Wedding Ceremony: ಕಡಿಮೆ ಖರ್ಚಿನಲ್ಲಿ ಅದ್ಧೂರಿ ಮದುವೆ..! ಈ ವಿಧಾನಗಳನ್ನು ಅನುಸರಿಸಿ

Low Budget Wedding: ನೀವು ಸಹ ಯೋಜಿತ ಬಜೆಟ್‌ನಲ್ಲಿ ಮದುವೆ ಮಾಡಲು ಬಯಸುತ್ತಿದ್ದೀರಾ..? ಹಾಗಾದರೆ ಎಲ್ಲಿ ಖರ್ಚು ಮಾಡಬೇಕು ಮತ್ತು ಎಲ್ಲಿ ಕಡಿಮೆ ಮಾಡಬೇಕು ಎನ್ನುವುದನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಬೇಕು. ಅನಗತ್ಯ ವಿಷಯಗಳಿಗೆ ಆದ್ಯತೆಯನ್ನು ನೀಡಬಾರದು.

Written by - Zee Kannada News Desk | Last Updated : Feb 18, 2024, 03:19 PM IST
  • ಮದುವೆ ಎಷ್ಟು ಅದ್ಧೂರಿಯಾಗಿ ನಡೆಯುತ್ತದೆ ಎನ್ನುವುದಕ್ಕಿಂತ ಮದುವೆ ಎಷ್ಟು ಚೆನ್ನಾಗಿ ಪ್ಲಾನ್ ಆಗಿದೆ ಅನ್ನೋದು ಬಹಳ ಮುಖ್ಯ.
  • ತೋಟದ ಮನೆಗಳನ್ನು ಮಂಟಪಗಳಾಗಿ ಬುಕ್ ಮಾಡುವುದು ಉತ್ತಮ ಇದರಿಂದ ಉತ್ತಮ ವಾತಾವರಣ ಮತ್ತು ನೈಸರ್ಗಿಕ ಅನುಭವ ಪಡೆಯಬಹುದು.
  • ನಮ್ಮ ದೇಶದ ಉತ್ತಮ ಪ್ರವಾಸೋದ್ಯಮ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೋಗಬಹುದು.
Wedding Ceremony: ಕಡಿಮೆ ಖರ್ಚಿನಲ್ಲಿ ಅದ್ಧೂರಿ ಮದುವೆ..! ಈ ವಿಧಾನಗಳನ್ನು ಅನುಸರಿಸಿ title=

Wedding Ceremony: ಫೆಬ್ರವರಿ ತಿಂಗಳಿಂದ ಮದುವೆ ಸಿಸನ್‌ ಆರಂಭ. ಅಲ್ಲದೆ ಮದುವೆ ಎಷ್ಟು ಅದ್ಧೂರಿಯಾಗಿ ನಡೆಯುತ್ತದೆ ಎನ್ನುವುದಕ್ಕಿಂತ ಮದುವೆ ಎಷ್ಟು ಚೆನ್ನಾಗಿ ಪ್ಲಾನ್ ಆಗಿದೆ ಅನ್ನೋದು ಬಹಳ ಮುಖ್ಯ. ಏಕೆಂದರೆ ನಮ್ಮ ಬಜೆಟ್‌ಗೆ ತಕ್ಕಂತೆ ನಾವು ಮದುವೆ ಪ್ಲಾನ್‌ ಮಾಡಬೇಕಾಗುತ್ತದೆ. ಹಾಗದರೆ ಯಾವ ರೀತಿ ಬಜೆಟ್‌ ಪ್ಲಾನ್‌ ಮಾಡಬೇಕು ಎಂಬುದನ್ನು ಇಲ್ಲಿ ನೋಡಿ..

ನೀವು ಸಹ ಯೋಜಿತ ಬಜೆಟ್‌ನಲ್ಲಿ ಮದುವೆ ಮಾಡಲು ಬಯಸುತ್ತಿದ್ದೀರಾ..? ಹಾಗಾದರೆ ಎಲ್ಲಿ ಖರ್ಚು ಮಾಡಬೇಕು ಮತ್ತು ಎಲ್ಲಿ ಕಡಿಮೆ ಮಾಡಬೇಕು ಎನ್ನುವುದನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಬೇಕು. ಅನಗತ್ಯ ವಿಷಯಗಳಿಗೆ ಆದ್ಯತೆಯನ್ನು ನೀಡಬಾರದು.

ಇದನ್ನೂ ಓದಿ:

ಅಲ್ಲದೇ, ಮದುವೆ ಎಂದರೆ ಸಂಬಂಧಿಕರು, ನೆರೆಹೊರೆಯವರು, ಹಿತೈಷಿಗಳು ಮತ್ತು ಸ್ನೇಹಿತರ ಒಟ್ಟಾಗಿ ಸೇರುತ್ತಾರೆ. ಮುಖ್ಯವಾಗಿ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ನೋಡಬೇಕು. ಆಗ ಮಾತ್ರ ನಮ್ಮ ಆಚಾರ-ವಿಚಾರಗಳಲ್ಲಿ ಯಾವುದೇ ಲೋಪವಾಗದಂತೆ ಸಮಾರಂಭ ಯಶಸ್ವಿಯಾಗುತ್ತದೆ.
 
