್‌, ಗೋವಾ, ಚಿಕ್ಕಮಗಳೂರು, ಹೀಗೆ ನಾನಾ ರೊಮ್ಯಾಂಟಿಕ್‌ ಪ್ಲೇಸ್‌ಗಳಿಗೆ ತೆರಳುತ್ತಾರೆ..

ಆದ್ರೆ, ವಿಚಾರ ಅಂದ್ರೆ, ಯುವತಿಯರ ಬಟ್ಟೆ ಬಗ್ಗೆ ಕೆಲವೊಂದಿಷ್ಟು ಮಾತು ಹೇಳ್ಬೇಕು. ಹುಡುಗರು ಏನ್‌ ಬಿಡಿ ಜೀನ್ಸ್‌.. ಟಿ ಶರ್ಟ್‌ ಇಲ್ಲಾ ಕೈಗೆ ಸಿಕ್ಕ ಯಾವುದೋ ಒಂದು ಬಟ್ಟೆ ಹಾಕ್ಕೊಂಡು ಅಮ್ಮ, ಅಪ್ಪಂಗೆ ಸುಳ್ಳು ಹೇಳಿ ನಿಮ್‌ ಜೊತೆ ಹೊರಗೆ ಬರ್ತಾರೆ, ಹಾಗಂತ ನೀವು ಸುಮ್ನೆ ಎನ್‌ ಅಲ್ಲ ಅಲ್ವಾ.. ವ್ಯಾಲೆಂಟೆನ್ಸ್​​ ಡೇ ಹಿಂದಿನ ದಿನ ಪಾರ್ಲರ್‌ಗೆ ಹೋಗಿ ಅದು ಇದು ಅಂತ ಪೇಸ್‌ ಪ್ಯಾಕ್‌ ಮಾಡಿಸಿಕೊಂಡು ಕ್ಯೂಟಾಗಿ ಕಾಣ್ತೀರಾ.. ಆದ್ರೆ, ಮುಖ ಸುಂದರವಾಗಿ ಕಂಡ್ರೆ ಅಷ್ಟೇ ಸಾಕಾ.. ಬಟ್ಟೆ ಕೂಡ ಮುಖ್ಯ.. ಅಲ್ವಾ

ಇದನ್ನೂ ಓದಿ: ಪ್ರೀತಿ ಜೀವನದಲ್ಲಿ ಸಿಹಿ ಹೆಚ್ಚಾಗಿರಲಿ! ಚಾಕಲೇಟ್ ಡೇ ಗೆ ನಿಮ್ಮ ಸಂಗಾತಿಗೆ ಕಳುಹಿಸಿ ಪ್ರೇಮಭರಿತ ಮೆಸೇಜ್

ಹೌದು.. ನಿಮ್ಮ ಹುಡುಗ ನಿಮ್ಮನ್ನ ನೋಡಿದ್ರೆ ತಲೆ ಎತ್ತಿ ಬೇರೆ ಯಾವುದೇ ಸುಂದರಿ ಎದುರು ಬಂದ್ರೂ ಕಣ್ಣೇತ್ತಿಯೂ ಸಹ ನೋಡ್ಬಾರ್ದು ಹಾಗೆ ನೀವು ರೆಡಿಯಾಗ್ಬೇಕು. ಹಾಗಾದ್ರೆ, ಯಾವ ಡ್ರೇಸ್‌ ಹಾಕ್ಕೊಬೇಕಪ್ಪಾ...? ಆಂತ ನೀವು ಕೇಳ್ಬಬಹುದು.. ಹಾಗಂತ ಮಾರ್ಡನ್‌ ಡ್ರೇಸ್‌ ಹಾಕ್ಕೊಂಡ್ರೆ ಸಾಕು ನಮ್ಮ ಹುಡುಗ ನಮ್ಮಿಂದೆ ಇರ್ತಾನೆ ಅಂತ ಹೇಳ್ಬೇಡಿ.. ಮಾರ್ಡನ್‌ ಬಟ್ಟೆ ತೊಟ್ಟರೆ ಜಸ್ಟ್‌ ಬೇರೆ ಹುಡುಗರ ನೋಟದಿಂದ ನಿಮ್ಮನ್ನ ಕಾಪಾಡೊದ್ರಲ್ಲೇ ಅವನಿಗೆ ಟೈಮ್‌ ಹೋಗುತ್ತೆ.. ಅಷ್ಟೆ.. ಇದರ ಮೇಲೆ ನಿಮ್ಮಿಷ್ಟ..

ಅಯ್ಯೋ... ಸರಿ ಕೊನೆಗೆ ಯಾವ ಬಟ್ಟೆ ಹಾಕ್ಕೊಬೇಕು ಹೇಳಿ ಅಂತ ಇಷ್ಟೇಲ್ಲ ಓದಿ ತಲೆಕಡಿಸಿಕೊಂಡ್ರಾ... ಜಸ್ಟ ಕೂಲ್‌... ಬಹಳ ಸುಲಭ ರೀ... ನಮ್ಮ ಹೈಕ್ಳಿಗೆ ನೀವು ಕಾಸ್ಟ್ಲೀ ಬಟ್ಟೆ ಹಾಕ್ಕೊಂಡು ಫುಲ್‌ ಮೇಕಪ್‌ ಮಾಡ್ಕೊಂಡು ಬರೋದೇನೂ ಬೇಕಿಲ್ಲ... ಜಸ್ಟ್‌.. ಬ್ಯೂಟಿಫುಲ್‌ ಟ್ರಾನ್ಸ್‌ಪರೆಂಟ್‌ ಸಿರೆ ಹಾಕ್ಕೊಂಡು, ಅದಕ್ಕೆ ತಕ್ಕಂತೆ ಒಂದು ಬಿಂದಿ ಇಟ್ಕೊಂಡು, ಕಿವಿಯೋಲೆ ಹಾಕ್ಕೊಂಡು, ಇಷ್ಟ ಆದ್ರೆ ಹೂ ಮುಡ್ಕೊಳ್ಳಿ ಇಲ್ಲ.. ಜಸ್ಟ್‌ ಲೂಸ್‌ ಹೇರ್‌ ಬಿಟ್ಟು, ಹಾಗೆ ಸುಮ್ನನೆ ಒಮ್ಮೆ ನಿಮ್ಮ ಹುಡುಗನ ಮುಂದೆ ಬಂದ್ರೆ ಸಾಕು.. ದೇವತೆ ತರ ಕಾಣ್ತೀಯಾ ಚಿನ್ನಾ ಅಂತಾನೆ... ಸುಳ್ಳಲ್ಲ ಬೇಕಿದ್ರೆ ಟ್ರೈ ಮಾಡಿ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News