Weekly Horoscope: ಈ ರಾಶಿಗಳ ಜನರಿಗೆ ಸಿಗಲಿದೆ ಗುಡ್ ನ್ಯೂಸ್, ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ?

Weekly Horoscope till 24 April 2022: ಮೇಷ ರಾಶಿಯ ಜನರಿಗೆ ಈ ವಾರ ಒಳ್ಳೆಯ ಸುದ್ದಿ ಸಿಗಲಿದೆ. ಇದಲ್ಲದೇ ಕನ್ಯಾ ರಾಶಿಯವರಿಗೆ ಶುಭಕಾಲ ಆರಂಭವಾಗಲಿದೆ. ಏಪ್ರಿಲ್ 18 ರಿಂದ ಏಪ್ರಿಲ್ 24 ರವರೆಗೆ ನಿಮ್ಮ ವಾರ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Apr 17, 2022, 05:47 PM IST
  • ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ.
  • ಮೇಷರಾಶಿಯ ಜನರಿಗೆ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ
  • ಕನ್ಯಾ ರಾಶಿಯ ಜನರಿಗೆ ಒಳ್ಳೆಯ ಕಾಲ ಆರಂಭವಾಗಲಿದೆ
Weekly Horoscope: ಈ ರಾಶಿಗಳ ಜನರಿಗೆ ಸಿಗಲಿದೆ ಗುಡ್ ನ್ಯೂಸ್, ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ? title=
Weekly Horoscope Astrology

Weekly Horoscope till 24 April 2022: ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ಅವರು ಮುಂದಿನ ಏಳು ದಿನಗಳು (ವಾರದ ಭವಿಷ್ಯ) ನಮ್ಮೆಲ್ಲರ ಪಾಲಿಗೆ ಹೇಗೆ ಇರಲಿವೆ ಎಂಬುದನ್ನು ಹೇಳಿದ್ದು, ಅವರ ಪ್ರಕಾರ, ಮೇಷ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಲಿದೆ.

ಮೇಷ: ಈ ವಾರ ನಿಮಗೆ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ. ಪರಿಚಿತ ಜನರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುವಿರಿ. ನೀವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ದಾನಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಭಾಗವಹಿಸುವಿರಿ. ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ.ಈ ವಾರ ನಿಮ್ಮ ಅದೃಷ್ಟವು ಉತ್ತಮವಾಗಿರಲಿದೆ.

ವೃಷಭ: ಈ ವಾರ ನೀವು ಕೆಲಸಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಮಾಡುವಲ್ಲಿ ಯಶಸ್ವಿಯಾಗುವಿರಿ. ನೀವು ದೊಡ್ಡ ಉದ್ಯಮಿಗಳು ಅಥವಾ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಿರಿ. ನಿಮ್ಮ ಉತ್ತಮ ಸಂಬಂಧಗಳು ನಿಮಗೆ ಲಾಭದ ಆನಂದ ಪಡೆಯಲು ಸಹಕಾರಿಯಾಗಲಿವೆ. ಸ್ನೇಹಿತರ ಸಹಾಯದಿಂದ ನಿಮ್ಮ ಶತ್ರುಗಳನ್ನು ಸೋಲಿಸಲು ನಿಮಗೆ ಸಾಧ್ಯವಾಗಲಿದೆ.

ಮಿಥುನ: ಈ ವಾರ ನೀವು ಅಶುಭ ಸನ್ನಿವೇಶಗಳಲ್ಲಿಯೂ ಕೂಡ ಜಯ ಸಾಧಿಸುವಿರಿ. ನಿಮ್ಮ ಶತ್ರುಗಳನ್ನು ಸೋಲಿಸುವಿರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಈ ಸಮಯದಲ್ಲಿ, ನೀವು ರಿಯಲ್ ಎಸ್ಟೇಟ್ನಿಂದ ಉತ್ತಮ ಲಾಭವನ್ನು ಪಡೆಯುವಿರಿ.

ಕರ್ಕ: ಈ ವಾರ ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಹೆಚ್ಚಾಗಲಿದೆ. ಉನ್ನತ ಸ್ಥಾನಗಳನ್ನು ಹೊಂದಿರುವ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳಲಿವೆ ಮತ್ತು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹೊಸ ಜನರೊಂದಿಗೆ ಸಂವಹನ ಹೆಚ್ಚಾಗಲಿದೆ ಮತ್ತು ಅವರೊಂದಿಗೆ ವ್ಯಾಪಾರ ಸಂಪರ್ಕ ನಿರ್ಮಾಣಗೊಳ್ಳಲಿವೆ. ಈ ವಾರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಂದ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯ ಸಿಗಲಿದೆ.

ಸಿಂಹ: ಧಾರ್ಮಿಕ ಕಾರ್ಯಗಳಿಗೆ ಈ ವಾರ ತುಂಬಾ ಒಳ್ಳೆಯದು. ಪ್ರಯಾಣ ಮಾಡುವ ಅವಕಾಶವೂ ದೊರೆಯಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯ ನಡೆಯಲಿದೆ. ನಿಮ್ಮ ಬುದ್ಧಿವಂತಿಕೆಯಿಂದ, ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಇರಲಿದೆ. ಈ ವಾರ ನಿಮಗೆ ನಿಮ್ಮ ವಿರೋಧಿಗಳನ್ನು ಗೆಲ್ಲುವ ಅವಕಾಶ ಸಿಗಲಿದೆ.