ಇಂದಿನ ಪೀಳಿಗೆಯ ವಧು-ವರರು ಮದುವೆಯಲ್ಲಿ ಮೆಹಂದಿ, ಸಂಗೀತ, ಹಳದಿ ಶಾಸ್ತ್ರ, ಆರತಕ್ಷತೆ  ಹೀಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಇವುಗಳಿಗೆ ವಿಶೇಷ ಉಡುಪುಗಳು ಮತ್ತು ದೊಡ್ಡ ಮಂಟಪಗಳನ್ನು ಬುಕ್‌ ಮಾಡಿ ಅಲಂಕಾರಗಳನ್ನು ಮಾಡಲಾಗುತ್ತದೆ ಇದಕ್ಕೆ ಖರ್ಚು ಸಹ ಹೆಚ್ಚು. ಇದರ ಬದಲಾಗಿ  ತೋಟದ ಮನೆಗಳನ್ನು ಮಂಟಪಗಳಾಗಿ ಬುಕ್ ಮಾಡುವುದು ಉತ್ತಮ ಇದರಿಂದ ಉತ್ತಮ ವಾತಾವರಣ ಮತ್ತು ನೈಸರ್ಗಿಕ ಸ್ಥಳಗಳ ಅನುಭವದೊಂದಿಗೆ ಕಡಿಮೆ ಬಜೆಟ್‌ನಲ್ಲಿ ಸುಂದರವಾಗಿ ಮದುವೆ ಮಾಡಬಹುದು.

ಇದನ್ನೂ ಓದಿ:

ಮದುವೆ ಸಮಾರಂಭದ ನಂತರ ನವದಂಪತಿಗಳ ಹನಿಮೂನ್‌ಗೆ ಎಂದು ಹೊರ ದೇಶಗಳಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ವಿದೇಶಕ್ಕೆ ಕಳುಹಿಸುತ್ತಾರೆ. ಅವುಗಳ ಬದಲಿಗೆ ನಮ್ಮ ದೇಶದ ಉತ್ತಮ ಪ್ರವಾಸೋದ್ಯಮ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೋಗಬಹುದು. ನೀವು ವಿದೇಶಕ್ಕೆ ಹೋಗಲು ಬಯಸಿದರೆ, ನೀವು ಮಲೇಷ್ಯಾ ಮತ್ತು ಥೈಲ್ಯಾಂಡ್ ಅನ್ನು ಆಯ್ಕೆ ಮಾಡಬಹುದು. ನೀವು ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಬಹುದು ಉತ್ತಮ ಸ್ಥಳಗಳಾಗಿವೆ.

ಮುಖ್ಯವಾಗಿ ರಾತ್ರಿಯ ಊಟದ ಬಗ್ಗೆಯೂ ಜಾಗರೂಕರಾಗಿರಬೇಕು. ಅಡುಗೆ ಮಾಡುವಾಗ ರುಚಿ ಮತ್ತು ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು. ಅತಿಥಿಗಳಿಗೆ ಸೌಜನ್ಯ ಕಳೆದುಕೊಳ್ಳದೆ ಎರಡು ಬಾರಿ ಬಡಿಸುವ ವ್ಯವಸ್ಥೆ ಮಾಡಬೇಕು. ನಿಮಗೆ ಬೇಕಾದಷ್ಟು ಅಡುಗೆಗಳನ್ನು ಮಾಡುವ ವ್ಯವಸ್ಥೆ ಮಾಡಿಕೊಳ್ಳಿ.

ಇದನ್ನೂ ಓದಿ:

ಈಗ ಮದುವೆ ಸೀಸನ್ ನಡೆಯುತ್ತಿದೆ. ನಮ್ಮ ದೇಶದಲ್ಲಿ ಸಂಪ್ರದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರೊಂದಿಗೆ ಸಾಂಪ್ರದಾಯಿಕ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮದುವೆಯ ಆಮಂತ್ರಣ ಪತ್ರಿಕೆಯಿಂದ ಮಂಡಪಾಲಂಕನವರೆಗೆ, ಮದುವೆಯ ಉಡುಪುಗಳಿಂದ ಹಿಡಿದು ಆಭರಣಗಳವರೆಗೆ, ಟಿಫಿನ್‌ಗಳಿಂದ ಹಿಡಿದು ಊಟದವರೆಗೆ ಎಲ್ಲವೂ ವಿಶೇಷವಾಗಿ ಕಡಿಮೆ ಖರ್ಚಿನಲ್ಲಿಯೇ ಸೂಪರ್‌ ಆಗಿ ಮಾಡಬಹುದು.

Trending News