Shukra Rashi Parivartan: ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ

Shukra Rashi Parivartan: ಶುಕ್ರ ದೇವನು ಮೇ 23 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಬದಲಾವಣೆಯಿಂದ 5 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : May 19, 2022, 08:31 AM IST
  • ಶುಕ್ರನು ಮೇ 23 ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ
  • ಶುಕ್ರನ ಈ ರಾಶಿಚಕ್ರ ಬದಲಾವಣೆಯಿಂದಾಗಿ ಹಲವು ರಾಶಿಯವರಿಗೆ ಅದೃಷ್ಟವೇ ಬದಲಾಗುತ್ತದೆ.
  • ಮೇಷ ರಾಶಿಗೆ ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ.
Shukra Rashi Parivartan: ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ  title=
Venus Transit effects

ಶುಕ್ರ ರಾಶಿ ಪರಿವರ್ತನೆ ಪರಿಣಾಮ: ಶುಕ್ರ ಗ್ರಹವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಶುಕ್ರನು ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ರಾಶಿಚಕ್ರದ ಈ ಬದಲಾವಣೆಯಿಂದಾಗಿ ಹಲವು ರಾಶಿಯವರಿಗೆ ಅದೃಷ್ಟವೇ ಬದಲಾಗುತ್ತದೆ. ಹಲವರ ಜೀವನದಲ್ಲಿ ಮಹತ್ವದ ಬದಲಾವಣೆಗಳ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತದೆ. ಈ ಬಾರಿ ಶುಕ್ರನು ಮೇ 23 ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ, ಇದರಿಂದ ಯಾವ ರಾಶಿಯವರು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ತಿಳಿಯೋಣ...

ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ:
ಮೇಷ ರಾಶಿ: ಮೇಷ ರಾಶಿಗೆ ಶುಕ್ರನ ಪ್ರವೇಶ
ದಿಂದಾಗಿ ಈ ರಾಶಿಯವರಿಗೆ ಲಕ್ಷ್ಮಿಯ ಕೃಪೆಯಿಂದ ಜೀವನ ಸುಖಮಯವಾಗಲಿದೆ. ಆರ್ಥಿಕ ಭಾಗವು ಬಲವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ಖರ್ಚು ಕಡಿಮೆಯಾಗಲಿದೆ. ವಹಿವಾಟುಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ಧನು ರಾಶಿ: ಶುಕ್ರ ರಾಶಿ ಪರಿವರ್ತನೆಯಿಂದಾಗಿ ಧನು ರಾಶಿಯವರಿಗೆ ವ್ಯಾಪಾರ- ವಹಿವಾಟುಗಳಿಗೂ ಸಮಯ ಉತ್ತಮವಾಗಿದೆ. ಲಕ್ಷ್ಮಿಯ ಕೃಪೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆ ಮಾಡಲು ಉತ್ತಮ ಸಮಯ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹೊಸ ವಾಹನ ಖರೀದಿಸಬಹುದು.

ಇದನ್ನೂ ಓದಿ- ಇಷ್ಟಾರ್ಥ ಸಿದ್ಧಿಗಾಗಿ ಸಂಕಷ್ಟಿ ಚತುರ್ಥಿಯ ದಿನ ದರ್ಬೆಯ ಈ ಪರಿಹಾರ ಮಾಡಿ

ಈ ರಾಶಿಯವರಿಗೆ ಹೊಸ ವಾಹನ - ಮನೆ ಖರೀದಿಸುವ ಯೋಗ:
ಮಿಥುನ ರಾಶಿ:
ಮೇಷ ರಾಶಿಗೆ ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವ್ಯಾಪಾರ- ವಹಿವಾಟುಗಳಿಗೆ ಸಮಯವು ಮಂಗಳಕರವಾಗಿದೆ, ಆದರೆ ವ್ಯವಹಾರಗಳನ್ನು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಈ ಸಮಯದಲ್ಲಿ ಈ ರಾಶಿಯವರ ಮೇಲೆ ಮಾತೆ ಲಕ್ಷ್ಮಿಯವಿಶೇಷ ಕೃಪೆ ಇರುತ್ತದೆ. ಹಣಕಾಸಿನ ಪರಿಸ್ಥಿತಿಯು ಹೆಚ್ಚು ಉತ್ತಮವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಹೊಸ ಮನೆ ಅಥವಾ ವಾಹನ ಖರೀದಿಸುವ ಯೋಗವೂ ಇದೆ.

ಇದನ್ನೂ ಓದಿ- ಜ್ಯೇಷ್ಠ ಮಾಸದ ಮೊದಲ ಉಪವಾಸ ಯಾವಾಗ? ದಿನಾಂಕ, ಪೂಜೆ ಮುಹೂರ್ತ ಮತ್ತು ಮಹತ್ವ ತಿಳಿಯಿರಿ

ಈ ರಾಶಿ ಚಕ್ರದವರಿಗೆ ವ್ಯವಹಾರಕ್ಕೆ ಉತ್ತಮ ಸಮಯ:
ವೃಶ್ಚಿಕ ರಾಶಿ:
ವಹಿವಾಟುಗಳಿಗೆ ಸಮಯವು ಮಂಗಳಕರವಾಗಿರುತ್ತದೆ. ಲಕ್ಷ್ಮಿಯ ಕೃಪೆಯಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ಹಣದ ಲಾಭ ಇರುತ್ತದೆ. ಆದರೆ ಈ ವರ್ಷ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು.

ಕುಂಭ ರಾಶಿ: ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ವ್ಯಾಪಾರ ವರ್ಗದವರಿಗೆ ಈ ಸಮಯ ವರದಾನಕ್ಕಿಂತ ಕಡಿಮೆಯೇನಲ್ಲ. ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಹೊಸ ವಾಹನ ಅಥವಾ ಮನೆ ಖರೀದಿಗೆ ಸಮಯ ಅನುಕೂಲಕರವಾಗಿದೆ. ಈ ಸಮಯದಲ್ಲಿ ವಿತ್ತೀಯ ಲಾಭವಿದೆ, ಆದರೆ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News