ಕನ್ಯಾ: ಈ ವಾರ ನೀವು ಕುಟುಂಬ ಸದಸ್ಯರಿಂದ ಹೆಚ್ಚಿನ ಪ್ರೀತಿಯನ್ನು ಪಡೆಯುವಿರಿ. ಧರ್ಮದಲ್ಲಿ ನಂಬಿಕೆ ಹೆಚ್ಚಾಗಲಿದೆ. ನಿಮ್ಮ ವ್ಯಕ್ತಿತ್ವ ಪ್ರಭಾವಶಾಲಿಯಾಗಿರಲಿದೆ. ಸಂಭಾಷಣೆಯ ಕೌಶಲ್ಯ ಮತ್ತು ನಿಮ್ಮ ಚುರುಕುತನವನ್ನು ಬಳಸಿಕೊಂಡು ನಿಮ್ಮ ಕಾರ್ಯಗಳನ್ನು ನೀವು ಪೂರ್ಣಗೊಳಿಸುವಿರಿ. ಈ ವಾರ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿವೆ. ನ್ಯಾಯಾಲಯ-ಕಚೇರಿ ಕೆಲಸಗಳಲ್ಲಿ ಜಯ ಸಿಗಲಿದೆ.

ತುಲಾ: ಈ ವಾರ ಮಿಶ್ರಫಲದಿಂದ ಕೂದಿರಲಿದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ನಿಮ್ಮ ಸ್ವಭಾವ ಮತ್ತು ನಡವಳಿಕೆಯಲ್ಲಿ ಪ್ರಬುದ್ಧತೆ ಇರಲಿದೆ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.

ವೃಶ್ಚಿಕ: ಈ ವಾರ ಸರ್ಕಾರಿ ವಲಯದಲ್ಲಿ ಗೌರವ ಮತ್ತು ಲಾಭ ಸಿಗಲಿದೆ. ಉನ್ನತ ಶ್ರೇಣಿಯ ಜನರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಿರಿ. ರಾಜಕೀಯದಲ್ಲಿ ನಿಮ್ಮ ಆಕರ್ಷಣೆ ಇರಲಿದೆ, ಆದರೆ ರಾಜಕೀಯದಲ್ಲಿ ತೊಡಗಿರುವ ಜನರೊಂದಿಗೆ ನೀವು ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಿ, ಇಲ್ಲದಿದ್ದರೆ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಧನು: ಈ ವಾರ ವ್ಯಾಪಾರದಲ್ಲಿ ಯಶಸ್ಸು ಪ್ರಾಪ್ತಿಯಾಗುವುದಿಲ್ಲ. ಕುಟುಂಬದಲ್ಲಿ ಸಂತೋಷ ಇರಲಿದೆ. ನಿಮ್ಮ ಅಭ್ಯಾಸಗಳನ್ನು ಬದಲಾಯಿಸುವುದು ಅವಶ್ಯಕ. ಈ ವಾರ ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಉತ್ತಮ ಸಂಬಂಧ ಸ್ಥಾಪಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಮಕರ: ಈ ವಾರ ಉದಾತ್ತ ಕೆಲಸಗಳಿಗೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಕೆಲಸಗಳಿಗೆ ಹಣ ವ್ಯಯವಾಗಲಿದೆ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀವು ಪಡೆಯುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಒಲವು ಹೆಚ್ಚಾಗಲಿದೆ. ಕೌಟುಂಬಿಕ ಸುಖ ಮತ್ತು ಸಹಕಾರ ಉತ್ತಮವಾಗಿರಲಿದೆ.

ಕುಂಭ: ಈ ವಾರ ಕುಟುಂಬದಲ್ಲಿ ಯಾರದ್ದೋ ಆರೋಗ್ಯ ಕೆಡಲಿದೆ, ಮಾನಸಿಕ ಒತ್ತಡ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಖ್ಯಾತಿ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯಗಳು ಮತ್ತು ಉದಾತ್ತ ಕಾರ್ಯಗಳಲ್ಲಿ ಸಂಪೂರ್ಣ ಭಕ್ತಿಯಿಂದ ಸಹಕರಿಸುವಿರಿ. ನಿಮ್ಮ ಕ್ಷೇತ್ರದ ಜನರಲ್ಲಿ ನೀವು ಖ್ಯಾತಿಯನ್ನು ಪಡೆಯುವಿರಿ.

ಇದನ್ನೂ ಓದಿ-Vaishakh Month 2022: ಧನವೃಷ್ಟಿಯ ಸಮಯ ಆರಂಬವಾಗಿದೆ, ವೈಶಾಖ ಮಾಸದಲ್ಲಿ ಬರುವ ವೃತ-ಹಬ್ಬಗಳ ಪಟ್ಟಿ ಇಲ್ಲಿದೆ

ಮೀನ: ಈ ವಾರ ನಿಮಗೆ ರಾಜಕೀಯದಲ್ಲಿ ಯಶಸ್ಸನ್ನು ಸಾಧಿಸುವ ಅವಕಾಶ ಸಿಗಲಿದೆ ಮತ್ತು ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೊಂದಿಗೆ ನೀವು ಸ್ನೇಹ ಸ್ಥಾಪಿಸುವಲ್ಲಿ ಯಶಸ್ವಿಯಾಗುವಿರಿ. ಪರೋಪಕಾರಿ ಸ್ವಭಾವದವರಾಗಿರುವ ನೀವು ಇತರರ ಒಳಿತಿಗಾಗಿ ಕೆಲಸ ಮಾಡುವಿರಿ. ಸರಕಾರದಿಂದ ಹಣ ಸಿಗಲಿದೆ.

ಇದನ್ನೂ ಓದಿ-Vastu Tips: ಮಲಗುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ, ಒಂದರ ಮೇಲೊಂದರಂತೆ ಯಶಸ್ಸು ನಿಮ್ಮದಾಗಲಿದೆ

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News