ಮನೆಯಲ್ಲಿ ಈ ರೀತಿಯ ಕನ್ನಡಿ ಇಟ್ಟಿದ್ದರೆ ಎದುರಾಗುವುದು ಆರ್ಥಿಕ ಸಮಸ್ಯೆ, ಕಾಡುವುದು ದಟ್ಟ ದಾರಿದ್ರ್ಯ

 ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಯು ಮನೆಯ ಸಂತೋಷ ಮತ್ತು ಶಾಂತಿಯ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಕನ್ನಡಿ ಇಡುವಾಗಲೂ ಸರಿಯಾದ ಸ್ಥಳವನ್ನು ನೋಡಿಕೊಂಡು ಇಡಬೇಕು.   

Written by - Ranjitha R K | Last Updated : Oct 4, 2022, 08:54 AM IST
  • ಕನ್ನಡಿಯು ಮನೆಯ ಸಂತೋಷ, ಶಾಂತಿಯ ಮೇಲೆ ಪ್ರಭಾವ ಬೀರುತ್ತದೆ.
  • ಕನ್ನಡಿ ಇಡುವಾಗಲೂ ಸರಿಯಾದ ಸ್ಥಳವನ್ನು ನೋಡಿಕೊಂಡು ಇಡಬೇಕು.
  • ಸರಿಯಾದ ಸ್ಥಳದಲ್ಲಿ ಕನ್ನಡಿ ಹಾಕದೇ ಹೋದರೆ ವಾಸ್ತು ದೋಷ ಎದುರಾಗುತ್ತದೆ
ಮನೆಯಲ್ಲಿ ಈ ರೀತಿಯ ಕನ್ನಡಿ ಇಟ್ಟಿದ್ದರೆ ಎದುರಾಗುವುದು ಆರ್ಥಿಕ ಸಮಸ್ಯೆ, ಕಾಡುವುದು  ದಟ್ಟ ದಾರಿದ್ರ್ಯ  title=
Mirror Vastu (file photo)

ಬೆಂಗಳೂರು : ಕೆಲವರಿಗೆ ಬೆಳಗ್ಗೆ ಎದ್ದು ಒಮ್ಮೆ ಕನ್ನಡಿಯಲ್ಲಿ ಮುಖನೋಡಿಕೊಲ್ಲದೆ ಹೋದರೆ ಏನನ್ನೋ ಕಳೆದುಕೊಂಡ ಭಾವ ಕಾಡುತ್ತಿರುತ್ತದೆ. ಇನ್ನು ಕೆಲವರಿಗಂತೂ ಪದೇ ಪದೇ ಕನ್ನಡಿ ಮುಂದೆ ನಿಲ್ಲುವ ಚಟ ಇರುತ್ತದೆ. ಆದರೆ ಮನೆಯಲ್ಲಿರುವ ಕನ್ನಡಿ ನಿಮ್ಮ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ಎಷ್ಟು ಜನರಿಗೆ ತಿಳಿದಿದೆ? ಹೌದು, ಮನೆಯಲ್ಲಿ ಅಳವಡಿಸಲಾಗಿರುವ ಕನ್ನಡಿ ಕೇವಲ ಅಲಂಕಾರದ ಸಾಧನವಲ್ಲ, ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಯು ಮನೆಯ ಸಂತೋಷ ಮತ್ತು ಶಾಂತಿಯ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಕನ್ನಡಿ ಇಡುವಾಗಲೂ ಸರಿಯಾದ ಸ್ಥಳವನ್ನು ನೋಡಿಕೊಂಡು ಇಡಬೇಕು. ಸರಿಯಾದ ಸ್ಥಳದಲ್ಲಿ ಕನ್ನಡಿ ಹಾಕದೇ ಹೋದರೆ ವಾಸ್ತು ದೋಷ ಎದುರಾಗಬಹುದು.  ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟ ಕನ್ನಡಿಯು ಸಂತೋಷದ ದಾರಿಯನ್ನು ತೆರೆಯುತ್ತದೆ. 

ಕನ್ನಡಿಯನ್ನು ಯಾವ ದಿಕ್ಕಿನಲ್ಲಿಡಬೇಕು : 
ಮನೆಯಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದರೆ ಮನೆಗೆ  ಲಕ್ಷ್ಮೀಯನ್ನು ಆಹ್ವಾನಿಸಿದಂತೆ. ಈ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ, ಸಮಾಜದಲ್ಲಿ ಕುಟುಂಬದ ಸದಸ್ಯರ ಗೌರವವನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಹರಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Name Astrology: ಈ ಹೆಸರಿನವರು ಜೀವನದಲ್ಲಿ ಖ್ಯಾತಿ ಗಳಿಸುತ್ತಾರೆ, ಇದ್ದಕ್ಕಿದ್ದಂತೆ ಅದೃಷ್ಟ ಹೊಳೆಯುತ್ತದೆ!

ಒಡೆದ ಕನ್ನಡಿಯನ್ನು  ಮನೆಯಲ್ಲಿಡಬಾರದು :
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಒಡೆದರೆ ತಕ್ಷಣ ಅದನ್ನು ಮನೆಯ ಹೊರಹಾಕಬೇಕು. ಇಲ್ಲದಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರೊಂದಿಗೆ, ಇದು ಮನೆಯಲ್ಲಿ ಅಪಶ್ರುತಿ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಒಡೆದ ಗಾಜು ಕೂಡ ಅಶುಭ ಸಂಕೇತವನ್ನು ನೀಡುತ್ತದೆ. 

ಕನ್ನಡಿಯ ಆಕಾರ ಹೇಗಿರಬೇಕು ? :  
ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆಯಲ್ಲಿ ಕನ್ನಡಿಯನ್ನು ಹಾಕಿದಾಗ, ನೀವು ಚೌಕಾಕಾರದ ಕನ್ನಡಿಯನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿಇಟ್ಟಿರುವ ಕನ್ನಡಿ ಸ್ವಚ್ಛವಾಗಿರಬೇಕು. ಅದರಲ್ಲಿ ನಿಮ್ಮ ಚಿತ್ರವು ಸ್ಪಷ್ಟವಾಗಿ ಗೋಚರಿಸಬೇಕು. ಅಂತಹ ಕನ್ನಡಿಯಲ್ಲಿ ಮುಖವನ್ನು ನೋಡುತ್ತಾ ದಿನವನ್ನು ಪ್ರಾರಂಭಿಸಿದರೆ, ದಿನವು ಚೆನ್ನಾಗಿರುತ್ತದೆ.  

ಇದನ್ನೂ ಓದಿ : Dussehra 2022 : ದಸರಾ ದಿನ 3 ವಸ್ತುಗಳನ್ನು ದಾನ ಮಾಡಿ, ಅಪಾರ ಸಂಪತ್ತು ನಿಮ್ಮದಾಗಲಿದೆ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News