ಒಂದೇ ತಿಂಗಳಲ್ಲಿ ಎರಡು ಬಾರಿ ಗೋಚರಿಸಲಿರುವ ಶುಕ್ರ ನಾಲ್ಕು ರಾಶಿಯವರಿಗೆ ಹರಿಸಲಿದ್ದಾನೆ ಹಣದ ಹೊಳೆ

ಶುಕ್ರನು  ಡಿಸೆಂಬರ್ 3 ರಂದು ಧನು ರಾಶಿಯಲ್ಲಿ ಮತ್ತು  ಡಿಸೆಂಬರ್  29 ರಂದು ಮಕರ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಶುಕ್ರ ಈ ರೀತಿ 2 ಬಾರಿ ಸಂಕ್ರಮಿಸುವುದರಿಂದ 4 ರಾಶಿಯವರಿಗೆ ಪ್ರಚಂಡ ಆರ್ಥಿಕ ಸಮೃದ್ಧಿ ಸಿಗಲಿದೆ. 

Written by - Ranjitha R K | Last Updated : Nov 11, 2022, 08:23 AM IST
  • ಎರಡು ಬಾರಿ ಸಂಕ್ರಮಿಸಲಿರುವ ಶುಕ್ರ
  • ಡಿಸೆಂಬರ್ 2022, 4 ರಾಶಿಯವರ ಪಾಲಿಗೆ ಬಹಳ ಅದ್ಭುತವಾಗಿರುತ್ತದೆ
  • ಶುಕ್ರ ಸಂಕ್ರಮಣದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ
ಒಂದೇ ತಿಂಗಳಲ್ಲಿ ಎರಡು ಬಾರಿ ಗೋಚರಿಸಲಿರುವ ಶುಕ್ರ ನಾಲ್ಕು ರಾಶಿಯವರಿಗೆ ಹರಿಸಲಿದ್ದಾನೆ ಹಣದ ಹೊಳೆ  title=
Venus transit (file photo)

ಬೆಂಗಳೂರು : ವರ್ಷದ ಕೊನೆಯ ತಿಂಗಳು, ಅಂದರೆ ಡಿಸೆಂಬರ್ 2022, 4 ರಾಶಿಯವರ ಪಾಲಿಗೆ ಬಹಳ ಅದ್ಭುತವಾಗಿರುತ್ತದೆ. ಇಂದು, ವೃಶ್ಚಿಕ ರಾಶಿ  ಪ್ರವೇಶಿಸುವ ಶುಕ್ರ ಮತ್ತೆ ಡಿಸೆಂಬರ್ ತಿಂಗಳಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಶುಕ್ರನು  ಡಿಸೆಂಬರ್ 3 ರಂದು ಧನು ರಾಶಿಯಲ್ಲಿ ಮತ್ತು  ಡಿಸೆಂಬರ್  29  ರಂದು ಮಕರ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಶುಕ್ರ ಈ ರೀತಿ 2 ಬಾರಿ ಸಂಕ್ರಮಿಸುವುದರಿಂದ 4 ರಾಶಿಯವರಿಗೆ ಪ್ರಚಂಡ ಆರ್ಥಿಕ ಸಮೃದ್ಧಿ ಸಿಗಲಿದೆ. 

ಶುಕ್ರ ಸಂಕ್ರಮಣದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ : 
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಸಂಚಾರವು ಈ ರಾಶಿಯವರಿಗೆ ಹಣಕಾಸಿನ ಲಾಭವನ್ನು ನೀಡುತ್ತದೆ. ಆದಾಯ ಹೆಚ್ಚಾಗುತ್ತದೆ. ಉದ್ಯೋಗಿಗಳ  ವೇತನ ಹೆಚ್ಚಾಗಬಹುದು. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಹೊಸ ವ್ಯಾಪಾರ ಆರಂಭಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  

ಇದನ್ನೂ ಓದಿ : Chanakya Niti : ಪತಿಯಿಂದ ಈ 5 ವಿಷಯಗಳನ್ನು ಯಾವಾಗಲು ಮುಚ್ಚಿಡುತ್ತಾಳೆ ಪತ್ನಿ!

ಮಿಥುನ ರಾಶಿ : ಶುಕ್ರನ ಸಂಕ್ರಮಣವು ಮಿಥುನ ರಾಶಿಯವರಿಗೆ ಲಾಭವಾಗಲಿದೆ. ಆದಾಯ ಹೆಚ್ಚಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದರೂ ವೆಚ್ಚಗಳ ಹೆಚ್ಚಳದಿಂದಾಗಿ ಹಣ ಉಳಿಸುವುದು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. 

ಕರ್ಕಾಟಕ ರಾಶಿ : ಶುಕ್ರನ ರಾಶಿ ಬದಲಾವಣೆಯಿಂದ ಕರ್ಕಾಟಕ ರಾಶಿಯವರಿಗೆ ಲಾಭವಾಗಲಿದೆ. ಯಾವುದೇ  ರೀತಿಯ ವೃತ್ತಿ ಸಮಸ್ಯೆಯಿದ್ದರೂ ತಕ್ಷಣ ಪರಿಹಾರವಾಗಲಿದೆ. ಆದರೂ ಯಾರ ಮೇಲೂ ಕುರುಡು ನಂಬಿಕೆ ಬೇಡ.  ಜೀವನದಲ್ಲಿ ಐಷಾರಾಮಿ ವಸ್ತುಗಳು ಹೆಚ್ಚಾಗುತ್ತವೆ. ಪ್ರೀತಿ ಮತ್ತು ವೈವಾಹಿಕ ಜೀವನ ಉತ್ತಮವಾಗಿರಲಿದೆ. 

ಇದನ್ನೂ ಓದಿ : Gemstone : ರಾಹುವಿನ ಕೆಟ್ಟ ಪರಿಣಾಮಗಳಿಗೆ ಪರಿಹಾರ ನೀಡುತ್ತೆ ಈ ರತ್ನ..!

ಕನ್ಯಾ ರಾಶಿ : ಶುಕ್ರನ  ರಾಶಿ ಪರಿವರ್ತನೆ ಕನ್ಯಾ ರಾಶಿಯವರಿಗೆ ತುಂಬಾ ಮಂಗಳಕರವಾಗಿ ಸಾಬೀತಾಗಲಿದೆ. ಅವರ ಜೀವನದಲ್ಲಿ ಸಂತೋಷದ  ಹೊನಲು ಹರಿಯಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ತಾಯಿಯ ಸಹಾಯದಿಂದ ದೊಡ್ಡ ಸಮಸ್ಯೆ ನಿವಾರಣೆಯಾಗಲಿದೆ. ಆದಾಯ ಹೆಚ್ಚಲಿದೆ. ಅನಿರೀಕ್ಷಿತ ಹಣ ಗಳಿಸುವ ಸಾಧ್ಯತೆ ಇರುತ್ತದೆ.

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News